ಅವ್ಯಕ್ತನ ದೀಪ
ಕನ್ನಡಿ , ಎಷ್ಟು ಚಂದ ಅಲ . ನಮ್ಮನ್ನ ನಾವು ಎಷ್ಟು ಪ್ರೀತುಸ್ತಿವಿ ಅನ್ನೋದು ಕನ್ನಡಿ ಇಂದಾನೆ ಗೊತ್ತಾಗೋದು..! ಕನ್ನಡಿ ಮುಂದೆ ನಿಂತರೆ ಪ್ರಪಂಚನೆ ಮರೆಯೋ ಹೆಣ್ಣು ಮಕ್ಕಳು . ಅಲಂಕಾರಕ್ಕೆ , ಅಹಂಕಾರಕ್ಕೆ , ಹೊಸತನಕ್ಕೆ, ಉಡುಪಿಗೆ , ಸೊಬಗಿಗೆ , ನಮ್ಮನ್ನೇ ನಾವು ನೋಡಿ ನಗೋಕೆ , ಬದಲಾಗೋಕೆ , ಬದಲಾಯಿಸೊಕೆ ಎಲ್ಲಕ್ಕೂ ಕನ್ನಡಿ ಬೇಕು.. ಇವತ್ತು ನನ್ನ ಜೀವನದಲ್ಲೂ ಒಂದು ವಿಶೇಷ ದಿನ. ಅದಕ್ಕೆ ನಾನು ಸಹ ಕನ್ನಡಿ ಮುಂದೆ ನಿಂತಿದಿನಿ. ಇವತ್ತು ಯಾಕೋ ನನಗೆ ಕನ್ನಡಿ ಮೇಲೆ ಸ್ವಲ್ಪ ಜಾಸ್ತಿನೇ ಪ್ರೀತಿಯಾಗಿತ್ತು. ಕನ್ನಡಿಗಿಂತ ಅದರೊಳಗಿದ್ದ ನನ್ನ ಪ್ರತಿಬಿಂಬದ ಮೇಲೆ ಇನ್ನೂ ಹೆಚ್ಚು ಪ್ರೀತಿಯಾಗಿತ್ತು. ಮೊದಲು ನಮ್ಮನ್ನ ನಾವು ಪ್ರೀತಿಸಿದರೆ ತಾನೇ ಬೇರೆಯವರು ನಮ್ಮನ್ನ ಪ್ರೀತ್ಸೋದು . ಕನ್ನಡಿ ಮುಂದೆ ನಿಂತು "ಲೋ ಅವ್ಯಕ್ತ , ಇವತ್ ನೀನ್ ಚೆನ್ನಾಗ್ ಕಾಣ್ಲೇ ಬೇಕು” ಅಂತ ಮೀಸೆಯನ್ನ ತುಂಬಾ ಜೋಪಾನವಾಗಿ ಸೆಟ್ ಮಾಡ್ಕೊಂಡು, ನನ್ನ ಬಾಡಿನ ಫಿಟ್ ಇದೆ ಅಲ್ವಾ ಅಂತ ಪದೇ ಪದೇ ಫೀಲ್ ಮಾಡ್ಕೊತಿದ್ದೆ. ಅದೂ ಅಲ್ಲದೇ ಇವತ್ತು ಒಂದೇ ದಿನ ಎರಡೆರಡು ಸಲ ಸ್ನಾನ ಮಾಡಿದ್ದೆ. ಯಾವ ಬಟ್ಟೆ ಚೆನ್ನಾಗ್ ಕಾಣುತ್ತೆ ಅಂತ ಕೆದಕಿ , ಕಿತ್ತಾಕಿ , ಹುಡುಕಿ ಅಚ್ಚಕಟ್ಟಾಗಿರೋ ಒಂದು ಟಿ-ಶರ್ಟ್ ಮತ್ತೆ ಪ್ಯಾಂಟ್ ನ ಸೈಡ್ ...