ಅವ್ಯಕ್ತನ ದೀಪ
ಕನ್ನಡಿ ಮುಂದೆ ನಿಂತರೆ ಪ್ರಪಂಚನೆ ಮರೆಯೋ ಹೆಣ್ಣು ಮಕ್ಕಳು . ಅಲಂಕಾರಕ್ಕೆ , ಅಹಂಕಾರಕ್ಕೆ , ಹೊಸತನಕ್ಕೆ, ಉಡುಪಿಗೆ , ಸೊಬಗಿಗೆ , ನಮ್ಮನ್ನೇ ನಾವು ನೋಡಿ ನಗೋಕೆ , ಬದಲಾಗೋಕೆ , ಬದಲಾಯಿಸೊಕೆ ಎಲ್ಲಕ್ಕೂ ಕನ್ನಡಿ ಬೇಕು..
ಇವತ್ತು ನನ್ನ ಜೀವನದಲ್ಲೂ ಒಂದು ವಿಶೇಷ ದಿನ. ಅದಕ್ಕೆ ನಾನು ಸಹ ಕನ್ನಡಿ ಮುಂದೆ ನಿಂತಿದಿನಿ.
ಇವತ್ತು ಯಾಕೋ ನನಗೆ ಕನ್ನಡಿ ಮೇಲೆ ಸ್ವಲ್ಪ ಜಾಸ್ತಿನೇ ಪ್ರೀತಿಯಾಗಿತ್ತು. ಕನ್ನಡಿಗಿಂತ ಅದರೊಳಗಿದ್ದ ನನ್ನ ಪ್ರತಿಬಿಂಬದ ಮೇಲೆ ಇನ್ನೂ ಹೆಚ್ಚು ಪ್ರೀತಿಯಾಗಿತ್ತು.
ಮೊದಲು ನಮ್ಮನ್ನ ನಾವು ಪ್ರೀತಿಸಿದರೆ ತಾನೇ ಬೇರೆಯವರು ನಮ್ಮನ್ನ ಪ್ರೀತ್ಸೋದು .
ಕನ್ನಡಿ ಮುಂದೆ ನಿಂತು "ಲೋ ಅವ್ಯಕ್ತ , ಇವತ್ ನೀನ್ ಚೆನ್ನಾಗ್ ಕಾಣ್ಲೇ ಬೇಕು” ಅಂತ ಮೀಸೆಯನ್ನ ತುಂಬಾ ಜೋಪಾನವಾಗಿ ಸೆಟ್ ಮಾಡ್ಕೊಂಡು, ನನ್ನ ಬಾಡಿನ ಫಿಟ್ ಇದೆ ಅಲ್ವಾ ಅಂತ ಪದೇ ಪದೇ ಫೀಲ್ ಮಾಡ್ಕೊತಿದ್ದೆ. ಅದೂ ಅಲ್ಲದೇ ಇವತ್ತು ಒಂದೇ ದಿನ ಎರಡೆರಡು ಸಲ ಸ್ನಾನ ಮಾಡಿದ್ದೆ. ಯಾವ ಬಟ್ಟೆ ಚೆನ್ನಾಗ್ ಕಾಣುತ್ತೆ ಅಂತ ಕೆದಕಿ , ಕಿತ್ತಾಕಿ , ಹುಡುಕಿ ಅಚ್ಚಕಟ್ಟಾಗಿರೋ ಒಂದು ಟಿ-ಶರ್ಟ್ ಮತ್ತೆ ಪ್ಯಾಂಟ್ ನ ಸೈಡ್ ಅಲ್ ಇಡ್ಕೊಂಡ್ ಯೋಚ್ನೆ ಮಾಡ್ದೆ ....
ಯಾಕೋ ಮನಸ್ಸು ಒಪ್ಲಿಲ್ಲ. ಮತ್ತೆ ಹೋಗಿ ಇನ್ನೂ ಒಂದ್ ಸ್ನಾನ ಮಾಡ್ಕೊಂಡ್ ಬಂದೆ . ಇವಾಗ ನೆಮ್ಮದಿ ಆಯ್ತು . ಮತ್ತೆ ಕನ್ನಡಿ ಮುಂದೆ ನಿಂತು ಒಳ್ಳೆ ಹೀರೋ ತರ, ತರ ಏನೂ ಹೀರೋನೇ ಅಲ್ವಾ..! ತೆಗೆದು ಇಟ್ಟಿದ್ದ ಬಟ್ಟೆ ಹಾಕೊಂಡು, ತಲೆ ಬಾಚ್ಕೊಂಡು, ಬ್ಯಾಗ್ ರೆಡಿ ಮಾಡ್ಕೊಂಡೇ. ಒಂದು ನೀರಿನ ಬಾಟಲ್ , ಚಳಿಗೆ ಒಂದು ಕ್ಯಾಪ್, ಆಮೇಲೇ... ಏನು ಇಲ್ಲ ಅಷ್ಟೇ! . ಇಷ್ಟೆಲ್ಲಾ ರೆಡಿಯಾದ ಮೇಲೆ ಹೊಟ್ಟೆ ತುಂಬಾ ಊಟ ಮಾಡ್ಕೊಂಡು ಬಸ್ಸ್ಟ್ಯಾಂಡ್ ಕಡೆ ಪಯಣ ಶುರು ಮಾಡ್ದೆ . ಇನ್ನೇನು ಬಸ್ ಸ್ಟ್ಯಾಂಡ್ ಸೇರಬೇಕು... ಏನೋ ಬಿಟ್ಟು ಬಂದಿದಿನಿ ಅನ್ನಿಸ್ತು ಮತ್ತೆ ಹಿಂದೆ ಹೋಗಿ ತೆಗೆದುಕೊಂಡು ಬರೊ ಅಷ್ಟು ತಾಳ್ಮೆ ಬೇಕಲ್ಲ.. ಈ ಹಾಳಾದ್ ಮರೆವಿಗೆ ಕೊನೆನೇ ಇಲ್ಲ ಅಂತ ಅನ್ಕೊಂಡು, ನನಗೆ ನಾನೇ ಉಕ್ಕೂಂಡು ಶಿವಮೊಗ್ಗದ ಬಸ್ ಸ್ಟ್ಯಾಂಡ್ ಅಲ್ಲಿ ಬಸ್ಸಿಗೆ ಕಾಯ್ಕೊಂಡು ನಿಂತುಕೊಂಡೆ .
ನಿಂತ ಎರಡು ನಿಮಿಷಕ್ಕೆ ಚಿಕ್ಕಮಗಳೂರಿಗೆ ಹೋಗುವ ಬಸ್ಸ್ ಬಂತು. ಬಸ್ಸ್ ಹತ್ತಿ ಮುಂದೆ ಹೋಗಿ ಡ್ರೈವರಣ್ಣನ ಹಿಂದಿನ ಸೀಟಲ್ಲಿ ಕುಳಿತ್ಕೊಂಡೆ .
ಆವಾಗಿನ್ನೂ ಮಧ್ಯಾಹ್ನ . ನಮ್ಮೂರಲ್ಲಿ ಹಸಿರಿನ ಸಿರಿಗೇನು ಕಡಿಮೆ ಇರಲಿಲ್ಲ.. ಜೊತೆಗೆ ರವಿಯ ಕಿರಣಗಳಿಗೆ ಕೌಂಟರ್ ಕೊಡೊಕು ಸಹ ಆಗ್ತಿರ್ಲಿಲ್ಲ.
ಮಟಮಟ ಮಧ್ಯಾಹ್ನ ಬಿಸಿ ಬಿಸಿ ಊಟ ಮಾಡಿ, ಮೂರ್ ಮೂರ್ ಸಲ ಸ್ನಾನ ಮಾಡಿ . ದೊರೆ ಮೂಮ್ಮಗನ್ ತರ ರೆಡಿಯಾದ್ರು ಕೂಡ..... ರವಿಯ ಕಿರಣಕ್ಕೆ ಸೋತು ಸುಸ್ತಾಗಿದ್ದೆ .
ಅಂತೂ ಕೂತ ಐದು ನಿಮಿಷಕ್ಕೆ ಬಸ್ಸ್ ಹೊರಟಿತು. ಶಿವಮೊಗ್ಗದ ಬಸ್ಸ್ಟ್ಯಾಂಡ್ ಬಿಟ್ಟ ತಕ್ಷಣವೇ ಮನಸ್ಸಲ್ಲಿ ಏನೋ ತಳಮಳ , ಸಂತೋಷ, ಜೊತೆಗೊಂದಿಷ್ಟು ದುಗುಡುತನ . ವ್ಯವಸ್ಥಿತವಾದ ಮನಸ್ಸು ವ್ಯಸ್ತ ವ್ಯಸ್ತವಾಗಿ ನರಳುತ್ತಿತ್ತು. ಬಸ್ಸ್ ಹೊರಡುತ್ತಿದ್ದಂತೆ ಆಯಾಸ ಕಡಿಮೆ ಅನ್ನುಸ್ತಾ ಹೋಯಿತು. ದಾರಿ ಪಕ್ಕದಲ್ಲಿ ಹಾದುಹೋಗುವ ಅಂಗಡಿ-ಮುಂಗಟ್ಟುಗಳು, ಬೀಸೋ ಗಾಳಿಗೆ ಬಿಸಿಯಾದ ಹೃದಯ ಮೆಲ್ಲಗೆ.... ತಿಳಿಗಾಳಿಗೆ ತಿಳಿ ಆಗುತ್ತಾ ಹೋಯಿತು. ಆದರೆ ಮನದೊಳಗೆ ತಲ್ಲಣ ಶುರುವಾಗಿತ್ತು..
ಅಷ್ಟರಲ್ಲಿ ಕಂಡಕ್ಟರ್ “ಯಾರ್ರೀ.. ಟಿಕೆಟ್ ಟಿಕೆಟ್ ” ಅಂತ ಬಂದ . “ಎಲ್ಲಿಗ್ರೀ ಟಿಕೆಟ್” ಅಂತ ತೋಳನ್ನ ಮುಟ್ಟಿ ಎಚ್ಚರಿಸಿದಾಗ ಮತ್ತೆ ವಾಸ್ತವಕ್ಕೆ ಬಂದು, ''ಒಂದು ಚಿಕ್ಕಮಗಳೂರು'' ಅಂತ ಹೇಳಿ ಟಿಕೆಟ್ ಇಸ್ಕೊಂಡೆ .
ಇಲ್ಲಿಂದ ಎರಡೂವರೆ ಮೂರು ತಾಸಿನ ಪಯಣ ಚಿಕ್ಕಮಗಳೂರು . ಒಂದು ಸಲ ಉಸಿರನ್ನ ದೀರ್ಘವಾಗಿ ಎಳೆಕೊಂಡು ಕೂತಿರುವ ಭಂಗಿಯಲ್ಲಿ ಬಟ್ಟೆ ಏನಾದರೂ ಕೊಳೆ ಆಗಿದ್ಯಾ.. ಇಲ್ಲವಾ ಅಂತ ಕಂಫರ್ಮ್ ಮಾಡಿಕೊಂಡು ಮತ್ತೆ ಸರಿಯಾಗಿ ಕೂತುಕೊಂಡೆ .
ನನ್ನ ಪಕ್ಕದ ಸೀಟಿನಲ್ಲಿ ಇಬ್ಬರು ಹುಡುಗೀರು “ಅಲ್ನೋಡು..! ಆ ಅಡಿಕೆ ತೋಟ, ಆ ಬೆಟ್ಟ...." ಅಂತ ಅಮಾವಾಸ್ಯೆ ರಾತ್ರೀಲಿ ನಕ್ಷತ್ರ ಕಂಡವರ ಹಾಗೆ, ಹುಣ್ಣಿಮೆಯ ಚಂದಿರನ ತರ ನಗುತ್ತಾ ಕುಳಿತಿದ್ರು.
ಅವರ ಈ ಸಲಿಗೆ , ಸ್ನೇಹ , ಪ್ರೀತಿ , ವಿಶ್ವಾಸ ನನ್ನನ್ನ ಕೆಲವು ತಿಂಗಳು ಹಿಂದಿನ ನೆನಪಿನ ಹೊಳೆಗೆ ಕರೆದೊಯ್ಯಿತು .
ಆವಾಗ ನಾನಿನ್ನು ಶಿವಮೊಗ್ಗಕ್ಕೆ ಬಂದಿರಲಿಲ್ಲ. ಬೀದರ್ ನ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಕೆಲ್ಸಾನು ಚೆನ್ನಾಗಿತ್ತು. ಒಳ್ಳೆ ಸಂಬಳ ಕೂಡ ಬರ್ತಿತ್ತು . ಯಾವುದೇ ಒತ್ತಡ ಇರಲಿಲ್ಲ . ಮನಸ್ಸು ಯಾವಾಗಲೂ ನೆಮ್ಮದಿಯಿಂದ ಇರುತ್ತಿತ್ತು. ಸಮಯ ಸಿಕ್ಕಾಗೆಲ್ಲಾ ಮನೆಯವರೊಂದಿಗೆ ಮಾತುಕತೆ , ಫ್ರೆಂಡ್ಸ್ ಜೊತೆ ಹರಟೆ..... ಹೀಗೆ ಅತಿ ಹೆಚ್ಚು ಸಮಯವನ್ನು ಸ್ನೇಹಿತರು ಅನ್ನಿಸ್ಕೊಂಡವರಿಗೆ ಕೊಡುತ್ತಿದ್ದೆ . ಯಾವಾಗಲಾದರೂ ಸಮಯ ಸಿಕ್ಕಾಗ ನನ್ನ ಬಾಲ್ಯ ಸ್ನೇಹಿತೆ ಸುಕನ್ಯಾ ಜೊತೆ ಫೋನ್ ನಲ್ಲಿ ಮಾತಾಡ್ತಿದ್ದೆ.
ಸುಕನ್ಯಾ ಸ್ಮಾರ್ಟ್ ಗರ್ಲ್. ಓದೋದ್ರಲ್ಲಿ ಯಾವತ್ತು ಮುಂದೆ. ಆಕೆ ಸೊಗಸಾದ ಹಳ್ಳಿ ಮನೆತನದಿಂದ ಬಂದವಳು. ಸುಸಂಸ್ಕೃತಳು ಮತ್ತು ತಿಳುವಳಿಕೆ ಇದ್ದ ಹುಡುಗಿಯಾಗಿದ್ಲು. ಈಗ ಅವಳಿಗೆ ಮದುವೆಯಾಗಿ ಚಿಕ್ಕಮಗಳೂರಿನ ಯಾವುದೋ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸ ಮಾಡ್ತಿದ್ದಾಳೆ . ಯಾವಾಗ್ಲಾದ್ರೂ ಫ್ರೀ ಇದ್ರೆ “ಅವ್ಯಕ್ತ, ಹೇಗಿದ್ದೀಯಾ..? ಹೇಗೆ ನಡಿತಾ ಇದೆ ಕೆಲಸ” ಅಂತೆಲ್ಲಾ ಕುಶಲ ಕ್ಷೇಮ ವಿಚಾರಿಸ್ತಿದ್ಲು . ಅವಳ ಜೊತೆ ಒಂದು ಒಳ್ಳೆ ಸ್ನೇಹ ಸಂಪಾದನೆ ಮಾಡಿದ್ದೆ . ಒಂದು ದಿನ ಅವಳ ಫೋನ್ ನಿಂದ ಒಂದು ಫೋಟೋ ಬಂತು .
ನಾನದನ್ನ ನೋಡಿ “ಯಾರಿದು..? ಸುಕನ್ಯಾ, ಒಳ್ಳೆ ಓಲ್ಡ್ ಮೂವಿ ಹೀರೋಯಿನ್ ತರ ಇದ್ದಾರೆ..!” ಅಂದೆ . ಅದಕ್ಕೆ ಅವಳು “ಅವ್ಯಕ್ತ, ನೋಡು ಹೇಗಿದ್ದಾರೆ ನಮ್ ಮ್ಯಾಮ್, ತುಂಬಾ ಚೆನ್ನಾಗಿದ್ದಾರೆ ಅಲ್ವಾ..?” ಅಂತ ಕೇಳಿದ್ಲು .
ಅದಕ್ಕೆ ನಾನು “ಹೌದು ಬಿಡಪ್ಪ... ನಿಮ್ ಫ್ರೆಂಡ್ಸ್ ಏನು, ಎಲ್ಲಾ ಸಕ್ಕತ್ತಾಗಿ ಇರ್ತಾರೆ.. ಸ್ವಲ್ಪ ಕೆಲಸ ಇದೆ” ಅಂತ ಹೇಳಿ ಬಾಯ್ ಅಂದೆ .
ಹೀಗೆ ಎರಡು ಮೂರು ದಿನಗಳಾದ ಮೇಲೆ ಒಂದು ದಿನ ಕಾಲ್ ಮಾಡಿದ್ಲು ಸುಕನ್ಯಾ .
ನಾನು ಮತ್ತೆ ಸುಕನ್ಯಾ ಮಾತನಾಡುತ್ತಿರಬೇಕಾದರೆ ಸಡನ್ನಾಗಿ ಇನ್ನೊಬ್ಬರ ವಾಯ್ಸ್ ಕೇಳಿಸ್ತು “ಯಾರೇ.. ಅದು” ಅಂತ ಕೇಳ್ದೆ. ಅವಳು “ನಮ್ಮ ಮ್ಯಾಮ್” ಅಂತ ಹೇಳಿ , ಜೊತೆಗೆ ಮಾತಾಡ್ತೀಯ ಅಂತ ಸಹ ಕೇಳಿದ್ಲು . ನಾವು ಗೊತ್ತಲ್ಲ.. ಹುಡುಗುರ್ಗೆ ಇಂತಹ ಚಾನ್ಸ್ ಸಿಗೋದೆ ಕಡಿಮೆ, ಒಳ್ಳೆ ಟಿವಿಎಸ್ ಬೈಕ್ ಗೆ ಬುಲೆಟ್ ಇಂಜಿನ್ ಹಾಕ್ಸಿದ್ ರೀತಿ ಆಯ್ತು .
“ಹೂ.. ಕೊಡು ಮಾತಾಡ್ತೀನಿ” ಅಂದೆ .
ಅಬ್ಬಬ್ಬಾ ಅಂದ್ರೆ ಒಂದು 30 ಸೆಕೆಂಡ್ ಮಾತಾಡಿದ್ದೆ. ವಾಯ್ಸ್ ಕೂಡ ಇಷ್ಟ ಆಗ್ಲಿಲ್ಲ . ಮಾತಾಡಿದ್ದು ಏನು ಸಹ ಅರ್ಥ ಆಗ್ಲಿಲ್ಲ. ಯಾಕಂದ್ರೆ ಅವತ್ತು ನೆಟ್ವರ್ಕ್ ಅಷ್ಟು ಸರಿಯಾಗಿ ಸಿಗ್ತಿರ್ಲಿಲ್ಲ .
ಹೀಗೆ .....ಸ್ವಲ್ಪ ದಿನಗಳಾದ ಮೇಲೆ ಒಂದ್ ಅಸೈನ್ಮೆಂಟ್ ಮೇಲೆ ಒಂದು ಹಳ್ಳಿಗೆ ಬಂದಿದ್ದೆ . ಊಟಕ್ಕೆ ಅಂತ ಹೊರಗೆ ಬಂದಾಗ ನಾನೇ ಸುಕನ್ಯಾಗೆ ಫೋನ್ ಮಾಡ್ದೆ . ಅವಳು ತಕ್ಷಣ “ನಾನು ಬ್ಯುಸಿ ಇದಿನಿ , ನಮ್ ಮ್ಯಾಮ್ ಜೊತೆ ಮಾತಾಡ್ತೀಯಾ ಫ್ರೀ ಇದಾರೆ” ಅಂತ ಕೇಳಿದ್ಲು..... ನನಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನೋತರ ಆಯ್ತು!.
ನಾನು “ಹೂ ಕೊಡು” ಅಂದೆ ಇವಾಗ..... ಫಾರ್ ದಿ ಫಸ್ಟ್ ಟೈಮ್.. ಸ್ವಚ್ಛವಾಗಿ ಇಚ್ಛೆಯಿಂದ ಮನಸ್ಸು ಪೂರ್ತಿ ತೃಪ್ತಿಯಾಗುವಷ್ಟು ಅವರ ಜೊತೆ ಮಾತಾಡ್ದೆ.
ಅಷ್ಟಕ್ಕೂ.. ಅವರ ಹೆಸರೇನು ಅಂತಿದಿರಾ..? ಆಕೆಯ ಹೆಸರು ದೀಪ , ಅವರ ಫೋಟೋ ನೋಡಿದ್ದ ಮನಸ್ಸು ಹೇಳ್ತಿತ್ತು.. ತುಂಬಾ ಸುಂದರವಾಗಿದೆ ಇವರ ರೂಪ, ನಾವು ಇಷ್ಟೊಂದು ಮಾತಾಡ್ತಾ ಇರೋದು ನೋಡಿ ಸುಕನ್ಯಾ ಗೆ ಬರುತ್ತಿತ್ತು ಅನ್ಸುತ್ತೆ ಅಲ್ಪಸ್ವಲ್ಪ ಕೋಪ.. .
ಅವರು ಉತ್ತರ ಕನ್ನಡ ಭಾಷೆಯಲ್ಲಿ ಮಾತನಾಡಿದ ಶೈಲಿ ನನಗೆ ಬಹಳ ಇಷ್ಟ ಆಯಿತು. ಅವರು ಹೇಳಿದ್ರು “ನಾ ಓದಿರೋದು ಬರೀ 10ನೇ ಕ್ಲಾಸ್ ರೀ..” ಅಂತ. ನಾನ್ ಕೇಳ್ದೆ “ಅಲ್ಲಾ ರೀ... ಬರೀ ಹತ್ತನೇ ಕ್ಲಾಸ್ ಓದಿದೀನಿ ಅಂತೀರಾ , ಮತ್ತೆ ಟೀಚರ್ ಹೇಗಾದ್ರಿ” ಆವಾಗ ಗೊತ್ತಾಯ್ತು ಅವರು ಕಂಪ್ಯೂಟರಲ್ಲಿ ಮಾಸ್ಟರ್ ಪೀಸ್ ಅಂತ.
ಸ್ಕೂಲಲ್ಲಿ ಕ್ಲರ್ಕ್ ಅಂಡ್ ಕನ್ನಡ ಟೀಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅವತ್ತು ಅನ್ನಿಸ್ತು ನನಗೆ, ದುಡಿಬೇಕು ಅಂದ್ರೆ ... ಛಲ ಬೇಕು ಡಿಗ್ರಿ ಸರ್ಟಿಫಿಕೇಟ್ ಅಲ್ಲ ಅಂತ .
ಅವರು ಸಹ ನನ್ನ ಬಗ್ಗೆ ಕೇಳಿದ್ರು . ನಾನು ಸಹ ನನ್ನ ಬಗ್ಗೆ ಹೇಳೋದಕ್ಕೆ ಶುರುಮಾಡಿದೆ .
ನನ್ನ ಹೆಸರು ಅವ್ಯಕ್ತ , ನಿಮಗೆ ತುಂಬಾ ವಿಚಿತ್ರ ಅನ್ನಿಸಬಹುದು ಏನಿದು ಅವ್ಯಕ್ತ ಅಂತ ಅಂದ್ರೆ ನನಗೂ ಸಹ ಬಹಳ ಜನಕ್ಕೆ ಹೇಳಿ ಹೇಳಿ ಸಾಕಾಗಿದೆ . ಅವ್ಯಕ್ತ ಅಂದ್ರೆ INCOMPRESSIBLE ನನ್ನನ್ನ ಯಾರೂ ಸಹ ಕಂಪ್ರೆಸ್ ಮಾಡೋದಕ್ಕೆ ಆಗೋದಿಲ್ಲ . ಅಥವಾ ಅಸ್ಪಷ್ಟ , ಸುಪ್ತ , ಗುಪ್ತ , ಅಡಗಿರುವ , ಅಪ್ರಕಾಶ... ಎನ್ ಏನೊ ಇದೆ . ಅರ್ಥ ಆಗೋ ಹಾಗೆ ಹೇಳ್ಬೇಕು ಅಂದ್ರೆ ವ್ಯಕ್ತಪಡಿಸೊಕೆ ಆಗ್ದೆ ಇರೋನು ಅಂತಾ...
ನಿಮಗೆ ಗೊತ್ತಾ ಇದು ಕೃಷ್ಣನ ಹೆಸರಂತೆ ಈ ಹೆಸರು ನಮ್ಮ ತಾತ ನನಗೆ ಇಟ್ಟಿರೊದು .
ನಾನ್ ಮಾಡಿರೋದು ಬಿಎ . ಇವಾಗ ಅಲ್ಲಿ ಇಲ್ಲಿ ಅಂತ ಹಳ್ಳಿಗಳಲ್ಲಿ ಪ್ರಾಜೆಕ್ಟ್ ಮಾಡ್ಕೊಂಡು ಜೀವನ ನಡೆಸ್ತಿದೀನಿ . ಪ್ರಾಜೆಕ್ಟ್ ಅಂದರೆ ಏನೇನೋ ತಿಳ್ಕೊಂಡು ತಲೆ ಕೆಡಿಸ್ಕೋಬೇಡಿ . ಹಳ್ಳಿ ಜೀವನಾನ ಡಾಕ್ಯುಮೆಂಟ್ ಮಾಡ್ತೀವಿ . ಅಲ್ಲಿ ಬೆಳೆಯುವ ಬೆಳೆ , ಆ ಊರಿನ ನಾಟಿ ವೈದರು , ಅಲ್ಲಿನ ಬೆಳೆಗಳ ರೋಗ , ಒಂದು ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಹಳ್ಳಿಗಳು ಬರತವೆ .....ಹೀಗೆ ಏನೇನೋ ಇದೆ . ಅವೆಲ್ಲ ನಿಮಗೇನ್ ಬೇಡ ನಿಮಗಿಷ್ಟು ಸಾಕು .
ಹೀಗೆ ಅವರ ಜೊತೆ ಬಹಳ ಹೊತ್ತು ಮಾತಾಡ್ದೆ . ಅವರನ್ನ ರೀ.. ರೀ.. ಅಂತ ಕರಿತಾ ಇದ್ರೆ ಮನಸ್ಸಿಗೆ ಏನೋ ಒಂಥರಾ ಖುಷಿ ಆಗ್ತಿತ್ತು..
ಒಂದು ಬ್ಯಾಡ್ ನ್ಯೂಸ್ ಏನು ಅಂದ್ರೆ , ಅವತ್ತು ಅವರತ್ರ ಅಷ್ಟೊತ್ತೆಲ್ಲಾ ಮಾತಾಡಿದ್ರು ಅವ್ರ ಫೋನ್ ನಂಬರ್ ಇಸ್ಕೊಳ್ಳಿಲ್ಲ . ಆದರೂ ಸಹ ಅವತ್ತು ನಾನು ಅವರ ಜೊತೆ ಮಾತಾಡಿದ ಎಷ್ಟೋ ಕ್ಷಣಗಳು ನನಗೆ ಖುಷಿ ಕೊಟ್ಟಿ ಎಲ್ಲೆಲ್ಲೋ ಕರೆದೊಯ್ಯಿತು . ಅವತ್ತು ರಾತ್ರಿ ವಾಪಸ್ ಬೀದರ್ ಗೆ ಬಂದು ಮಲಗಿದಾಗ ....ದೀಪ ಅವರ ರೂಪ ಬಹಳ ಕಾಡ್ತಿತ್ತು ಇಷ್ಟೆಲ್ಲಾ ಆದಮೇಲೂ ನಿದ್ದೆ ಬರುತ್ತಾ...? ಬರ್ಲಿಲ್ಲ!.
ಹೀಗೇ ಅಮಾವಾಸ್ಯೆಗೋ.. ಹುಣ್ಣಿಮೆಗೋ.. ಸುಕನ್ಯಾಗೆ ಫೋನ್ ಮಾಡಿ ಮಾತಾಡುತ್ತಿದ್ದ ನಾನು ದೀಪ ಅವರ ದೆಸೆಯಿಂದ ಡೈಲಿ ಫೋನ್ ಮಾಡೋಕೆ ಶುರು ಮಾಡ್ಡೆ.
“ ಏನ್ ಸುಕನ್ಯಾ ಚೆನ್ನಾಗಿದ್ದೀಯಾ , ಕ್ಲಾಸ್ ತಗೊಂಡ್ ಇಲ್ವಾ..... ನೀನು ಬ್ಯುಸಿ ಇರ್ತೀಯ ಮ್ಯಾಮ್ ಫ್ರೀ ಇರಬಹುದೇನೋ ಕೊಡು ಮಾತಾಡ್ತೀನಿ” ಅಂತ ಡೈಲಿ ಭಿಕ್ಷೆ ಬೇಡೋದೇ ಆಗ್ತಿತ್ತು . ಅವರ ಜೊತೆ ಮಾತನಾಡುವಾಗ ಸಮಯ ಹೋಗ್ತಿದ್ದೇ ಗೊತ್ತಾಗ್ತಿರ್ಲಿಲ್ಲ. ಅವರಿವರ ಬಗ್ಗೆ ಇತಿಹಾಸ ಹೇಳಿಕೊಂಡು... ನನ್ ಬಗ್ಗೆ ನಾನೇ ಸ್ವಲ್ಪ ಬಿಲ್ಡಪ್ ತಗೊಂಡು... ನೈಸಾಗಿ ಅವರ ಫೋನ್ ನಂಬರ್ ಕೇಳ್ತಿದ್ದೆ ಆದರೆ... ಅಷ್ಟೇ ನೈಸಾಗಿ ಅವರು ಜಾರ್ಕೊತಿದ್ರೆ ವಿನಹ ಫೋನ್ ನಂಬರ್ ಮಾತ್ರ ಕೊಡ್ತಿರ್ಲಿಲ್ಲ .
ಒಂದು ದಿನ . ಅಂತೂ ಇಂತೂ ಸುಕನ್ಯಾನ ನೈಸ್ ಮಾಡಿ , ಕನ್ವೆನ್ಸ್ ಮಾಡಿ ಅವರ ನಂಬರ್ ಕೊಡ್ಸು ಅಂತ ಒಪ್ಪುಸ್ದೆ . ಅವತ್ತು ಸೂರ್ಯ ಯಾವ ಕಡೆ ಹುಟ್ಟಿದ್ನೊ ಗೊತ್ತಿಲ್ಲ . ನನ್ನ ಎಲ್ಲಾ ಮಾತಿಗೂ ದೀಪ ಅವರು ಬೆರಗಾಗಿ ಅವರ ನಂಬರ್ ಕೊಟ್ಟೇ ಬಿಟ್ರು..!
ಜೊತೆಗೆ ಒಂದು ಷರತ್ತನ್ನು ಸಹ ಹಾಕಿದ್ರು . ಅದು “ನೀವಾಗೆ ಯಾವತ್ತು ಸಹ ಫೋನ್ ಮಾಡಬಾರದು ನಾನ್ ಮಾಡಿದಾಗ ಮಾತ್ರ ಮಾತಾಡಬೇಕು” ಅಂತ . ನಾನು ನಂಬರ್ ಸಿಕ್ಕ ಖುಷಿಗೆ “ಸರಿ” ಅಂದೆ.
ಹೀಗೆ ಒಂದು ದಿನ . ರೂಮ್ನಲ್ಲಿ ಅಸೈನ್ಮೆಂಟ್ ಬಗ್ಗೆ ಚರ್ಚೆ ಮಾಡ್ತಾ ಇದ್ವಿ . ಅವಾಗ ಅನ್ನಿಸ್ತು ದೀಪಾವರ್ನ ಇವತ್ತು ಮಾತನಾಡಿಸಬೇಕಿತ್ತು ಅಂತ.
ಹೀಗಂತ ಯೋಚನೆ ಮಾಡಿ ಐದು ಸೆಕೆಂಡ್ ಕೂಡ ಆಗಿರಲಿಲ್ಲ , ಅವರದೇ ಫೋನ್ ಬಂತು...... ಕ್ಷಣಮಾತ್ರ ನನಗೆ 'ಇದೇನು ಕನಸೋ.. ನನಸೋ'.. ಅಂತ ದಂಗಾಗಿ ಹೋದೆ . ಮತ್ತೆ ವಾಸ್ತವಕ್ಕೆ ಬಂದು ಫೋನ್ ರಿಸೀವ್ ಮಾಡ್ದೆ..... ಸಿಕ್ಕಾಪಟ್ಟೆ ಜೋರಾಗಿ ಯಾವುದೋ ಸಾಂಗ್ ಕೇಳ್ತಿತ್ತು . ಆ ಸಾಂಗ್ನ ಸೈಡಲ್ಲಿ ಮೆಲ್ಲಗೆ ದೀಪಾವರು ಮಾತಾಡುತ್ತಿದ್ದರು ಅವತ್ತು ಅಷ್ಟು ಡಿಸ್ಟರ್ಬೆನ್ಸ್ ಅಲ್ಲೂ ಸಹ ನಾನು ಮತ್ತೆ ದೀಪಾವರು ಒಂದುವರೆ ಗಂಟೆ ಮಾತಾಡಿದ್ವಿ .
ಏನ್ ಮಾತಾಡಿದ್ವಿ ಒಂದೂ ನೆನಪಿಲ್ಲ. ಆದರೆ ಮಾತಾಡಬೇಕು ಅಷ್ಟೇ. ಅವತ್ತು ಅವರ ಜೊತೆ ಮಾತಾಡಿದ್ದು.... ನನ್ನೆದೆಯಲ್ಲಿ ಏನೋ ಸಂತೋಷ , ನೆಮ್ಮದಿ.... ಎಂದೂ ಆಗದ ಖುಷಿ .
ಹಾಗೆ ಮಲ್ಕೊಂಡು ಸುಕನ್ಯಾ ಜೊತೆ ಅವರು ನಿಂತಿದ್ದ ಅವರ ಫೋಟೋ ನೋಡ್ತಿದ್ದೆ . ಅದನ್ನ ಫಸ್ಟ್ ಟೈಮ್ ನೋಡಿದ್ದಕ್ಕು ಈಗ ನೋಡ್ತೀರೊದಕ್ಕು ಏನೊ ವಿಶೇಷ .
ಸುಕನ್ಯಾಳ ಹೆಗಲ ಮೇಲೆ ಕೈ ಹಾಕಿಕೊಂಡು ಮಂದಹಾಸ ಬೀರುತ್ತಿದ್ದ ಅವರ ಚಹರೆ .
ನಗುಮುಖದ ಅಂದದಲ್ಲೊಂದು ಚಂದ ನಗು .
ನೋಟಗಾರನ ಕಣ್ಣನ್ನೇ ಆಕರ್ಷಿಸುವ ಕಣ್ಣುಗಳು .
ರೂಪವತಿಯ ರೂಪವೇ ರೂಪಾಂತರ ಗೊಳ್ಳುವಂತಹ ರೂಪ .
ಹೀಗೆ ಇರಲಿ ನನ್ನಾಕೆ ದೀಪ. ಅಂತಾ ಮನಸ್ಸಲ್ಲೇ ಕವನ ಗೀಚಿದ್ದೆ.
ಅವರು ಯಾಕೋ ಹೆಚ್ಚು ಹೆಚ್ಚಾಗಿ ನನ್ನನ್ನ ಮಾತನಾಡದೆ ಕಾಡುತ್ತಿದ್ದಾರೆ ಅಂತ ಅನ್ನುಸ್ತಿತ್ತು . ನನಗೆ ಬಹಳ ಇಷ್ಟ ಆಗಿದ್ದು ಅವರ ಭಾಷೆ .
ಯಾಕೋ ಮನಸ್ಸು ಜಾಸ್ತಿ ತಡೀಲಿಲ್ಲ ಸಂಜೆಯೇ ಸುಕನ್ಯಾಗೆ ಫೋನ್ ಮಾಡ್ದೆ . ಹಿಂದೆ ಮುಂದೆ ಮಾತಾಡ್ದಲೇ ನೇರವಾಗಿ ವಿಷಯಕ್ಕೆ ಹೋದೆ.
“ಸುಕನ್ಯಾ ಒಂದು ಮಾತು ಕೇಳ್ತೀನಿ ನೇರವಾಗಿ ನಿನ್ನ ಅಭಿಪ್ರಾಯವನ್ನ ತಿಳಿಸು” ಅಂದೆ .
ಅವಳು “ಹೂ ಕೇಳು ಅವ್ಯಕ್ತ ಏನಂತ ವಿಷಯ” ಅಂತ ಸೀರಿಯಸ್ ಆದ್ಲು .
ನಾನು “ಹೇಗೆ ಕೇಳಬೇಕು ಅಂತ ಗೊತ್ತಾಗ್ತಿಲ್ಲ ಆದ್ರೂ ಕೇಳಿ ಬಿಡ್ತೀನಿ ಮನಸ್ಸು ತಡಿತಿಲ್ಲ ನಿನ್ನ ಫ್ರೆಂಡ್ ದೀಪ ಅವರು ನಮ್ಮ ಮನೆ ದೀಪ ಹಚ್ಚೋದಕ್ಕೆ ಸರಿನಾ..! ” ಅಂತ ಕೇಳ್ದೆ .
ನನ್ನ ಮಾತು ಕೇಳಿದ ತಕ್ಷಣ ಅವಳು ನಗೋದಕ್ಕೆ ಶುರುಮಾಡಿದ್ಲು..! ಏನ್ ಹೇಳುದ್ರು ನಗು ನಿಲ್ಲುಸ್ತಿಲ್ಲ . “ಹೂ.. ಟ್ರೈ ಮಾಡು” ಅಂತ ಹೇಳಿ ಮತ್ತೇ ನಗ್ತಿದ್ದಾಳೆ... ನನಗೆ ಅರ್ಥನೇ ಆಗ್ತಿರ್ಲಿಲ್ಲ ಯಾಕ್ ನಗ್ತಿದ್ದಾಳೆ ಅಂತ .
“ಸುಕನ್ಯಾ ನಾನ್ ಸೀರಿಯಸ್ಸಾಗಿ ಹೇಳ್ತಿದ್ದೀನಿ ಪ್ಲೀಸ್.. ನಗ್ಬೇಡ, ಹೇಳು ನಿನ್ನ ಅಭಿಪ್ರಾಯ , ಯಾಕೆ ಜೋಡಿ ಚೆನ್ನಾಗಿಲ್ವಾ..? ” ಅಂತ ಕೇಳ್ದೆ .
ಅದಕ್ಕೆ ಅವಳು ಮತ್ತೆ... ಜೋರಾಗಿ ನಗೋದಕ್ಕೆ ಶುರುಮಾಡಿದ್ಲು .
ಸ್ವಲ್ಪ ಹೊತ್ತು ನಕ್ಕು ಸಮಾಧಾನ ಮಾಡ್ಕೊಂಡು ಹೇಳಿದ್ಲು “ಲೋ ಮಂಗ ಅವರಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ...!”
ಈ ಮಾತನ್ನು ಕೇಳಿದ ತಕ್ಷಣ ನನ್ನ ಮೈ ಜುಮ್ ಅಂದಂಗಾಯ್ತು..
“ನಿಜವಾಗಲುನಾ” ಅಂತ ಶಾಕ್ ಆಗೋದೆ. ಬೀಸ್ತಾ ಇರೋ ಗಾಳಿಲು ಸಹ ಮುಳ್ಳಿದೆ ಅನ್ನೋತರ ಆಗೋಯ್ತು . ನಾನು ಸುಮ್ಮನಾಗಿದ್ ನೋಡಿ ಸುಕನ್ಯಾ “ಅವ್ಯಕ್ತ.. ಲೋ ಅವ್ಯಕ್ತ ಏನಾಯ್ತು” ಅಂತ ಮೂರ್ನಾಲ್ಕು ಬಾರಿ ಕರೆದಾಗ ವಾಸ್ತವಕ್ಕೆ ಬಂದೆ .
“ಏನ್ ಸುಕನ್ಯಾ ಇದು, ಅವರಿಗೆ ಮದುವೆಯಾಗಿದೆ ಅಂತ ಮುಂಚೇನೆ ಹೇಳಬೇಕು ತಾನೇ” ಅಂತ ಕೇಳಿದ್ದಕ್ಕೆ “ನೀನು ಮುಂಚೆನೇ ಕೇಳಬೇಕು ತಾನೆ..?” ಅಂತ ವಾದಿಸಿದ್ಲು . “ನೋಡೋಕೆ ನನಗಿಂತ ಚಿಕ್ಕವರು ಅನ್ನುಸ್ತಾರೆ” ಅಂದೆ ಅದಕ್ಕೆ ಅವಳು “ನೋಡಕ್ಕೆ ಎಷ್ಟು ಚೆನ್ನಾಗಿದ್ದಾರೆ ಅಲ್ವಾ ಅವರ ನಕ್ಕರೆ ಇನ್ನೂ ಚೆನ್ನಾಗಿ ಕಾಣ್ತಾರೆ ಗೊತ್ತಾ” ಅಂತ ಏನೇನೋ ಹೇಳ್ತಿದ್ಲು .
ನನಗಿಲ್ಲಿ ಭೂಮಿಯಾಕಾಶ ಒಂದಾದ ಫೀಲಿಂಗು
ಅಲ್ಲಿ ಅವಳಿಗೆ ಅವರು ಬ್ಯೂಟಿ ಬಗ್ಗೆ ತಿಂಕಿಂಗ್
“ಆಯ್ತು ಬಿಡು ನಾನೆನು ಮಾತಾಡಲ್ಲ” ಅಂತ ಹೇಳಿ ಅವಳು ಬೇಜಾರಾಗಬೇಡ ಅನ್ನೋ ಮಾತು ಸಹ ನನ್ನ ಕಿವಿಗೆ ಬಿದ್ದಿಲ್ಲ ಅನ್ನೋ ರೀತಿ ಫೋನ್ನ ಕಟ್ ಮಾಡ್ದೆ .
ನಿದ್ದೆ ಬಂದಿರೋದು ಗೊತ್ತಿಲ್ಲ , ಬೆಳಗ್ಗೆ ಆಕಾಶದಲ್ಲಿ ಸೂರ್ಯ ಬಂದಿರೊದು ಗೊತ್ತಿಲ್ಲ . ಎದ್ದು ಸೀದಾ ರೆಡಿಯಾಗಿ ಕೆಲಸಕ್ಕೆ ಹೋದೆ . ಒಂದೆರಡು ದಿನ ಯಾವುದೇ ಫೋನ್ ಇಲ್ಲದೆ ಮಾತಿಲ್ಲದೆ ಸರಿಯಾಗಿದ್ದೆ .
ಆದರೆ ದೀಪ ಅವರನ್ನೇ ನೇರವಾಗಿ ಒಂದ್ ಮಾತು ಕೇಳಬೇಕಿತ್ತು ಅನ್ನುಸ್ತು . ಅವರ್ಯಾಕೆ ಮುಂಚೇನೆ ನನಗೆ ಏನು ಹೇಳಿಲ್ಲ . ಅಥವಾ ನಾನೇ ಸುಮ್ ಸುಮ್ನೆ ಏನೇನೋ ಅನ್ಕೋತಿದಿನಾ...?
ಒಂದೇ ಒಂದು ಸಲ ಕಾಲ್ ಮಾಡ್ಲಾ.... ಬೇಡ್ವಾ ಅಂತ ಬುದ್ಧಿ ಯೋಚಿಸುತ್ತಿತ್ತು . ಆದರೆ ಮನಸ್ಸು ಅದಾಗಲೇ ಫೋನಲ್ಲಿ ಅವರಿಗೆ ಕಾಲ್ ಮಾಡಿ ಆಗಿತ್ತು .
ದೀಪಾವರು ಫೋನ್ ರಿಸೀವ್ ಮಾಡಿ “ಹಲೋ” ಅಂದ್ರೆ.
ನಾನು “ಏನ್ರೀ ದೀಪಾವರೇ , ನೀವು ಈ ರೀತಿ ಮಾಡಬಹುದಾ..?” ಅಂದೆ.
ಅವ್ರು “ಯಾಕ್ರೀ... ಏನಾಯ್ತು ? ನಾನ್ ಏನ್ ಮಾಡ್ದೆ” ಅಂದ್ರು .
ನಾನು “ಅಲ್ಲ ಈತರ ಮಾಡಬಹುದಾ... ಸುಳ್ಳು ಹೇಳಬಹುದ” ಅಂದೆ .
ಅದಕ್ಕೆ ಅವರು “ನಾನಾ.. , ಯಾವಾಗ ಹೇಳ್ದೆ!. ಅಡ್ಡಗೋಡೆ ಮೇಲೆ ದೀಪ ಇಟ್ಟೊರ್ ತರ ಏನೇನೋ ಮಾತಾಡಬೇಡಿ ಸರಿಯಾಗಿ ಹೇಳಿ ಏನ್ ಮಾಡಿದೀನಿ” ಅಂದ್ರು.
ಆವಾಗ್ ಅನ್ನುಸ್ತು.. ಸರಿ ಅಲ್ವಾ ಅವರು ನನಗೆ ಏನು ಹೇಳಿಲ್ಲ . ನಾನೇ ಏನೇನೋ ಮಾತಾಡ್ತಿದಿನಿ ಅಂತ .
ಸ್ವಲ್ಪ ಸಮಾಧಾನ ಆಗಿ . ನೇರವಾಗಿ ವಿಷಯಕ್ಕೆ ಹೋದೆ
“ಅಲ್ಲ ರೀ.. ದೀಪಾವರೇ ನಾನು ನಿಮ್ಮ ಕೈಯಿಂದ ನಮ್ಮನೆ ದೀಪ ಬೆಳಗಿಸೋಣ ಅನ್ಕೊಂಡ್ರೆ ನೀವು ಆಲ್ರೆಡಿ ಹಚ್ಚಿರೊ ದೀಪ ಆಗಿದ್ದೀರಾ” ಅಂದೆ . ಅವರಿಗೆ ಸರಿಯಾಗಿ ಅರ್ಥ ಆಗಲಿಲ್ಲ ಅನ್ಸುತ್ತೆ ಅಥವಾ ಅರ್ಥ ಆಗಿದ್ರು ಆಗದೆ ಇರೋತರ ನಾಟಕ ಮಾಡ್ತಿದ್ದಾರೆ ಅನ್ಸುತ್ತೆ .
“ಏನ್ ಹೇಳ್ತಿದ್ದೀರಾ ಅವ್ಯಕ್ತ , ಸರಿಯಾಗೇಳಿ ಏನ್ ಮಾಡ್ದೆ ನಾನು ಅಂತ” ಕೇಳಿದ್ರು.
“ನಿಮಗೆ ಮದುವೆ ಆಗಿರೋ ವಿಷಯ ಹೇಳಲೇ ಇಲ್ಲ ನನಗೆ” ಅಂತ ಕೇಳ್ದೆ .
ಅದಕ್ಕೆ ಅವರು “ಹೌದಾ... ಯಾರ್ ಹೇಳಿದ್ದು? ಬರೀ ಸುಳ್ಳು . ಮ್ಯಾಮ್ ನನಗೆ ಮದುವೆ ಆಗಿದೆಯಾ”..? ಅಂತ ಸುಕನ್ಯಾ ಅವರನ್ನು ಕೇಳಿದ್ರು.
ಅವಳು “ಇಲ್ವಲ್ಲ ಮ್ಯಾಮ್”, ಯಾಕೆ ಏನಾಯ್ತು..? ಅಂದ್ಲು .
ಅವರು “ಮತ್ತೆ.. ಅವ್ಯಕ್ತಾವರ್ಯಾಕೆ ಈ ತರ ಏನೇನೋ ಹೇಳ್ತಿದ್ದಾರೆ ಏನಾಗಿದೆ ಅವರಿಗೆ” ಅಂತ ಅವರಿಬ್ಬರು ಮಾತಾಡ್ತಿದ್ರು .
ನನಗೆ ಒಂದು ಕ್ಷಣ ತಲೆಕೆಳಗಾದ ಅನುಭವ . ಭೂಮಿ ಮೇಲೆ ನಿಂತಿದ್ದೋನು ಆಕಾಶದಲ್ಲಿ ತೇಲುತ್ತಿದ್ದೇನೆ ಅನ್ನೋ ಹಾಗಾಯಿತು.
ಬೀಸುತ್ತಿದ್ದ ಗಾಳಿಯಲ್ಲಿ ಅವತ್ತು ಮುಳ್ಳುಗಳು ಬಂದಿದ್ರೆ , ಇವತ್ತು ಸುಗಂಧ ಬೀರುವ ಕುಸುಮಗಳು ಬರ್ತಿವೆ...!
ಅವರ ಮಾತನ್ನು ಕೇಳಿ ಆನಂದಾನು ಆಯ್ತು ಆಶ್ಚರ್ಯಾನು ಆಯ್ತು . ಯಾರ್ ಮಾತ್ ಕೇಳ್ಳಿ ಯಾರ ಮಾತ್ ಬಿಡ್ಲಿ . ಸತ್ಯ ಯಾವುದು ಸುಳ್ಳು ಯಾವುದು... ದೀಪ ಅವರಾ..? ಅಥವಾ ಸುಕನ್ಯಾನ...? ತಲೆ ಗ್ರೈಂಡರ್ ತರ ತಿರುಗಿದ ಹಾಗಾಯ್ತು .
“ಸುಕನ್ಯಾಗೆ ಫೋನ್ ಕೊಡಿ” ಅಂದೆ .
ಅವಳು ಫೋನ್ ಇಸ್ಕೊಂಡು “ಹೇಳು ಅವ್ಯಕ್ತ” ಅಂದ್ಲು .
ನಾನು “ಲೇಯ್... ಲೇಯ್.. ಏನೇ ಇದು , ನೀನೊಂದು ಹೇಳಿದ್ದೆ ಅವರೊಂದು ಹೇಳ್ತಿದ್ದಾರೆ ಯಾವುದು ಸರಿ ಯಾವುದ್ ತಪ್ಪು ಸರಿಯಾಗಿ ಹೇಳಪ್ಪ ತಲೆ ಕೆಟ್ಟು ಗೊಬ್ಬರ ಆಗ್ತಿದೆ” ಅಂತ ಕೇಳಿಕೊಂಡಾಗ ....ಹೇಳಿದ್ಲು
“ಮೊನ್ನೆ ಸುಮ್ಮನೆ ಹಾಗಂದೆ , ಅವರಿಗೆ ಮದುವೆ ಆಗಿಲ್ಲ . ನೋಡಿದ್ರೆ ಗೊತ್ತಾಗಲ್ವಾ ದಂತದಗೊಂಬೆ ತರ ಇದ್ದಾರೆ” ಅಂದ್ಳು.
ಏನು ಮಾತಾಡ್ದಲೇ ಒಪ್ಪಿಕೊಳ್ಳಲೇಬೇಕಾಯಿತು . ಆದರೆ ಮನಸ್ಸು ಮಾತ್ರ ಅರ್ಧಸತ್ಯ ಅರ್ಧಸುಳ್ಳು ಅಂತಿತ್ತು .
ಇಷ್ಟೆಲ್ಲಾ ಆದ ಮೇಲೆ ನಾನು ಮತ್ತೆ ದೀಪಾವರು ಸ್ವಲ್ಪ ಜಾಸ್ತಿನೇ ಮಾತಾಡೋದಕ್ಕೆ ಶುರು ಮಾಡಿದ್ವಿ...!
ಮಾತುಗಳು ಮನಸನ್ನ ಬಹಳ ಹತ್ತಿರ ತರುತ್ತಿತ್ತು .
ಆರಂಭ ವಿಲ್ಲದ ಮಾತು , ಅಂತ್ಯವಿಲ್ಲದ ಮಾತು , ಕಟ್ಟುಕತೆಗಳ ಮಾತು , ಕಲ್ಪನೆಯ ಮಾತು , ಕಂತೆ ಕಂತೆಯ ಮಾತು , ಗಂಟೆಗಟ್ಟಲೆ .......ಆಡುತ್ತಿದ್ವಿ..!
ಒಂದು ದಿನ ದೀಪ ಅವರು ನಾನು ಕೆಲಸದಲ್ಲಿರುವಾಗ ಫೋನ್ ಮಾಡಿದ್ರು.
“ಅವ್ಯಕ್ತ ಬ್ಯುಸಿ ಇದ್ದೀರಾ” ಅಂದ್ರು .
“ಇಲ್ಲ ದೀಪಾವರೇ ಕೆಲಸದ ಮೇಲಿದ್ದೀನಿ , ಅದರೆ ಮಾತಾಡುವಷ್ಟು ಫ್ರೀ ಇದ್ದೀನಿ ಹೇಳಿ” ಅಂದೆ
ಅವರು “ಸಾರಿ ಅವ್ಯಕ್ತಾವ್ರೆ , ನನ್ ಇಂದ ಒಂದು ತಪ್ಪಾಗಿದೆ” ಅಂದ್ರು .
ನಾನು “ಸಾರಿ ಯಾಕೆ? ಅಂತದ್ದು ಏನಾಯಿತು ಈಗ” ಅಂದೆ .
“ಇಲ್ಲ ನಿಮ್ಮತ್ರ ಒಂದು ವಿಷಯ ಮುಚ್ಚಿಟ್ಟಿದಿನಿ” ಅಂದ್ರು .
ನಾನು “ಹೌದಾ ಏನಂತ ವಿಷಯ?” ಅಂತ ಕೇಳ್ದೆ. “ಅವ್ಯಕ್ತಾವರೇ ಬೇಜಾರಾಗ್ಬೇಡಿ , ನನಗೆ ಮದುವೆ ಆಗಿದೆ , ನಿಮ್ಮ ರೆಸ್ಪಾನ್ಸ್ ಹೇಗಿರುತ್ತೆ ಅಂತ ತಮಾಷೆಗೆ ನಾವು ಹೇಳಿಲ್ಲ... ಸುಕನ್ಯಾ ಮ್ಯಾಮ್ ಹತ್ರ ನಾನೇ ಹೇಳಬೇಡಿ ಅಂದಿದ್ದೆ.... ಯಾಕೋ ಮನಸ್ಸು ತಡಿಲಿಲ್ಲ ಹೇಳಬೇಕು ಅನ್ನಿಸ್ತು ಹೇಳ್ತಿದಿನಿ ಪ್ಲೀಸ್ ಬೇಜಾರಾಗಬೇಡಿ” ಅಂದ್ರು .
ನನಗೆ ಆ ಕ್ಷಣವೇ ಅವರ ಎಲ್ಲಾ ಮಾತಿನ ಮೇಲೆ ನಂಬಿಕೆನೆ ಹೊರಟುಹೋಯಿತು .
ನಾನು ಮಾತು ಬರದ ಮೌನಿ ಆಗೋದೆ . ಫೋನ್ನಲ್ಲಿ ದೀಪಾವರು “ರೀ ಅವ್ಯಕ್ತಾವ್ರೆ, ಹಲೋ.....ಕೇಳುಸ್ತಿದಿಯಾ ನಿಮಗೆ , ಬೇಜಾರಾಗಿದೆ ಅಂತ ಗೊತ್ತು ....ಸಾರಿ , ನಾನು ಮುಚ್ಚಿಡ್ಬಾರದಿತ್ತು ಸಾರಿ...ರಿ” ಅಂದ್ರು .
ನನಗೆ ಅದೇನಾಯ್ತೋ ಏನೋ ಗೊತ್ತಿಲ್ಲ. “ಇರ್ಲಿ ಬಿಡಿ ದೀಪಾವರೇ , ನನಗೆ ಗೊತ್ತಿತ್ತು ನಿಮಗೆ ಮದುವೆ ಆಗಿದೆ ಅಂತ .
ಸುಕನ್ಯಾ ಹೇಳಿದಾಗಲೇ ನನಗೆ ಕನ್ಫರ್ಮ್ ಆಗಿತ್ತು , ಆದರೆ ನೀವು ಆಗಿಲ್ಲ ಅಂತ ಒತ್ತಿ-ಒತ್ತಿ ಅಂದ್ರಲ್ಲ ಸ್ವಲ್ಪ ಮಿಸ್ ಹೊಡಿತಾ ಇತ್ತು . ಇವಾಗ ಫಿಕ್ಸ್ ಆಯ್ತು ಪರವಾಗಿಲ್ಲ ಬಿಡಿ ಈ ಜನ್ಮದಲ್ಲಿ ನೀವು ನನ್ನ ಹಣೇಲಿ ಬರೆದಿಲ್ಲ .ಊಟ ಮಾಡಿದ್ರಾ..” ಅಂದೆ.
“ಮಾಡಬೇಕು ರೀ ಲೇಟ್.. ಇವಾಗ್ಲೇ ಮಾಡಲ್ಲ” ನಿಮ್ದು ? ಅಂತ ಕೇಳಿದ್ರು .
“ಇವಾಗ್ ತಾನೇ ನೀವು ಮಾತಲೇ ಮಾಡ್ಸಿದ್ರಲ್ಲ ಹೊಟ್ಟೆ ತುಂಬೊಯ್ತು” ಅಂದೆ.
ಅವರು ಸಂಪೂರ್ಣವಾಗಿ ಮೌನಕ್ಕೆ ತಿರುಗಿಕೊಂಡರು.
ಸ್ವಲ್ಪ ದಿನಗಳಾದ ಮೇಲೆ ಎಲ್ಲಾ ವಿಚಾರಗಳನ್ನು ಮರೆತು ಮತ್ತೆ ಮಾತಾಡಲು ಶುರು ಮಾಡಿದ್ವಿ . ಮಾತುಗಳು ಕೆಲವೊಮ್ಮೆ ಮನಸ್ಸಿನ ಭಾವನೆಯಾಗಿ ಹೊರಬರುತ್ತಿತ್ತು . ಹೀಗೆ ನನ್ನ ಮಾತುಗಳಿಗೆ ಅವರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದರು .
ದಿನಗಳು ಕಳೆದಂತೆ ನಾನು ಸುಕನ್ಯಾನ ಮಾತಾಡಿಸುವುದು ಕಡಿಮೆ ಮಾಡಿದೆ . ದೀಪಾವರು ನನ್ ಜೊತೆ ಮಾತಾಡ್ತಾ ಇರಲಿಲ್ಲ ಅಂದಾಗ ಮಾತ್ರ ನಾನು ಸುಕನ್ಯಾಗೆ ಫೋನ್ ಮಾಡ್ತಿದ್ದೆ. ಇದು ಸುಕನ್ಯಾಗೆ ಗೊತ್ತಾಗ್ತಿತ್ತು.
ಮುಂದೆ ಸಣ್ಣ ಸಣ್ಣ ವಿಚಾರಕ್ಕೂ ನಾನು ಸುಕನ್ಯಾ ಜಗಳಾಡುತ್ತಿದ್ವಿ . ನನ್ನ ಮಾತು ಅವಳ ಮಾತು ವಿರುದ್ಧವಾಗಿ ಹರಿಯುತ್ತಿತ್ತು . ನಾನು ಸುಕನ್ಯಾಳ ಮುಂದೆ ದೀಪಾವರನ್ನ ಹೆಚ್ಚಾಗಿ ಹೊಗಳೋಕೆ ಶುರು ಮಾಡಿದ್ದೆ .
ನನ್ನ ಮಾತುಗಳು ದಿನೇದಿನೇ ಸುಕನ್ಯಾಳಿಗೆ ಚುಚ್ಚುತಾನೆ ಇತ್ತು ಅನ್ಸುತ್ತೆ .ಅದು ಒಂದು ದಿನ ಬೆಂಕಿಯಾಗಿ ಹೊರಬಂತು.
ಅವತ್ತಿನ ದಿನ ದೀಪಾವರು ಫೋನ್ ರಿಸೀವ್ ಮಾಡ್ತಿರ್ಲಿಲ್ಲ. ಬೇರೆ ವಿಧಿ ಇಲ್ಲದೆ ನಾನು ಸುಕನ್ಯಾಗೆ ಕಾಲ್ ಮಾಡಬೇಕಾಯಿತು. ಹಿಂದಿನ ದಿನ ನಾನು ನಿನ್ನ ಜೊತೆ ಮಾತಾಡಲ್ಲ ಅಂತ ಹೇಳಿ.... ಬೆಳಗ್ಗೆ ಅವಳಿಗೆ ಕಾಲ್ ಮಾಡ್ತೀನಿ ಅಂತ ಸಣ್ಣ ಪರಿಜ್ಞಾನ ಸಹ ಇಲ್ಲದೆ ಕಾಲ್ ಮಾಡಿ... ದೀಪಾವರ ಬಗ್ಗೆ ವಿಚಾರ್ಸೊಣ ಅನ್ಕೊಂಡೆ. ನಾನು ಮಾತಾಡೊದಕ್ಕಿಂತ ಮುಂಚೇನೆ ಅವಳು....
“ಮಾತಾಡಲ್ಲ ಅಂದ್ಮೇಲೆ ಯಾಕ್ ಕಾಲ್ ಮಾಡಿದ್ದೀಯಾ.... ನನಗೂ ನಿನ್ ಜೊತೆ ಮಾತಾಡೋದಕ್ಕೆ ಇಷ್ಟ ಇಲ್ಲ , ಮುಚ್ಕೊಂಡು ಇಡು ಫೋನ್ನ” ಅಂದುಬಿಟ್ಲು .
ಅಲ್ಲಿಗೆ... ಅವಳತ್ರ ಇದ್ದ ನನ್ನ ಅಷ್ಟೊ ಇಷ್ಟು ಮರ್ಯಾದೆನೂ ಸತ್ತೋಯ್ತು...!
ನಾನು ಸಹ ಸುಮ್ಮನಾಗಿ ಹೋದೆ.ಅವತ್ತು ಸಂಜೆ ಫ್ರೆಂಡ್ಸ್ ಜೊತೆ ಹೊರಗೆ ಹೋಗಿ ಬಂದು ಫೋನ್ ನೋಡ್ತೀನಿ... ದೀಪಾವರು , ನಾಲ್ಕೈದು ಸಲ ಕಾಲ್ ಮಾಡಿದ್ದಾರೆ , ಐದು ಸಲ “ಕಾಲ್ ಮಿ” ಅಂತ ಮೆಸೇಜ್ ಹಾಕಿದ್ದಾರೆ...! ಅವರು ಯಾವಾಗಲೂ ನನ್ನ ಜೊತೆ ಬೆಳಗ್ಗೆ ಮಾತ್ರ ಮಾತಾಡ್ತಿದ್ರು .
ಇವತ್ತು ರಾತ್ರಿ ಸಹ ಕಾಲ್ ಮಾಡಿದ್ದಾರಲ್ಲ ಅಂತ ವಾಪಸ್ “ಹೇಳಿ, ಏನಾಯ್ತು ದೀಪಾವರೇ?” ಅಂತ ಮೆಸೇಜ್ ಮಾಡ್ದೆ .
“ಮಾತಾಡಬೇಕು ಕಾಲ್ ಮಾಡಬಹುದಾ” ಅಂತ ರಿಪ್ಲೇ ಬಂತು .
ನಾನು ಡೈರೆಕ್ಟಾಗಿ ಕಾಲ್ ಮಾಡ್ದೆ .
ದೀಪ ಅವರು ತುಂಬಾ ಬೇಜಾರಲ್ಲಿದ್ದಾರೆ ಅನ್ನೋದು ಗೊತ್ತಾಗ್ತಿತ್ತು . “ಏನಾಯ್ತು” ಅಂದೆ. ಅವರು “ಮ್ಯಾಮ್ ಬೆಳಗ್ಗೇ ಮಾತಾಡುವಾಗ ನಾನು ಅವರ್ ಪಕ್ಕಾನೇ ಇದ್ದೆ. ನನ್ ಫೋನ್ ಸೈಲೆಂಟ್ ಆಗಿತ್ತು ಅದಕ್ಕೆ ನಾನ್ ರಿಸೀವ್ ಮಾಡಕಾಗ್ಲಿಲ್ಲ . ನೀವಿಬ್ರು ಈತರ ಕಿತ್ತಾಡಿದ್ ಸಹ ನನ್ ನೋಡಿರ್ಲಿಲ್ಲ , ನನಗೊಂದು ಪ್ರಾಮಿಸ್ ಮಾಡ್ತೀರಾ..?” ಅಂದ್ರು .
ನಾನು “ಬಿಡ್ರಿ ಹೋಗ್ಲಿ , ಏನ್ ಮಾಡೋಕಾಗುತ್ತೆ ನೀವ್ಯಾಕೆ ತಲೆಕೆಡುಸ್ಕೊತಿದಿರ” ಅಂದೆ .
“ಇಲ್ಲ ಇಲ್ಲ ನೀವ್ ಪ್ರಾಮಿಸ್ ಮಾಡಲೇಬೇಕು , ಪ್ಲೀಸ್ ಇದೊಂದು ಮಾತು ನೆಡಿಸಿ ಕೊಡಿ ಸಾಕು ”ಅಂತ ಕೇಳ್ಕೊಂಡ್ರು .
ನಾನು “ಆಯ್ತು ರೀ.. ಹೇಳಿ ಏನ್ ನಡೆಸಿಕೊಡಬೇಕು” ಅಂತ ಕೇಳಿದಾಗ....
“ನಾನು ನಿಮ್ ಲೈಫಲ್ಲಿ ಬಂದಿದ್ದೆ ಅನ್ನೋದನ್ನ ನೀವು ಮರೆತು ಬಿಡಬೇಕು , ನನಗೂ ನಿಮಗೂ ಇನ್ನು ಯಾವ ಸಂಬಂಧವೂ ಇಲ್ಲ . ನನಿಗ್ ಗೊತ್ತು ಮ್ಯಾಮ್ ನನ್ನಿಂದಲೇ ಬೇಜಾರ್ ಆಗಿರೊದು ಅಂತ.
ನಂಜೊತೆ ನೀವು ಜಾಸ್ತಿ ಮಾತಾಡ್ತಿದ್ದೀರಿ ಅನ್ನೋದೇ ಅವರಿಗೆ ಪ್ರಾಬ್ಲಮ್. ಪ್ರಾಬ್ಲಮ್ ನಾನೇ , ಅದಕ್ಕೆ ಸೊಲ್ಯೂಷನ್ ಕೂಡ ನಾನೇ ಆಗ್ತೀನಿ . ಪ್ರಾಮಿಸ್ ಮಾಡಿ ಇನ್ಯಾವತ್ತು ನೀವು ನನ್ನ ಜೊತೆ ಮಾತಾಡಲ್ಲ ಅಂತ ಇಷ್ಟು ಸಾಕು” ಅಂದ್ರು.
ನಾನು... ಫುಲ್ ಶಾಕ್ ಆಗಿ “ಏನ್ರೀ ನೀವು ! , ಇಷ್ಟೊಂದೆಲ್ಲಾ ಹೇಳಿ ಇಷ್ಟೇ ಅಂತಿದ್ದೀರಾ . ಮನಸಾದರೂ ಹೇಗೆ ಬಂತು ನಿಮಗೆ ಹೀಗೆಲ್ಲ ಮಾತಾಡೋಕೆ . ನಾನ್ ಯಾವುದೇ ಕಾರಣಕ್ಕೂ ನಿಮ್ಮ ಈ ಮಾತುಗಳಿಗೆ ಒಪ್ಪೊದಿಲ್ಲ . ನನ್ನಿಂದ ಏನಾದ್ರೂ ತಪ್ಪಾಗಿದ್ದರೆ ಹೇಳಿ ಸರಿ ಮಾಡ್ಕೋತೀನಿ . ಅದು ಬಿಟ್ಟು... ಮಾತಾಡಬೇಡ ಪರ್ಮನೆಂಟಾಗಿ ಮರೆತು ಬಿಡು ಅಂತ ಹೇಳಿದ್ರೆ ಹೇಗ್ರಿ . ನನ್ನಿಂದ ಆಗೋದಿಲ್ಲ ಸಾರಿ” ಅಂದುಬಿಟ್ಟೆ.
ಅದಕ್ಕೆ ಅವರು “ಪ್ಲೀಸ್ ರೀ.. ನಿಮಗೆ ಕೈಮುಗಿದು ಕೇಳ್ಕೊತಿನಿ . ನನ್ನಿಂದ ಇನ್ನೊಬ್ಬರಿಗೆ ಬೇಜಾರ್ ಆಗುತ್ತೆ ಅಂದರೆ ನಾನು ಆ ಜಾಗದಲ್ಲಿ ಒಂದು ಕ್ಷಣನು ಇರಲ್ಲ. ಅಂತದ್ರಲ್ಲಿ... ನನ್ನ ಜೊತೆನೆ ಖುಷಿ ಖುಷಿಯಾಗಿರೊ ಸುಕನ್ಯಾ ಅವರಿಗೆ ನನ್ನಿಂದಲೇ ಬೇಜಾರಾಗುತ್ತೆ ಅಂದರೆ ಹೇಗ್ರಿ ಸಹಿಸಿಕೊಳ್ಳಿ . ಒಂದೊಂದು ಸತ್ಯ ರೀ ನಿಮ್ಮ ಜೊತೆ ಮಾತಾಡ್ತಾ ಇದ್ದ ಪ್ರತಿ ಕ್ಷಣನು ನಾನು ಖುಷಿಯಾಗಿದ್ದೆ... ನನ್ನ ಎದೆಯಲ್ಲಿ ಸಾವಿರ ನೋವಿದ್ರು , ನಿಮ್ ಜೊತೆ ಮಾತಾಡ್ತಿದ್ ಮರುಕ್ಷಣ ನನಗೆ ನೋವೆಲ್ಲಾ ಕಾಣ್ತಾನೆ ಇರ್ಲಿಲ್ಲ.... ಅಷ್ಟು ಬೆಲೆ ಕೊಟ್ಟಿದೀರಾ ನೀವು ನನಗೆ . ಆದರೆ , ನಾನ್ ಬಂದು ನಿಮ್ಮಿಬ್ಬರ ಸ್ನೇಹ ಹಾಳಾಗೋದು ನನಗೆ ಇಷ್ಟ ಇಲ್ಲ . ಫಸ್ಟ್ ನೀವಿಬ್ರೂ ಫ್ರೆಂಡ್ಸ್ ಆಮೇಲೆ ನಾನು ಮೂರನೇವ್ಳಾಗಿ ಬಂದಿದ್ದು . ನನ್ನಿಂದ ನೀವಿಬ್ರು ಕಿತ್ತಾಡ್ತಿರೊದ್ ನೋಡಕ್ಕೆ ಆಗ್ತಿಲ್ಲ ಪ್ಲೀಸ್ ಪ್ಲೀಸ್ ಪ್ಲೀಸ್ ಅವ್ಯಕ್ತ...ನಿಮ್ಗೆ ಕೈ ಮುಗಿದು ಕೇಳಿಕೊಳ್ತೀನಿ , ನನ್ನ ಮಾತಾಡಿಸಬೇಡಿ . ನಾನು ನಿಮ್ಮ ಲೈಫಲ್ಲಿ ಬಂದಿದ್ದೆ ಅನ್ನೋದನ್ನೇ ಮರೆತುಬಿಡಿ. ಇಷ್ಟು ದಿನ ನಂಜೊತೆ ಮಾತಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ . ಮತ್ತೆ ನನ್ನ ಮನಸ್ಸನ್ನ ಒಲಿಸೊ ಪ್ರಯತ್ನ ಮಾಡಬೇಡಿ... ಬಾಯ್” ಅಂದ್ರು .
ನಾನು “ರೀ ಒಂದು ನಿಮಿಷ ನನಗೂ ಸ್ವಲ್ಪ ಮಾತಾಡೋಕೆ ಅವಕಾಶ ಕೊಡಿ . ನಾನು ಸುಕನ್ಯಾ ಬರಿ ಫ್ರೆಂಡ್ ಅಷ್ಟೇ. ಅವಳಿಗೆ ಯಾಕೆ ಈತರ ಆಗ್ತಿದೆ ಗೊತ್ತಿಲ್ಲ . ಆದರೆ ನೀವು ಬಂದ ಮೇಲೆ ನಾನು ಅವಳ್ನ ಸ್ವಲ್ಪ ಜಾಸ್ತಿ ಮಾತಾಡ್ಸೋಕೆ ಶುರುಮಾಡಿದ್ದು . ಇದಕ್ಕೂ ಮುಂಚೆ ನಾವ್ಯಾವತ್ತೂ ಇಷ್ಟೊಂದು ಮಾತೇ ಆಡ್ತಿರ್ಲಿಲ್ಲ . ಅವಳ ಜೊತೆ.... ನಾನ್ ಮಾತಾಡ್ತೀನಿ . ಅವಳು ನಾನು ಯಾವತ್ತೂ ಜಗಳಾನೇ ಆಡಲ್ಲ ಸರಿನಾ . ನೀವು ಈತರ ಎಲ್ಲಾ ಡಿಸಿಶನ್ ತಗೋಬೇಡಿ ಪ್ಲೀಸ್ ಓಕೆನಾ” ಅಂದೆ .
ಇಷ್ಟನ್ನು ಸಮಾಧಾನವಾಗಿ ಕೇಳಿಸಿಕೊಂಡ ದೀಪಾವರು “ಯಾವತ್ತಿಗೂ ನನ್ನ ನಿರ್ಧಾರ ಬದಲಾಗಲ್ಲ . ದಯವಿಟ್ಟು ಮತ್ತೆ ಮಾತಾಡ್ಸೊ ಪ್ರಯತ್ನ ಬೇಡ . ಕಾಲ್ ನೀವೇ ಕಟ್ ಮಾಡ್ಲಿ ಅಂತ ಕಾಯ್ತಿದೀನಿ” ಅಂದ್ರು.
ನಾನು.... “ಆದ್ರೂ ಒಂದು ಸಲ ಯೋಚನೆ ಮಾಡಿ ಒಂದೇ ಒಂದ್ ಸಲ . ಪ್ಲೀಸ್ ಇನ್ನೊಂದು ಸಲ . ಕೊನೇ ಸಲ. ಲಾಸ್ಟ್ ಟೈಮ್ . ಫುಲ್ ಸ್ಟಾಪ್ . ಪೂರ್ಣವಿರಾಮ. ಡೆಡ್ಡ್ ಎಂಡ್ . ಆರಾಮಾಗಿ ಮಾಡಿ . ಒಂದ್ ವರ್ಷ ಟೈಮ್ ತಗೊಳಿ ಏನೂ ತೊಂದರೆ ಇಲ್ಲ ಸರಿನಾ” ಅಂದೆ .
ಅವರು “ರೀ ಈ ಟೈಮಲ್ಲು ನಗುಸ್ತಿರ.... ಏನ್ರಿ ನೀವು , ಇಲ್ಲ ಸುಮ್ಮನಿರಿ . ನನ್ ನಿರ್ಧಾರ ಬದಲಾಗಲ್ಲ . ನೀವು ಕಟ್ ಮಾಡಲ್ಲ ಅಂತ ಗೊತ್ತು ನಾನೇ ಮಾಡ್ತಿದ್ದೀನಿ ಗುಡ್ ನೈಟ್ ಗುಡ್... ಬಾಯ್” ಅಂತ ಹೇಳಿ ಕಟ್ ಮಾಡಿಬಿಟ್ಟರು.
ನಾನು ಮತ್ತೆ ಕಾಲ್ ಟ್ರೈ ಮಾಡ್ದೆ ಅವರು ರಿಸೀವ್ ಮಾಡ್ಲಿಲ್ಲ . ಸುಮ್ಮನೆ ಯಾಕೆ ವ್ಯರ್ಥ ಪ್ರಯತ್ನ ಅಂತ ಮಲಗೋಕೆ ಹೋದೆ.... ಮಲಗೋ ಮುಂಚೆ ಸುಕನ್ಯ ನೆನಪಿಗೆ ಬಂದ್ಲು . ಅಲ್ಲ ಅವಳಿಗೋಸ್ಕರ ಇಲ್ಲಿ ವಾದ-ವಿವಾದಗಳು ನಡೆದು.. ಮನಸ್ಸಿನೊಳಗಿದ್ದ ಅಣುಗಳು ಸ್ಪೋಟ ಆಗಿದ್ದಾವೆ . ಏನ್ ಗುರು ಇದು ಸುಕನ್ಯಾ ಲಕ್ಷ್ಮಿ ಪಟಾಕಿ ಆಗಿದಳೆ ನನ್ ಜೀವನದಲ್ಲಿ ಅಂತ , ಅವಳಿಗೆ ಮೆಸೇಜ್ ಹಾಕ್ದೆ !
“ನೋಡು ಸುಕನ್ಯಾ ನಿಮ್ಮ ಮ್ಯಾಮ್ ಕಾಲ್ ಮಾಡಿದ್ರು . ಇನ್ಯಾವತ್ತೂ ಅವರು ನನ್ನ ಜೊತೆ ಮಾತಾಡೋದಿಲ್ಲ. ಅವರು ಬೇಡ ಅಂತ ಸ್ಪಷ್ಟವಾಗಿ ಹೇಳಿದಾರೆ . ಅವರಿಂದ ನಮ್ಮಿಬ್ಬರ ಫ್ರೆಂಡ್ಶಿಪ್ ಹಾಳಾಗುತ್ತಂತೆ . ಅವರಿಗೆ ಇಷ್ಟ ಇಲ್ಲವಂತೆ ಅದು. ನಾವಿಬ್ಬರೂ ಯಾವಾಗಲೂ ಒಳ್ಳೆ ಫ್ರೆಂಡ್ಸ್ ತರ ಇರಬೇಕು ಅಂತ ಹೇಳಿದ್ದಾರೆ . ಕಿತ್ತಾಡ್ಬಾರದಂತೆ . ಗುಡ್ ಬೈ ಹೇಳಿದಾರೆ” ಅಂತ ಕಳುಸ್ತೆ .
ಆ ಕಡೆಯಿಂದ ಬುಲೆಟ್ ಟ್ರೈನ್ ಸ್ಪೀಡ್ ಅಲ್ಲಿ ರಿಪ್ಲೈ ...“ಹೌದೇನೋ ಯಾವಾಗ..? ನಿಜವಾಗಲೂ..!” ಅಂತ ಪರಮಾಶ್ಚರ್ಯ ಆಗಿರೋರ್ ತರ ಕೇಳ್ತಿದ್ಲು... “ಆದರು ಸಹ ನನಗೆ ನಂಬಿಕೆನೇ ಬರ್ತಿಲ್ಲ ನೀನು ಸುಳ್ಳು ಹೇಳುತ್ತಿರಬಹುದು” ಅಂದಳು.
ನನಗೆ ಅವಾಗ ಗೊತ್ತಾಯ್ತು.... ನಮ್ಮೂರ ದಾಸಪ್ಪನ ನಂಬುಸ್ಬೂದು ಆದರೆ ಹುಡುಗೀರ್ನ ಆಗಲ್ಲ ಅಂತ . “ನಿನ್ ಮೇಲೆ ತುಂಬಾ ಪ್ರೀತಿ ಅವ್ರಿಗೆ . ನೀನ್ ಅವ್ರ ಜೊತೆ ಚೆನ್ನಾಗಿರಬೇಕು . ಈ ವಿಷಯ ನಿನ್ನತ್ರ ಹೇಳೋದು ಬೇಡ ಅಂತ ಹೇಳಿದ್ರು . ಆದರೂ ನಾನ್ ನಿನಿಗ್ ಹೇಳ್ತಿದ್ದೀನಿ ಬೇಕಾದರೆ ನಿಮ್ಯಾಮ್ ನ ಕೇಳಿಕೋ” ಅಂತ ಹೇಳಿದೆ .
“ನಿಜವಾಗಲೂ ನಾ” ಅಂತ ಕೇಳಿದ್ಳು .
“ಹೂನಪ್ಪ ಜಾಸ್ತಿ ನಿನ್ನ ಬಗ್ಗೆನೇ ಹೇಳಿದಾರೆ.. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್ ತರ ಇರಬೇಕಂತೆ , ನನಿಗ್ ನಿದ್ದೆ ಬರ್ತಿದೆ ಮಲ್ಕೊತಿನಿ , ಗುಡ್ ನೈಟ್” ಅಂದೆ.
ಮಾರನೆದಿನ ಸುಕನ್ಯಾಗೆ ಕಾಲ್ ಮಾಡಿ ಅವರಿಬ್ಬರೂ ಲವಲವಿಕೆಯಿಂದ ಇರೋದು ತಿಳ್ಕೊಂಡು ಸುಮ್ಮನಾದೆ . ಆದರೂ ನನ್ನ ಮನಸ್ಸಲ್ಲಿ ದೀಪಾವರ ಬಗ್ಗೆ ಎಲ್ಲೋ ಏನೋ ಒಂದು ರೀತಿಯ ಆಸೆ ಚಿಗುರೊಡೆಯುತ್ತಿತ್ತು . ಅವರಿಗೆ ಮದುವೆ ಆಗಿದೆ ಅಂತ ನನಗೆ ಇನ್ನೂ ನಂಬಿಕೆ ಬರ್ತಿರ್ಲಿಲ್ಲ . ಅಲ್ಲ ಅಷ್ಟು ಚೆನ್ನಾಗಿರೋ ಹುಡುಗಿ ಅಷ್ಟು ಸಣ್ಣ ವಯಸ್ಸಿಗೆ ಮದುವೆ ಮಾಡಿಕೊಂಡಿದ್ದಾರೆ ಏನಿದು ಅಂತಾ.....? ಎನ್ನುವ ಪ್ರಶ್ನೆಯ ನಡುವೆ, ಅವರ ಮಾತುಗಳು , ಅವರು ನನ್ನ ಮಾತುಗಳನ್ನು ಆಲಿಸುತ್ತಿದ್ದ ರೀತಿ , ಎಲ್ಲದಕ್ಕಿಂತ ಹೆಚ್ಚಾಗಿ ಅವರ ಸೌಂದರ್ಯ ನನ್ನನ್ನ ಸೆಳೆದು ಮನಸೂರೆಗೊಳಿಸಿತ್ತು....!
ಆ ಕ್ಷಣ ನನಗೆ ಅನಿಸಿದ್ದು ಇಷ್ಟೇ..! ದೇವರು ಯಾರನ್ನೂ ಸುಮ್ಸುಮ್ನೆ ಪರಿಚಯ ಮಾಡ್ಸಲ್ಲ . ಅದರ ಹಿಂದೆ ಏನೋ ಕಾರಣ ಇದ್ದೇ ಇರುತ್ತೆ . ಇಲ್ಲಿ ನಾನು ಮಾಡ್ತಿರೋದು ಸರಿನಾ , ತಪ್ಪಾ..? ಸಮಾಜದ ರೀತಿ-ನೀತಿ ಎಷ್ಟು ಸರಿ. ಸಮಾಜದ ರೀತಿಯಲ್ಲಿ ನಾನು ದೀಪಾವರನ್ನ ಸಲಿಗೆಯಿಂದ ಮಾತಾಡ್ಸೊದು ತಪ್ಪು ಅನ್ನೋದಾದರೆ.... ದೀಪಾವರಿಗೆ ಸಣ್ಣ ವಯಸ್ಸಿಗೆ ಮದುವೆ ಮಾಡಿರೋ ಸಮಾಜದ ಕೆಲಸ ಸರಿನಾ.. ಇಲ್ಲಿ ನಾನು ಮಾಡ್ತಿರೊ ಕೆಲಸ ಅಧರ್ಮ ಆದರೆ , ಹಿಂದೆ ಸಮಾಜ ಮಾಡಿದ ಕೆಲಸ ಧರ್ಮವಾಗಿತ್ತಾ..?
ಒಂದು ಕ್ಷಣ ಯೋಚನೆಗಳ ಸಾಗರವೇ ತಲೆಯೊಳಗೆ ಹರಿದ ಹಾಗಾಯಿತು . ಮತ್ತೆ ಮನಸ್ಸು ಹೇಳಿತು . ಅವರೇ ಮಾತಾಡ್ಸಲ್ಲ ಅಂದ ಮೇಲೆ ನಾನು ಯಾಕೆ ಹೀಗೆಲ್ಲ ಯೋಚನೆ ಮಾಡಬೇಕು . ನಾನೆಲ್ಲೋ.. ಅವರೆಲ್ಲೊ..!
ನನ್ನದೇ ಒಂದು ಜೀವನ ಅವರದೇ ಒಂದು ಜೀವನ. ಮತ್ತೆ ಯಾಕೆ ಅವರನ್ನು ಮಾತಾಡಿಸಿ ಅವರಿಗೂ ಹಿಂಸೆ ಕೊಡ್ಲಿ ಸುಮ್ನೆ ಇರೋಣ ಅನ್ಕೊಂಡ್ರೆ... ಮತ್ತೆಲ್ಲೋ ಒಂದುಕಡೆ ಅನ್ನುಸ್ತಿತ್ತು... ಅಲ್ಲ ದೀಪಾವರು ಮಾತಾಡ್ಸಲ್ಲ ಅಂತಿರೋದು ಸುಕನ್ಯಾಗೋಸ್ಕರ. ಅವಳಿಗೆ ಗೊತ್ತಾಗದಾಗೆ ಮಾತಾಡ್ಸಿದ್ರೆ ಆಯ್ತು . ಗೊತ್ತಾದ್ರೆ ಏನ್ ಮಾಡೋದು..? ಅದು ಗೊತ್ತಾದಾಗ್ ಯೋಚನೆ ಮಾಡೋಣ . ಅಥವಾ ದೀಪಾವರ್ನ ಸಮಾಧಾನ ಪಡಿಸುವ ಪ್ರಯತ್ನ ಪಡೋಣ ಅಂತ ಅವರಿಗೆ ....
“ದೀಪಾವರೆ” ಅಂತ ಮೆಸೇಜ್ ಮಾಡೇ ಬಿಟ್ಟೆ.
ಅದು ರಾತ್ರಿ ಎಂಟರ ಸಮಯ , ಅವರು ರಿಪ್ಲೇ ನಾಳೆ ಮಾಡಬಹುದು ಅಂತ ಸುಮ್ನಾದೆ . ಆದರೆ ಮೆಸೇಜ್ ಮಾಡಿ ಕೆಲವು ನಿಮಿಷಗಳಿಗೆ ರಿಪ್ಲೇ ಬಂತು “ಯಾಕ್ರೀ..? ಯಾಕ್ ಮೆಸೇಜ್ ಮಾಡ್ತಿದ್ದೀರಾ , ಹೇಳಿದಿನಿ ತಾನೆ ಮಾತಾಡೂದು ಬೇಡ ಅಂತ ಮತ್ತೆ ಏನಾಗಿದೆ ನಿಮಗೆ” ಅಂತ .
ನಾನು “ಒಂದ್ ಸಲ ಮಾತಾಡಬೇಕಿತ್ತು ಪ್ಲೀಸ್” ಅಂತ ಹಾಕ್ದೆ... ಆ ಕಡೆಯಿಂದ “ಓಕೆ” ಅಂತ ಬಂತು .
ಇವಾಗ ಅವರನ್ನ ಹೇಗಾದರೂ ಮಾಡಿ ಒಲಿಸಿಕೊಳ್ಳಬೇಕು ಅಂತ ಕಾಲ್ ಮಾಡಿ ಬೇರೊಂದು ಪ್ರಪಂಚನ ತೆರೆಯೊಕೆ ಶುರು ಮಾಡ್ದೆ... “ರೀ ದೀಪ ಪ್ಲೀಸ್... ನಿಮ್ ಜೊತೆ ಮಾತಾಡ್ದೆ ನನಗೆ ಇರೋಕೆ ಆಗ್ತಿಲ್ಲ , ನಿಮ್ಮ ನೋಟ , ನಿಮ್ಮ ಸೌಂದರ್ಯ , ನಿಮ್ಮ ಮಾತುಗಳು ನನ್ನನ್ನ ನಿಮ್ ಹತ್ರಾನೆ ಇರು ಅಂತ ಕಟ್ಟಾಕ್ತಿವೆ . ನೀವು ನಗ್ನಗ್ತಾ ಇರೋ ಪ್ರತಿ ಫೋಟೋನೂ ನನ್ನ ಕೊಲ್ಲುತ್ತಿವೆ... ನಿಮ್ ಜೊತೆ ಮಾತುಗಳನ್ನಾಡದ ದಿನಗಳು ನನಗೆ ಏನೋ ಕಳೆದುಕೊಂಡೆ ಅನ್ನೋತರ ಇರುತ್ತೆ . ಪ್ರತಿಗಳಿಗೆನು ನಿಮ್ಮನ್ನು ಮನಸ್ಸು ಬಯಸ್ತಿದೆ . ನನಗ್ ಆಗ್ತಿಲ್ಲ ನಿಮ್ ಜೊತೆ ಮಾತಾಡದೆ ಇರೋಕೆ . ಕೊನೆಪಕ್ಷ ನನ್ ಫೋನ್ ಮಾಡ್ದಾಗ ಉಸಿರಾಡಿ ಸಾಕು... ಹಾ ಉಸಿರಲ್ಲಿ ನಾನು ಬೆರೀತೀನಿ . ಆದರೆ ಪ್ಲೀಸ್ ಮಾತಾಡೋದೆ ಬೇಡ ಅನ್ಬೇಡಿ.... ಮಾತಿಲ್ಲದ ಮೌನಿ ತರ ಯಾಕಿದೀರಾ ಏನಾದರೂ ಹೇಳಿ” ಅಂತ ಕೇಳ್ದೆ .
ನನ್ನ ಮಾತಿಂದ ಹಚ್ಚಿದ ಕಿಡಿ . ಅಲ್ಲಿ ಅವರ ಮನಸ್ಸಲ್ಲಿ ಯಾವ ರೀತಿ ಬೆಂಕಿ ಆಯ್ತೋ ಗೊತ್ತಿಲ್ಲ...! ಅದು ಉರಿಯೋಕೆ ಶುರು ಆಯ್ತು .
ನಾನು “ದೀಪಾವ್ರೆ ನಿಮ್ಮ ಜೊತೆ ಮಾತಾಡೊದನ್ನ ನಾನು ಸುಕನ್ಯಾಗೆ ಹೇಳೋದಿಲ್ಲ... ಹೇಳೋದೇ ಬೇಡ. ಸರಿನಾ..?” ಅಂದಾಗ . ಅವರು ಒಪ್ಕೊಂಡ್ ಬಿಟ್ರು . ಅಲ್ಲಿಗೆ ಅವರ ಮನಸ್ಸಿನ ಮೂಲೆಯಲ್ಲೊಂದು ನನ್ನ ಜಾಗ ಫಿಕ್ಸ್ ಮಾಡಿಕೊಂಡೆ .
ಜೊತೆಗೆ ನನಗೊಂದು ಪ್ರಶ್ನೆ ಕಾಡ್ತಾನೆ ಇತ್ತು.
ಅಷ್ಟೊಂದ್ ಸುಂದರವಾಗಿರೊ ಅವರು , ಎಲ್ಲರ ಜೊತೆ ಖುಷಿಯಿಂದ ಮಾತಾಡೊ ಅವರು , ಲವಲವಿಕೆಯಿಂದ ಇರೋರು.. ಎಷ್ಟೋ ವಿಷಯ ತಿಳ್ಕೊಂಡಿರೋರು ಅವರ ಜೀವನದಲ್ಲಿ ಅಂಥದ್ದೇನಾಗಿದೆ .
ಸುಕನ್ಯಾ ಮೊದ ಮೊದಲು ಹೇಳ್ತಾನೆ ಇದ್ಲು. ಅವರಿಗೆ ಯಾವುದೇ ಕಾರಣಕ್ಕೂ ಬೇಜಾರಾಗೋತರ ಮಾತಾಡಬೇಡ , ನೋವು ಮಾಡಬೇಡ ಅವರು ತುಂಬಾ ನೊಂದಿದ್ದಾರೆ, ಆದಷ್ಟು ಅವರನ್ನು ಖುಷಿ ಪಡಿಸೋಕೆ ಪ್ರಯತ್ನಪಡು ಅಂತ . ನನಗೆ ದೀಪಾವರು ಮತ್ತೆ ಸಿಕ್ಕಿದ್ದು ಬಹಳ ಖುಷಿಯಾಗಿ ಎಲ್ಲಾ ಯೊಚನೆಗಳನ್ನು ಮರೆತುಬಿಟ್ಟೆ .
ಆದರೆ ಸಮಾಜದ ಪ್ರಕಾರ ಹೋದರೆ ನಾನೊಬ್ಬ ಕೆಟ್ಟ ವ್ಯಕ್ತಿ ಅನ್ಬೊದು .
ಅವತ್ತಿಂದ ನಾನು... ದೀಪಾವರ ಜೊತೆ ಹೆಚ್ಚು ಕಾಲ ಮಾತಾಡೋಕೆ ಶುರು ಮಾಡ್ದೆ... ಮಾತುಗಳ ಮಧ್ಯೆ ವಿದ್ಯೆ, ತಿಳುವಳಿಕೆ , ಜ್ಞಾನದ ಸಂಭಾಷಣೆ ...ಅವರ ಊರಿನ ಸ್ಥಿತಿಗತಿ.. ಹೀಗೆ ಮಾತಾಡಬೇಕಾದರೆ “ನಿನಗೆ ಅವ್ಯಕ್ತ ಅಂತ ಸರಿಯಾಗಿ ಹೆಸರಿಟ್ಟಿದ್ದಾರೆ ನೀನು ಕೃಷ್ಣನೆ” ಅಂತಿದ್ರು . ನಾನು “ಹೌದ್ ಬಿಡ್ರಿ ನಾನು ಕೃಷ್ಣನೆ” ಅಂತ ಸುಮ್ಮಾಗ್ತಿದ್ದೆ .
ಅವರು “ಅವ್ಯಕ್ತ ಯಾಕೆ ಯಾವಾಗಲೂ ರೀ.. ರೀ.. ಅಂತ ಕರೀತಿಯ ಸ್ವಲ್ಪ ಸಲಿಗೆ ಕೊಟ್ಟು ಮಾಮೂಲಿಯಾಗಿ ಮಾತಾಡಬಹುದಲ್ಲ” ಅಂತ ಕೇಳ್ತಿದ್ರು... “ನೀನು ರೀ ರೀ ಅಂತ ಕರಿಯೊದ್ರಿಂದ ನಾನು ಕೂಡ ನಿನ್ನ ರೀ... ಅಂತಾನೇ ಕರಿ ಬೇಕಾಗುತ್ತೆ , ಮಾಮೂಲಿಯಾಗಿ ಮಾತಾಡು” ಅಂತಿದ್ರು.
ನಾನು “ಇಲ್ಲ ದೀಪಾವರೆ ನನಗೆ ನಿಮನ್ನ ರೀ.. ರೀ.. ಅಂತ ಕರ್ಯೋದ್ರಲ್ಲೆ ಖುಷಿ ನಾನ್ ಹಾಗೆ ಕರೀತಿನಿ ಸರಿನಾ” ಅಂದೆ .
ಅವ್ರು ನಗ್ತಾ ಸುಮ್ಮನಾದ್ರು .
ಹೀಗೆ ದಿನಗಳು ಕಳೆದಂತೆ ಮಾತುಗಳು ತೀರಾ ಹತ್ತಿರ ಆದ್ವು... ಮನಸ್ಸು ಮಾತಿಗಿಂತ ಹತ್ತಿರ ಆಗ್ತಿತ್ತು... !
ಒಂದು ದಿನ ಮಾತಾಡಬೇಕಾದರೆ ನಾನು “ದೀಪಾವರೆ ನೀವು ಸೀರೆಲಿ ಇರಬೇಕಾದರೆ ತುಂಬಾ ಚೆನ್ನಾಗಿ ಕಾಣ್ತೀರ” ಅಂದೆ .
ಅವ್ರು “ಹೌದಾ..? ಹೇಗ್ ಕಾಣ್ತೀನಿ” ಅಂದ್ರು . ನಾನು “ದೀಪಾವರೆ ಗುಡಿಯಲ್ಲಿರೊ ಚಿನ್ನದ ಕಳಸದ ತರ ಮಿಂಚುತಿರ್ತೀರ ....ನಿಮಗ್ ಗೊತ್ತಾ ಅವಾಗ ನಿಮ್ಮ್ ರೂಪ ದುಪಟ್ಟಾಗಿರುತ್ತೆ.. ಆಗ ನಿಮ್ಮ ಅಂದಕ್ಕೆ ಚಂದಕ್ಕೆ ನಾನು ಬರೀ ಸೋಲೋದಲ್ಲ...
ಬೀಸೊ ಗಾಳಿಲಿ ತೇಲಿ ಹೋಗ್ತೀನಿ,
ಹರಿಯೋ ನೀರಲ್ಲಿ ಮುಳುಗಿ ಹೋಗ್ತೀನಿ,
ನೀವಾಡೋ ಮಾತಲ್ಲಿ ಕರಗಿ ಹೋಗ್ತೀನಿ,
ನೀವ್ ನೊಡೊ ನೊಟ್ದಲ್ಲಿ ಚದುರಿ ಹೋಗ್ತೀನಿ...” ಅಂದೆ .
ಅವರು “ಹೂ... ಸಾಕಪ್ಪ ಬಿಟ್ರೆ ಇನ್ನೇನ್ ಹೇಳ್ತೀಯೋ” ಅಂದ್ರು .
ನಾನು “ನೀವು ಜಿಂಕೆ ನೋಡಿದಿರಾ” ಅಂದೆ . ಅವರು “ಹೂ... ನೋಡಿದಿನಿ , ಬಟ್ ನಿಜವಾಗ್ಲೂ ನೋಡಿಲ್ಲ ಯಾಕೆ?” ಅಂದ್ರು .
ನಾನು “ಅಲ್ಲ ದೀಪಾವರೇ.. ನೀವೇ ಒಂದು ಜಿಂಕೆ ನೀವು ನಿಮ್ಮನ್ನು ನೋಡ್ಕೊಂಡರೆ ಸಾಕಪ್ಪ” ಅಂದೆ.
ಅವರು ...“ಹೋ! ನಾನು ಜಿಂಕೆನಾ.. ಹಾಗಾದ್ರೆ ನೀನೇನು ಅವ್ಯಕ್ತ” ಅಂದ್ರು.
ನಾನು “ಏನ್ ದೀಪಾವರೇ ಹೀಗಂತೀರಾ ನೀವು ಜಿಂಕೆ ಅಂದಮೇಲೆ ನಾನು ಹುಲಿ ತಾನೇ” ಅಂದೆ.
ಅದಕ್ಕೆ ಅವರು “ಓ.. ಹೌದಾ ಹಾಗಾದ್ರೆ ಹುಲಿಗೆ ಬೇಟೆಯಾಡೋ ಕನಸೆಲ್ಲಾ ಇಟ್ಕೋಬೇಡ ಅಂತ ಹೇಳು” ಅಂದ್ರು.
ನಾನು “ಕನಸೆಲ್ಲ ಇಲ್ಲ ದೀಪಾವರೇ ವಾಸ್ತವ ಹೇಳ್ದೆ” ಅಂದೆ.
ಅವರಿಗೆ ಒಂದೇ ಸಲ... ಎಲ್ಲಿತ್ತೊ ಕೋಪ ಗೊತ್ತಿಲ್ಲ ಅವರ ಮಾತಿನ ವರಸೆನೆ ಚೇಂಜ್ ಆಗೋಯ್ತು...
“ನೆಟ್ಟುಗ್ ಮಾತಾಡಿದ್ರೆ ಸರಿ... ಇಲ್ಲ ಸರಿ ಇರಲ್ಲ” ಅಂತ ಹೇಳಿ ಕಾಲ್ ಕಟ್ ಮಾಡಿಬಿಟ್ಟರು.
ನನಗೆ ನನ್ನ ಮಾತಿನ ಶೈಲಿ ಸರಿ ಇಲ್ಲ ಅಂತ ಅವಾಗ ಗೊತ್ತಾಯ್ತು .ಸಾರಿ ಕೇಳೋಣ ಅಂತ ಮತ್ತೆ ವಾಪಸ್ ಕಾಲ್ ಮಾಡ್ದೆ.. ಅವಾಗ ರಿಂಗಾಯಿತು ರಿಸೀವ್ ಮಾಡ್ಲಿಲ್ಲ. ಮತ್ತೆ ಟ್ರೈ ಮಾಡಿದೆ ಸ್ವಿಚ್ ಆಫ್ ಬಂತು. ಕೊನೆಗೆ ಅವರತ್ರ ಸಾರಿ ಕೇಳಲು ಆಗಲಿಲ್ಲವಲ್ಲ ಅಂತ ಬೇಜಾರಾಯಿತು.
ಆ ಕ್ಷಣ ಥಟ್ಟಂತ ನೆನಪಿಗೆ ಬಂದಿದ್ದು ಸುಕನ್ಯಾ. ಇಲ್ಲಿ ನನ್ನ ಮತ್ತೆ ಸುಕನ್ಯಾಳ ಫ್ರೆಂಡ್ಶಿಪ್ ತಕ್ಕಮಟ್ಟಿಗೆ ನೆಲಕಚ್ಚಿತ್ತು . ಅಷ್ಟೇ ಅಲ್ಲದೆ.. ಅಲ್ಲಿ ದೀಪಾವರ ಮತ್ತು ಸುಕನ್ಯಾಳ ಫ್ರೆಂಡ್ಶಿಪ್ ತಕ್ಕಮಟ್ಟಿಗೆ ಗೋಪುರ ಆಗಿತ್ತು .
ಅವರಿಬ್ಬರ ಸ್ನೇಹ ಎಷ್ಟರಮಟ್ಟಿಗೆ ಇತ್ತು ಅಂದ್ರೆ ದೀಪಾವರು ನನ್ನ ಜೊತೆ ಮಾತಾಡುವಾಗ ಅರ್ಧ ಮಾತು ಸುಕನ್ಯಾ ಬಗ್ಗೆ ಹೇಳ್ತಿದ್ರು... ಅವರಿಬ್ಬರು ಒಳ್ಳೆ ತಾಯಿ ಮಗುತರ ಜೊತೆಯಾಗಿ ಹೋಗಿದ್ದರು.. ಆದರೆ ಅವರಿಬ್ಬರಲ್ಲಿ ತಾಯಿ ಯಾರು ಮಗು ಯಾರು ಅಂತ ಗುರುತು ಸಹ ಹಿಡಿಯೋಕ್ ಆಗ್ತಿರ್ಲಿಲ್ಲ . ಅವರಿಬ್ಬರ ಸ್ನೇಹ ನೋಡಿ ನಿಜವಾಗಲೂ ನನಗೆ ಹೊಟ್ಟೆಕಿಚ್ಚು ಬರುತ್ತಿತ್ತು .
ಇಲ್ಲಿ ದೀಪಾವರು ನನ್ನ ಜೊತೆ ಮಾತು ಬಿಟ್ಟಿರೊದನ್ನ ಸುಕನ್ಯಾಗೆ ಹೇಳೊ ಹಾಗೆ ಇಲ್ಲ... ಯಾಕಂದ್ರೆ ಸುಕನ್ಯಾ ಪ್ರಕಾರ ನಾನು ದೀಪಾವರ ಜೊತೆ ಮಾತೇ ಆಡ್ತಿಲ್ಲ .
ಎರಡ್ ದಿನಗಳಾದರೂ... ದೀಪಾವರು ನನಗೆ ಫೋನ್ ಮಾಡ್ಲಿಲ್ಲ. ನನ್ನ ಫೋನ್ ಕೂಡಾ ರಿಸೀವ್ ಮಾಡ್ತಿರಲಿಲ್ಲ .
ಮಾರನೇ ದಿನ ಬೆಳಗ್ಗೆನೇ ದೀಪಾವರು ನನಗೆ ಫೋನ್ ಮಾಡಿದ್ರು ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಯಿತು . ರಿಸೀವ್ ಮಾಡಿ ನಾನೇ ಮೊದಲು ಸಾರಿ ಕೇಳ್ದೆ ಇನ್ನೊಂದ್ಸಲ ಹೀಗೆಲ್ಲ ಮಾತಾಡಲ್ಲ ಅಂದೆ. ಅವರು “ಇರ್ಲಿ ಬಿಡು ನನಗೆ ನಿನ್ನ ವಾಯ್ಸ್ ಕೇಳದೆ ಇರೋಕೆ ಆಗ್ತಿಲ್ಲ ” ಅಂದ್ರು .
ಅವರ ಮಾತು ಯಾಕೋ ನನ್ನ ಪರವಾಗಿದೆ ಅಂತ ಅನಿಸ್ತಿತ್ತು .
ಹೀಗೆ ನಮ್ಮಿಬ್ಬರ ಸಲಿಗೆ , ಸಲ್ಲಾಪ , ಸಿಹಿಯಾದ ಮಾತು , ತಿಳಿಯಾದ ಭಾವನೆ , ಮಿತಿಮೀರಿದ ಆಗಿತ್ತು....
ಒಂದು ದಿನ ನಾನು ಶಿವಮೊಗ್ಗಕ್ಕೆ ಬರುತ್ತಿರೊ ವಿಚಾರ ಹೇಳ್ದೆ . “ಬೀದರ್ ನ ಕೆಲಸಕ್ಕೆ ಒಂದು 15 ದಿನ ರೆಸ್ಟ್ ಕೊಟ್ಟು ಶಿವಮೊಗ್ಗದಲ್ಲಿ ಆರಾಮಾಗಿ ಇರೋಣ ಅಂತ ಅನ್ಕೊಂಡಿದ್ದೀನಿ . ಸುಕನ್ಯಾಗೆ ಶಿವಮೊಗ್ಗಕ್ಕೆ ಬರುತ್ತಿರೊ ವಿಚಾರ ಹೇಳ್ತೀನಿ . ಅವಳು ಖಂಡಿತ, ಚಿಕ್ಕಮಗಳೂರಿನ ಮನೆಗೆ ಕರೀತಾಳೆ . ಅವಳ ಮದುವೆಗೂ ಸಹ ಹೋಗಿರಲಿಲ್ಲ... ಈ ಸಲ ಅವರ ಜೋಡಿ ನೋಡೋ ನೆಪದಲ್ಲಿ ನಿಮ್ಮನ್ನ ನೋಡಕ್ಕೆ ಬರ್ತೀನಿ” ಅಂದೆ .
“ಆಯ್ತು ಬನ್ನಿ ...ನಿಮಗೋಸ್ಕರ ಅಂತಾನೆ ನಮ್ಮ ಕಡೆ ಜೋಳದ ರೊಟ್ಟಿ ಮಾಡ್ತೀನಿ” ಅಂದ್ರು .
ನಾನು “ಅಷ್ಟೇನಾ” ಅಂದೆ .
“ಏನ್ ಬೇಕು ಕೇಳಿ ಮಾಡಿಕೊಡೊಣ” ಅಂದ್ರು
ನಾನು “ರೊಟ್ಟಿಗೆಲ್ಲ ನಮಗೆ ಹೊಟ್ಟೆ ತುಂಬಲ್ಲ” ಅಂದೆ. “ಹೋ, ಹೌದಾ.. ನಾವು ಅನ್ನಾನು ಮಾಡ್ತೀವಿ ಬನ್ನಿ” ಅಂದ್ರು.
“ಅನ್ನಕ್ಕೂ... ಹೊಟ್ಟೆ ತುಂಬಲ್ಲ” ಅಂದೆ.
“ಆಯ್ತು ಸ್ವೀಟ್ ಮಾಡ್ತೀನಿ ಬನ್ನಿ” ಅಂದ್ರು.
ನಾನು ಸುತ್ತಿ ಬಳಸಿ ಹೋಗೋದು ಯಾಕೆ ಅಂತ ಯೋಚನೆ ಮಾಡಿ “ರೀ..ದೀಪಾವರೆ ನನಗೆ ನಿಮ್ಮ ಊಟ ಸವಿಯೋದರ ಜೊತೆ... ನಿಮ್ಮ ಅಂದಾನು ಸವಿಬೇಕು ಅಂತ ಆಸೆ ರೀ..” ಅಂದೆ.
ಅವರು “ರೀ..ಯಪ್ಪಾ..ಸುಮ್ನೆ ಏನೇನೋ ಹಾಗೆಲ್ಲ ಮಾತಾಡಬೇಡಿ ” ಅಂದ್ರು .
ನಾನು “ಆಯ್ತು ಬಿಡಿ ಏನು ಅಂದುಕೊಳ್ಳಲ್ಲ . ಹಾಗೆ ಬರ್ತೀನಿ ಅಂದಾನ ಸವಿಯೋ ಅವಕಾಶ ಕೊಡ್ತಿರಾ” ಅಂದೆ.
“ಥೂ ಕರ್ಮ ಕೋತಿ ತರ ಏನೇನೋ ಮಾತಾಡಬೇಡಿ ಆಯ್ತು ನೋಡೋಣ ಬನ್ನಿ” ಅಂದ್ರು.
ಅಷ್ಟೇ ನನಗೆ ಸ್ವರ್ಗಕ್ಕೆ ಮೂರೇ ಗೇಣು..! ಅನ್ನೋದಕ್ಕಿಂತ , ಸ್ವರ್ಗದಲ್ಲೇ ಇದಿನೇನೋ ಅನ್ನಿಸ್ಬಿಡ್ತು .
ಅವರ ಒಪ್ಪಿಗೆಯ ಮಾತು ಮನಸ್ಸಿನ ಆಲೋಚನೆಗಳಿಗೂ ಮೀರಿ... ಒಪ್ಪುವ , ಅಪ್ಪುವ , ಅಪರೂಪದ ಕ್ಷಣ ಎನಿಸಿತು.
ಇನ್ನೂ ತಡ ಮಾಡೋದು ಬೇಡ ಅಂತ ಮುಂದಿನ ವಾರನೇ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದೆ .
ನಾನು ಮತ್ತೆ ಸುಕನ್ಯಾ ಚಿಕ್ಕವಯಸ್ಸಿಂದ ಓದಿದ್ದು ಶಿವಮೊಗ್ಗದಲ್ಲಿ . ಅವಳು ನಾನು ಹೆಚ್ಚಾಗಿ ಮಾತಾಡುತ್ತಿರಲಿಲ್ಲ , ನಮ್ಮಿಬ್ಬರ ಸ್ನೇಹ ಹೇಗೆ ಬೆಳಿತೊ ಗೊತ್ತಿಲ್ಲ . ಕಾಲೇಜು ಮುಗ್ಸಿ ಡಿಗ್ರಿಗೆ ಹೋದಾಗ ನಾವಿಬ್ಬರೂ ಬೇರೆ ಬೇರೆಯಾದ್ವಿ . ಅವಳ ಮದುವೆಗೂ ಸಹ ನಾನು ಹೋಗ್ಲಿಲ್ಲ .
ಹೀಗೆ ಅವಳಿಂದ ಜಾಸ್ತಿನೇ ದೂರ ಇದ್ದ ನಾನು ಮತ್ತೆ ದೀಪಾವರ ದೆಸೆಯಿಂದ ಹತ್ತಿರವಾದೆ .
ದೀಪಾವರಿಗೋಸ್ಕರನಾದ್ರೂ ಈ ಸಲ ಸುಕನ್ಯಾ ಮತ್ತು ಅವಳ ಮನೆಯವರ್ನ ನೋಡ್ಕೊಂಡು ವಿಶ್ ಮಾಡಿ ಬರಬೇಕು ಅಂತ ಅನ್ಕೊಂಡಿದ್ದೆ . ಆದರೆ ದುರದೃಷ್ಟವಶಾತ್ ನಾನು ಮತ್ತೆ ಸುಕನ್ಯಾ ಯಾವುದೋ ಸಣ್ಣ ವಿಚಾರಕ್ಕೆ ಮತ್ತೆ ಜಗಳ ಮಾಡ್ಕೊಂಡು ದೂರ ಆದ್ವಿ .
ಈಗ ಸುಕನ್ಯಾ ಯಾವುದೇ ಕಾರಣಕ್ಕೂ ನನ್ನನ್ನ ಅವಳ ಮನೆಗೆ ಕರ್ಯೋಲ್ಲ ಅನ್ನೋದು ಫಿಕ್ಸ್ ಆಯ್ತು. ನಾನಾಗೆ ಬರ್ತೀನಿ ಅಂದರೆ ಅವಳೇನು ಬೇಡ ಅನ್ನಲ್ಲ , ಆದರೆ ಅವಳಾಗೇ ಕರಿದಲೆ ನಾನಾಗೆ ಹೋದರೆ ಅದು ಸರಿ ಅನ್ಸಲ್ಲ ಅಂತ . ಈ ವಿಚಾರನ ದೀಪಾವರ ಜೊತೆ ಮಾತಾಡ್ದೆ.
ಅವ್ರು..“ಹೌದಾ ಹೀಗ್ ಆಯ್ತಾ ಅಯ್ಯೋ... ಏನ್ ಮಾಡ್ತೀರಾ ಈಗ”ಅಂದ್ರು .
ನಾನು ಜಾಸ್ತಿ ಯೋಚನೆ ಮಾಡ್ಲಿಲ್ಲ “ನಾನು ಫಿಕ್ಸ್ ಆಗಿದಿನಿ ದೀಪಾವರೆ ನಿಮ್ಮನ್ನ ನೋಡೋಕೆ ಬರ್ತಿದ್ದೀನಿ ಹೇಳಿ ಯಾವಾಗ ಬರ್ಲಿ” ಅಂದೆ .
ಅವ್ರು “ನನಗನ್ಸುತ್ತೆ ಬೇಡ ಅವ್ಯಕ್ತ” ಅಂದ್ರು .
ನಾನು “ಇಲ್ಲ ಇಲ್ಲ ನೀವು ಮಾತು ಕೊಟ್ಟಿದ್ದೀರಾ ಈತರ ಉಲ್ಟಾ ಹೊಡಿಬಾರದು” ಅಂದೆ .
ಅವರು “ಬೇಡವೇ ಬೇಡ ಮಾರಾಯ ಸುಕನ್ಯಾನಾ.. ನೋಡೋಕ್ ಆದ್ರೆ ಮಾತ್ರ ಬನ್ನಿ ಇಲ್ಲಾಂದ್ರೆ ಬೇಡ ” ಅಂದ್ ಬಿಟ್ಟ್ರು .
ನಾನು “ಸುಕನ್ಯಾನ ನೋಡೋಕ್ ಬರ್ತಿರೋದು ನಿಮ್ಮನ್ನ ನೋಡಕ್ಕೆ ಅಂತ... ಇವಾಗ ಏನೇನೋ ಆಗೋಗಿದೆ ನಾನು ನಿಮ್ಮನ್ನು ನೋಡಕ್ಕೆ ಬರಲೇಬೇಕು” ಅಂದೆ .
ಅವ್ರು “ಯಾಕೆ ಈತರ ಹಠ ಮಾಡುತ್ತಿದ್ದೀಯಾ ನೀನು. ನನ್ನನ್ನ ನೋಡಬೇಕು ಅಂದ್ರೆ ರಾತ್ರಿ ಬರಬೇಕು. ನೈಟ್ ಅವರು ಕೆಲಸಕ್ಕೆ ಹೋಗಿದ್ದಾಗ , ಜೊತೆಗೆ ನನ್ನ ಮಕ್ಕಳನ್ನ ಮಲಗಿಸಿ ಆಮೇಲೆ ನಿನ್ನ ಕರೆಸಿಕೊಳ್ಬೇಕು ಮತ್ತೆ ಬೆಳಗ್ಗೆ 4ಕ್ಕೆ ನೀನು ಎದ್ದೊಗ್ಬೇಕು....! ಯಪ್ಪಾ ದೇವ್ರೆ , ನನಗೆ ಈ ವಿಷಯ ನೆನೆಸಿಕೊಂಡರೆ ಭಯ ಆಗುತ್ತೆ . ಎದೆ ಜುಮ್ ಅನ್ನುತ್ತೆ. ಬೇಡವೇ ಬೇಡ ನಾನ್ ಆ ತಪ್ಪನ್ನ ಮಾಡೋದೇ ಇಲ್ಲ ಪ್ಲೀಸ್ ಬಿಟ್ಟು ಬಿಡು” ಅಂದ್ರು .
ನಾನು “ಪ್ಲೀಸ್ ದೀಪಾವರೆ... ಏನೂ ತೊಂದರೆ ಆಗೋದಿಲ್ಲ , ನಿಮ್ಮ ಆಸೆಗಳನ್ನ ಯಾಕೆ ಮುಚ್ಚಿಡ್ತಿದಿರ .
ಆ ನಿಮ್ಮ ಮಾತುಗಳು , ನಿಮ್ಮ ತಡವರಿಕೆ , ನಿಮ್ಮ ವೇದನೆ.. ನನಗೆ ಅರ್ಥ ಆಗುತ್ತೆ . ದೀಪಾವರೆ... ಪ್ಲೀಸ್ ಮಾತನ್ನ ಮುರೀಬೇಡಿ” ಅಂದೆ .
ಅವರು “ಎಂಥ ಮಾತು ನನಗೆ ಭಯ ಆಗುತ್ತೆ... ಸತ್ತೋಗಿರೋ ನನ್ನ ಆಸೆಗಳನ್ನೆಲ್ಲಾ ಕೆದುಕ್ತಿದಿಯಾ.. ಮತ್ತೆ ಅವಕ್ಕೆಲ್ಲ ಜೀವ ತುಂಬೊ ಕೆಲಸ ಮಾಡಬೇಡ ಸುಮ್ನೆ ಬಿಟ್ಬಿಡು” ಅಂದ್ರು .
ನಾನು “ಇನ್ನು ಭೋರ್ಗರೆವ ಸಮುದ್ರದ ತರ ಇರೋ ಜೀವನಾನ ಮರುಭೂಮಿಯಂಥೆ ಕಲ್ಪಿಸಿ ಕೊಂಡಿರೋದು ನೀವು . ಆಸೆಗಳ ಜೀವರಾಶಿನೆ ತುಂಬಿದೆ . ಆ ಜೀವರಾಶಿಗಳ ಜೊತೆ ಜೀವಿಸೋಕೆ ಒಂದು ಅವಕಾಶ ಕೊಡಿ ” ಅಂದೆ .
“ಮಾತಲ್ಲಿ ನಿಮ್ಮನ್ನ ಮೀರ್ಸೋಕಾಗಲ್ಲ ಅವ್ಯಕ್ತ . ಕೃಷ್ಣಾನೆ ನೀನು” ಅಂದ್ರು .
“ಅಲ್ವಾ ಕೊನೆಗೂ ಒಪ್ಪಿಕೊಂಡ್ರಲ್ಲ . ಸರಿ ನಾಳೆ ಬರ್ಲಾ” ಅಂದೆ .
ಅವರು ದಿಗ್ಭ್ರಾಂತರಾಗಿ .....“ಫಿಕ್ಸ್ ಆಗ್ಬಿಟ್ಟಿದೀಯ” ಅಂದ್ರು.
“ಹೂ... ನಾಳೆನೆ ಬರ್ತೀನಿ ಟೈಮ್ ಹೇಳಿ” ಅಂದೆ.
ಅವರು ಸ್ವಲ್ಪ ಹೊತ್ತು ಯೋಚನೆ ಮಾಡಿ ....“ಆಯ್ತು ಸರಿ ಒಂಬತ್ತಕ್ಕೆ ಬಾ” ಅಂದ್ರು .
ಇವಾಗ.. ನಿಜವಾಗಲೂ ನನಗೆ ಎದೆ ಹೊಡ್ಕೊಳೋಕೆ ಶುರು ಆಯ್ತು. “ಅಯ್ಯೋ! ಒಪ್ಕೊಂಡೇ ಬಿಟ್ಟರಲ್ಲ. ನನಗೆ ಭಯ ಆಗ್ತಿದೆ . ನಾಳೆ ಬೇಡ , ನಾಡಿದ್ ಬರ್ತೀನಿ” ಅಂದೆ.
ಅವರು “ಅವ್ಯಕ್ತ , ನಾಳೆ ಬರೊದಾದರೆ ಬಾ . ಇಲ್ಲ ಬೇಡ. ನನ್ ಮನಸ್ಸು ಚೇಂಜ್ ಆಗಬಹುದು” ಅಂದ್ರು.
ನನಗೆ ಸಂತೋಷ , ಭಯ , ಚಳಿ , ಶಕೆ , ಮಳೆ... ಬರುತ್ತಿದೆ ಅನ್ನೋತರ ಆಯ್ತು .
ನಾನು “ಚಿಕ್ಕಮಗಳೂರಲ್ಲಿ ನಿಮ್ಮ ಅಡ್ರೆಸ್ ನಾ ಹೇಗ್ರಿ ಹುಡುಕೊದು... ನೀವು ಒಂದ್ಸಲ ಸರಿಯಾಗಿ ಅಡ್ರೆಸ್ ಮೆಸೇಜ್ ಮಾಡಿ” ಅಂದೆ.
ಬಂತಪ್ಪ ಮೆಸೇಜು... “ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಇಂದ ಹೊರಗೆ ಬಂದು ಸ್ಟ್ರೈಟ್ ರೋಡ್ , ಸ್ವಲ್ಪ ದೂರದಲ್ಲೇ ಒಂದು ಪೆಟ್ರೋಲ್ ಬಂಕ್ . ಅಲ್ಲಿಂದ 2 ಕಿಲೋಮೀಟರ್ ದೂರದಲ್ಲಿ ಮೀನಾಕ್ಷಿ ಹೋಟೆಲ್ . ಹಾಗೆ ಸ್ಟ್ರೈಟ್ ಬಂದರೆ ಕೆಪಿಆರ್ ಸಿ ಹೋಟೆಲ್ . ಅಲ್ಲಿಂದ ಸ್ವಲ್ಪ ದೂರದಲ್ಲೇ ಹಸಿರುವನ ರೆಸಾರ್ಟ್ . ರೆಸಾರ್ಟ್ನ ಲೆಫ್ಟ್ ಸೈಡಿಂದ ಒಂದು ರೋಡ್ ಹೋಗುತ್ತೆ . ಅಲ್ಲಿಂದ ಮೂರ್ನಾಲ್ಕು ಕಿಲೋಮೀಟರ್ ಬಂದರೆ ಒಂದು ಹಳ್ಳಿಕಟ್ಟೆ ಸಿಗುತ್ತೆ . ಕಟ್ಟೆ ಹತ್ರಾನೆ ಸುಕನ್ಯಾ ಅವರ ಮನೆ . ಕಟ್ಟೆಯಿಂದ ಒಂದು 200 ಮೀಟರ್ ಬಂದ್ರೆ ಒಂದು ಜ್ಯುವೆಲರಿ ಶಾಪ್ ಇದೆ . ಅಲ್ಲಿಗೆ ಬಾ ಸಾಕು ನಾನು ಕಾಣುಸ್ತಿನಿ” ಅಂತ ಹಾಕಿದ್ರು.
ನಾನು ಅದೇ ಮೆಸೇಜ್ನ ತಿರುಗಂಬರ್ಗ ಅಂತ ನೂರಾರು ಸಲ ಓದಿ ಅದರ ನೆನಪಲ್ಲೇ ಒಂದ್ ಸಲ ಈಜಿ ಹೊರಬಂದಾಯ್ತು .....
ಸಡನ್ನಾಗಿ ಯಾರೊ ನನ್ನ ಒಂದು ಸಲ ದಬ್ಬಿದ ಹಾಗಾಯಿತು . ಮುಂದೆ ಹೋಗಿ ಒಂದ್ಸಲ ಹಿಂದೆ ಬಂದೆ .
ಬಸ್ ನ ಡ್ರೈವರ್ ಬ್ರೇಕ್ ಹಾಕ್ದಾಗ ವಾಸ್ತವಕ್ಕೆ ಬಂದೆ .
ಬಸ್ ಒಳಗೆ ಕೂತು ನೆನಪಲ್ಲೆ ನಿದ್ದೆ ಹೋಗಿದ್ದೀನಿ . ಬಸ್ ಎಲ್ಲಿತ್ತು ಅಂತಾನೆ ಗೊತ್ತಾಗ್ಲಿಲ್ಲ . ಕನ್ಣೊರುಸ್ಕೊಂಡು ಅಕ್ಕಾ ಪಕ್ಕಾ ನೋಡ್ತೀನಿ . ಪಕ್ಕದಲ್ಲಿದ್ದ ಹುಡ್ಗೀರು ಯಾವಾಗ್ ಎದ್ದೊದ್ರು ಅಂತಾನೇ ಗೊತ್ತಾಗ್ಲಿಲ್ಲ .
ಅಷ್ಟ್ರಲ್ಲೇ ಕಂಡಕ್ಟರ್ "ಯಾರ್ರೀ..? ಚಿಕ್ಕಮಗಳೂರು ಇಳಿಯೋರು" ಅಂತ ಜೋರಾಗಿ ಕೂಗಿದ . ಜೀವ ಒಂದೇ ಸಲ ಹೊರಗ್ ಬಂದ ಹಾಗೆ ಆಯಿತು.
ಬ್ಯಾಗ್ ನ ತಗೊಂಡು ಹಾಕಿರೋ ಬಟ್ಟೆ ಕೊಳೆ ಆಗಿಲ್ಲ ಅಂತ ಕಂಫಾರ್ಮ್ ಮಾಡಿಕೊಂಡು ಬಸ್ ನಿಂದ ಇಳಿದೆ .
ಏನಿದು ನೆನಪಲ್ಲೇ ಮುಳುಗಿದ್ನಲ್ಲ ಅಂತ ..ನನ್ನಲ್ಲೆ ಖುಷಿಪಡ್ಕೊತ....
ಇಳಿ ಸಂಜೆಯ ತಿಳಿ ತಂಪಿನ ಸಮಯ , ಸೂರ್ಯ ಇನ್ನೂ ಮುಳುಗಿರಲಿಲ್ಲ ದೀಪಾವರು 9 ಗಂಟೆಗೆ ಅಂತ ಹೇಳಿದ್ರು . ನಾನ್ ನೋಡಿದ್ರೆ ಅವಸರವಸರವಾಗಿ ಇಷ್ಟ್ ಬೇಗ ಬಂದಿದ್ದೀನಿ . ಅವರೆ ಫೋನ್ ಮಾಡೋವರೆಗು... ನಾನ್ ಫೋನ್ ಮಾಡೋ ಹಾಗಿಲ್ಲ .
ಅವರೇ ಮಾಡೋವರೆಗೂ ನಾನು ವೇಯ್ಟ್ ಮಾಡಬೇಕು ಅಂತ ತಲೆ ಕೆರ್ಕೊಂಡು..... ಉತ್ತರದ ಕಡೆ ನೆಡ್ಕೊಂಡು ಹೋದೆ .
ಸಿಹಿಯಾಗಿ ಬೀಸೋ ಗಾಳಿ
ಸವಿಯಾಗಿ ಕಾಣೊ ಪರಿಸರ
ಹೆಜ್ಜೆ-ಹೆಜ್ಜೆಗೂ ತವಕ .....
ಎಷ್ಟು ಬೇಗ ರಾತ್ರಿಯಾಗುತ್ತೊ... ಅಂತ ಮನಸ್ಸು ಕುಣಿತಿತ್ತು. ಕುಣಿಯೋ ಮನಸ್ಸಿಗೆ ಸಮಾಧಾನವೇ ಇಲ್ಲ .
ಯಾವಾಗ ನಾನು ದೀಪಾವರನ್ನ ನೋಡ್ತೀನಿ ಅಂತ ಒಳಗೊಳಗೆ ಸ್ಫೋಟಿಸುತ್ತಿದ್ದೆ .
ಎಂದೂ ನೋಡದ ಹೆಣ್ಣೊಂದನ್ನು ಮೊದಲಬಾರಿಗೆ ಸೇರಲು ಹೋಗ್ತಿದ್ದೀನಿ ಅಂತ ಗೊತ್ತಾದಾಗೆಲ್ಲ.. ಏನಾಗುತ್ತೋ ಅನ್ನೋ ವಿಚಿತ್ರ ಅನುಭವ. ಎದೆಯಲ್ಲಿ ವಿಲ ವಿಲ ಅಂತಿತ್ತು .
ನೆಡ್ಕೊಂಡ್ ಹೋಗ್ತಾ ಹೋಗ್ತಾ ಬಹಳ ದೂರ ಬಂದಿದ್ದೆ. ತಿರುಗಿ ನೋಡ್ತೀನಿ ಬಸ್ಸಿಂದ ಇಳಿದುಕೊಂಡ ಜಾಗನೇ ಕಾಣ್ತಾ ಇಲ್ಲಾ .
ಯಾವ ಜಾಗದಲ್ಲಿ ಇದಿನಿ ಅಂತಾನೇ ಗೊತ್ತಾಗ್ತಿಲ್ಲ.
ಪಕ್ಕದಲ್ಲಿ ನಿಂತಿದ್ದ ಆಟೋದೊರ್ ಹತ್ತಿರ ಹೋಗಿ ಕೇಳ್ದೆ “ಅಣ್ಣ... ಕೆಎಸ್ಆರ್ಟಿಸಿ ಬಸ್ ಸ್ಟಾಪ್ ಎಷ್ಟು ದೂರ ಇದೆ” ಅಂತ.
ಅವನು ದಕ್ಷಿಣದ ಕಡೆ ಕೈ ಹಾಕಿ ಹೇಳ್ದ.. “ಬರೀ ಮೂರುವರೆ ಕಿಲೋಮೀಟರ್ ಐವತ್ತು ರುಪಾಯಿ ಕೊಡಿ ಸರ್ ಸಾಕು” ಅಂತ.
ನನಗೆ ನನ್ನ ಮೇಲೆ ನಂಬಿಕೆ ಬರಲಿಲ್ಲ ಮೂರುವರೆ ಕಿಲೋಮೀಟರ್ ಅಂತ ಹೇಳುತ್ತಿದ್ದಂತೆ... ಬಪ್ಪರೇ ಮಗನೇ ಅನ್ಕೊಂಡೆ .
ನಾನು ಬೀದರ್ನಲ್ಲಿ ಇದ್ದಾಗ 100ಮೀಟರ್ ಹೋಗೋಕೆ ಬೈಕ್ ಯೂಸ್ ಮಾಡ್ತಿದ್ದೆ. ಇಲ್ಲಿ ಮೂರುವರೆ ಕಿಲೋಮೀಟರ್ ನೆಡ್ಕೊಂಡ್ ಬಂದಿದಿನಿ.... ತಲೆ ಮುಟ್ಟಿ ನೊಡ್ಕೊತೀನಿ ಲೈಟಾಗಿ ಬೆವರಿರೊ ಫೀಲಿಂಗ್ ಆಯ್ತು.
ಆಟೋದೊರ್ಗೆ “ನೊ... ಟ್ಯಾಂಗ್ಸ್” ಅಂತ ಹೇಳಿ. ಸ್ವಲ್ಪ ಮುಂದೆ ಇದ್ದ ಜ್ಯೂಸ್ ಶಾಪ್ ಗೆ ಹೋಗಿ ಒಂದು ಸಪೋಟ ಜ್ಯೂಸ್ ತಗೊಂಡೆ .
ಒಂದೊಂದು ಗುಟುಕು ಕುಡಿಬೇಕಾದ್ರು ಗೊತ್ತಾಯ್ತು ನನಗೆ ಎಷ್ಟು ಬಾಯರಿಸಿದೆ ಅಂತ.
ಆ ಅಂಗಡಿಯ ಫ್ಯಾನ್ ಗಾಳಿಗೆ ನನ್ನ ...ಆಯಾಸ ಅರ್ಧ ಕಮ್ಮಿಯಾಗಿತ್ತು . ನಿಧಾನವಾಗಿ ಸಪೋಟ ಜ್ಯೂಸ್ ನಾ ಪೂರ್ತಿಯಾಗಿ ಕುಡ್ದೆ . ಹೊಟ್ಟೆ ತುಂಬಿದಾಗಾಯ್ತು . ದುಡ್ಡು ಕೊಟ್ಟು ಹೊರಬಂದೆ .
ಏನೋ ಒಂದು ಶಕ್ತಿ ಒಳಗೆ ತುಂಬಿದೆ ಅನ್ನೋತರ ಫೀಲಿಂಗ್ ಆಗ್ತಿತ್ತು .
ಹೊರಗೆ ಬೀಸೋ ಗಾಳಿಗೆ ತಲೆ ಆಡುಸ್ತಾ ದೀಪಾವರ್ನ ನೆನೆಸಿಕೊಂಡು ತೇಲ್ತಿದ್ದೆ .
ತಕ್ಷಣ ಫೋನ್ ರಿಂಗಾಯಿತು ..ನೋಡಿದ್ರೆ ದೀಪಾವರೆ ಕಾಲ್ ಮಾಡಿದ್ದಾರೆ . ಸಮಯ ನೋಡ್ತೀನಿ 7:15 .
ಬಹಳ ಸಮಯನ ನಾನ್ ರೋಡಲ್ಲೇ ಕಳ್ದಿರೋದು ನೆನುಸ್ಕೊಂಡು ಬೇಸರ ಆಯ್ತು .
ಕಾಲ್ ರಿಸೀವ್ ಮಾಡಿ “ಹೇಳಿ ದೀಪಾವರೇ ಇವಾಗ ನೆನಪಾದ್ನಾ ನಾನು” ಅಂದೆ.
ಅವರು “ಸಾರಿ ಅವ್ಯಕ್ತ , ತುಂಬಾ ಕಾಯಿಸಿಬಿಟ್ನ . ಅವರು ಇವಾಗ ತಾನೆ ಕೆಲಸಕ್ಕೆ ಹೋದ್ರು . ನೀವು ಎಲ್ ಬರ್ತಾಇದ್ದೀರಾ... ಎಷ್ಟೊತ್ ಆಗುತ್ತೆ” ಅಂತ ಕೇಳಿದರು.
ನಾನು “ಸೂರ್ಯ ನಿಮ್ಮೂರ್ ಬಿಡೋಕ್ ಮುಂಚೇನೆ ನಾನ್ ನಿಮ್ಮ ಊರಲ್ಲಿದ್ದೆ...ಅಂಥದ್ರಲ್ಲಿ ಇನ್ನು ಎಲ್ಲಿ ಬರ್ತಿದ್ದೀರಾ ಅಂತ ಕೇಳ್ತೀರಲ್ಲ” ಅಂದೆ.
“ಇಷ್ಟ್ ಬೇಗ ಬಂದ್ರಾ.. ಹೇಳಿದ್ದೆ ತಾನೆ ನಾನು ಒಂಬತ್ತು-ಒಂಬತ್ತುವರೆಗೆ ಬರಬೇಕು ಅಂತ . ಅಷ್ಟೊಂದು ಅವಸರನಾ..?” ಅಂದ್ರು .
ನನಗೆ ಏನು ಹೇಳಬೇಕು ಅಂತ ಗೊತ್ತಾಗ್ಲೇ ಇಲ್ಲ “ಸರಿ ಬರ್ಲಾ ಇವಾಗ” ಅಂದೆ.
ಅವರು “ಬೇಡ , ನಾನು ಸ್ನಾನ ಮಾಡ್ಕೊಂಡು ಬಂದು ಮಕ್ಕಳಿಗೆ ಊಟ ಮಾಡ್ಸಿ ಮಲಗುಸ್ತೀನಿ ಆಮೇಲೆ ಬರೊರ್ವಂತೆ ಅಂತ ಹೇಳ್ತಾ... ಅವ್ಯಕ್ತ ಒಂದು ಮಾತು ಪ್ರಾಮಿಸ್ ಮಾಡಿ” ಅಂದ್ರು.
ನಾನು “ಈ ಟೈಮಲ್ಲಿ ನೀವು ಸೇರೋದೇ ಬೇಡ ಅಂದುಬಿಟ್ಟರೆ... ಇಲ್ಲ ಇಲ್ಲ ನಾನ್ ಪ್ರಾಮಿಸ್ ಮಾಡೋದಿಲ್ಲ” ಅಂದೆ.
ಅವರು “ಅಯ್ಯೋ ಅದಲ್ಲ... ಪ್ರಾಮಿಸ್ ಮಾಡಿ” ಅಂದ್ರು. ನಾನು “ಯಾಕೆ ನನ್ನ ಆಸೆಯಲ್ಲಿ ಏನಾದರೂ ಕ್ಯಾನ್ಸಲ್ ಆಗ್ತಿದಿಯ” ಅಂದೆ.
“ಅಯ್ಯೋ ಇಲ್ಲಪ್ಪ... ಮೊದಲು ಪ್ರಾಮಿಸ್ ಮಾಡು” ಅಂದ್ರು.
ನಾನು “ಸರಿ ಅಂತ” ಮಾಡ್ದೆ.
ಅವರು “ನೋಡು ಅವ್ಯಕ್ತ , ನಾನೇ ಹೇಳೋವರೆಗು ನೀನು ನನ್ನ ಮುಟ್ಟೊ ಹಾಗಿಲ್ಲ” ಅಂದ್ರು.
ನನಗೆ ಉಸಿರು ಹೋಗಿ ಉಸಿರು ಬಂದಾಗಾಯಿತು “ಅಷ್ಟೇ ತಾನೇ , ನಾನ್ ಏನೇನೋ ಅನ್ಕೊಂಡೆ” ಅಂತ ಹೇಳ್ತಾ .
“ಸರಿ ರೀ.. ನೀವೇ ಹೇಳಬೇಕು ಅಲ್ಲಿವರ್ಗೂ ನಾನು ನಿಮ್ಮನ್ನ ಮುಟ್ಟೊದಿಲ್ಲ” ಅಂದೆ. ಅವರು “ಸರಿ ನೀವು ಇವಾಗ... ಎಲ್ಲಿದ್ದೀರಾ ಹೇಳಿ ಬಂದ್ ಬಿಡಿ ನಮ್ ಮನೆ ಹತ್ರ , ಮನೆ ಮೇಲೆ ಸ್ವಲ್ಪ ಹೊತ್ತು ಇರ್ಬೋದು ನೀವು . ಅಲ್ಲೇ ಸೇಫೆ . ಅಲ್ಲೆಲ್ಲೋ ಇರೋದು ಬೇಡ ರೋಡ್ ಅಲ್ಲಿ . ಇವಾಗ ಎಲ್ಲಿದಿರಾ..?” ಅಂದ್ರು.
ನಾನು ತಲೆ ಕೆರ್ಕೊಂಡು “ಜ್ಯೂಸ್ ಶಾಪ್ ಮುಂದೆ ಜ್ಯೂಸ್ ಕುಡಿತ ನಿಂತಿದಿನಿ.. ಯಾವ ಏರೀಯ ಅಂತಾನು ಗೊತ್ತಿಲ್ಲ ಆಲ್ರೆಡಿ ಮೂರುವರೆ ಕಿಲೋಮೀಟರ್ ದೂರ ಬಂದಿದ್ದೀನಿ” ಅಂದೆ.
ಅವರು “ಏನ್ರಿ ಆಗಿದೆ ನಿಮ್ಗೆ.. ಸುಮ್ಮನೆ ಒಂದು ಕಡೆ ಇರೋದಕ್ಕೂ ಆಗಲ್ವಾ ಅಲ್ಲೇ ಇಂಗ್ ಆಡ್ತಿದ್ದೀರಾ ಇಲ್ಲಿಗೆ ಬಂದ್ರೆ ಹೆಂಗೆಲ್ಲಾ ಆಡ್ತಿರೋ... ಕರ್ಮ ಕರ್ಮ ಸರಿ ಆಟೋ ಮಾಡಿಕೊಂಡು ಬನ್ನಿ” ಅಂದ್ರು.
ನಾನು “ಸರಿ” ಅಂತ. ಆಟೋ ಹುಡುಕೊಂಡು ಹೋದೆ ದೀಪಾವರು ಮತ್ತೆ ಕಾಲ್ ಮಾಡಿ “ನಾನು ಸ್ನಾನ ಮಾಡಿಕೊಂಡ್ ಬಂದು ಕಾಲ್ ಮಾಡ್ತೀನಿ ಅಷ್ಟೋತ್ತಿಗೆ ನೀವು ಹತ್ತತ್ರ ಬರ್ತಾ ಇರ್ತೀರಾ.. ಅಡ್ರೆಸ್ ಗೊತ್ತಿದೆ ತಾನೆ ಲಾಸ್ಟ್ ಹಳ್ಳಿಕಟ್ಟೆ ಆಮೇಲೆ ಜುವೆಲ್ಲರಿ ಶಾಪ್ ಓಕೆನಾ” ಅಂದ್ರು.
ನಾನು “ಸರಿ ದೀಪಾವರೆ” ಅಂತ. ಕಾಲ್ ಕಟ್ ಮಾಡಿ ಆಟೋ ಹತ್ತಿರ ಹೋದೆ ಅವರು ಮಾಡಿರೂ ಮೆಸೇಜ್ನ ಅವನಿಗೆ ಹೇಳ್ದೆ .
ಅವನು “ಸರ್ ನನ್ಗೆ ಪೆಟ್ರೋಲ್ಗೊ ಬಂಕ್ ಗೊತ್ತು . ಅದು ಬಿಟ್ಟು ಮೀನಾಕ್ಷಿ ಹೋಟೆಲ್ ಮುಂದೆ ಕೆ ವಿ ಆರ್ ಸಿ ಎಲ್ಲಾ ಗೊತ್ತಿಲ್ಲ ಅಲ್ಲಿವರ್ಗೂ ಬಿಡ್ತೀನಿ ಸರ್ . 80ರೂ ಆಗುತ್ತೆ” ಅಂದ.
ನಾನು “ಅಣ್ಣಾ.. ನಾನು ಪೆಟ್ರೋಲ್ ಬಂಕಿಗೆ ಹೋಗಿ ನಿಮ್ಮ ಆಟೋಗೆ ಪೆಟ್ರೋಲ್ ತುಂಬುಸ್ಲ.... ಹಳ್ಳಿಕಟ್ಟೆ ಹತ್ತಿರ ಹೋಗಬೇಕು” ಅಂದೆ.
ಅವರು “ಇಲ್ಲ ಸರ್... ನನಗೊತ್ತಿಲ್ಲ ಮುಂದೆ ಕೇಳಿ” ಅಂದ.
ಆಯ್ತು ಬಿಡಪ್ಪ ಅಂತ ಇನ್ನೊಬ್ಬನ ಕೇಳ್ದೆ.. ಅವನೂ ಗೊತ್ತಿಲ್ಲ ಅಂದ , ಮತ್ತೊಬ್ಬನ್ ಕೇಳ್ದೆ... ಅವನು ಸಹ ಗೊತ್ತಿಲ್ಲ ಅಂದ.. ನನಗೂ ಸಾಕಾಗೋಯ್ತು ಅಲ್ಲೇ ಪಕ್ಕದಲ್ಲಿ ಸ್ವೀಟ್ ಅಂಗಡಿ ಕಾಣಿಸ್ತು .
ಅಲ್ಲ ದೀಪವರ್ನ ನೋಡೋಕೆ ಅಂತ ಫಸ್ಟ್ ಟೈಮ್ ಅವರ್ ಮನೆಗೆ ಹೋಗ್ತಿದ್ದೀನಿ , ಬರೀ ಕೈಯಲ್ಲಿ ಹೋದ್ರೆ ಸರಿನಾ ಅಂತ ಡಿಫ್ರೆಂಟ್ ಆಗಿರುವ ಸ್ವೀಟ್ಸ್ ತಗೊಂಡೆ . ಮತ್ತೊಬ್ಬ ಆಟೋದವರನ್ನು ಹೋಗಿ ಅಡ್ರೆಸ್ ಕೇಳ್ದೆ.. ಅವರು ಸಹ ಗೊತ್ತಿಲ್ಲ ಅಂದ್ರು .
ಅಷ್ಟೊತ್ತಿಗೆ ದೀಪಾವರೆ ಫೋನ್ ಮಾಡಿ “ಎಲ್ಲ್ ಬರ್ತಿದ್ದೀರಾ” ಅಂದ್ರು.
ನಾನು “ಯಾವ ಕಾಡಲ್ರೀ.. ಇದ್ದೀರಾ ನೀವು , ಯಾವ ಆಟೋದವರು ಗೊತ್ತಿಲ್ಲ ಗೊತ್ತಿಲ್ಲ ಅಂತಾರೆ , ಭೂಮಿ ಮೇಲಿರೋ ಅಡ್ರೆಸ್ ಕೊಟ್ಟಿದ್ದೀರಾ ತಾನೇ” ಅಂತ ಕೇಳ್ದೆ .
ಅವರು “ಅವ್ಯಕ್ತ , ಸಾರಿ ಕಣೋ... ತುಂಬಾ ಟೆನ್ಷನ್ ಆಗಿರೂತರ ಇದ್ದೀಯಾ... ಪೆಟ್ರೋಲ್ ಬಂಕ್ ಹತ್ರ ಇದ್ದಿದ್ರೆ ನಿನಗೆ ಸಿಗೂವು ನೀನು ಎಲ್ಲೆಲ್ಲೋ ಹೋಗಿ ಕೇಳಿದ್ರೆ” ಅಂತ ಬೇಜಾರಾದರು.
“ಅಯ್ಯೋ ಹೋಗ್ಲಿ ಬಿಡಿ ಟೆನ್ಶನ್ ಏನಿಲ್ಲ ಒಬ್ಬ ಆಟೋದೂನ್ಗೆ ಫೋನ್ ಕೊಡ್ತೀನಿ ನೀವೇ ಅಡ್ರೆಸ್ ಹೇಳಿ” ಅಂತ ಆಟೋದವನಿಗೆ ಫೋನ್ ಕೊಟ್ಟೆ.
ಅವನು ಅಡ್ರೆಸ್ ಕೇಳಿಸಿಕೊಂಡು “ಅರ್ಥ ಆಯ್ತು ಸರ್” ಅಂದ .
ನನಗೆ ಹೋದ್ ಜೀವ ವಾಪಸ್ ಬಂದಾಗಾಯ್ತು.... ಆದ್ರೆ ಬಡ್ಡಿ ಮಗ “ನಾನು ಆಕಡೆ ಬರಲ್ಲ” ಅಂದುಬಿಟ್ಟ.
ಯಾಕೆ ಅಂದಿದ್ದಕ್ಕೆ “ಅದು ನಮ್ ರೂಟ್ ಅಲ್ಲ ಸರ್ , ಬರ್ತಾ ಖಾಲಿ ಬರಬೇಕು ಕೊಡೋ ದುಡ್ಡು ದಕ್ಕಲ್ಲ” ಅಂತ ಹೇಳ್ತಾ.. ಇನ್ನೊಬ್ಬ ಆಟೊದೊನ್ನ ಕರ್ದು.. ಅಡ್ರೆಸ್ ವಿವರಿಸಿದ .
ಅವನು “ಬರ್ತೀನಿ ಸರ್ ಆದ್ರೆ ₹300. ಆಗುತ್ತೆ ಅಂದ .
ನಾನು “ಆಯ್ತು ಬಾರಪ್ಪ ದಡ ಸೇರ್ಸು ಕೊಡ್ತೀನಿ” ಅಂದೆ.
ಅಂತೂ-ಇಂತೂ ಬಯಸಿ ಬಯಸಿ
ಬಾಯಾರಿದ ಬಯಕೆಯನ್ನು
ಬೆಂಬಿಡದೆ ಬಿಡಿಸಲೊರಟಾಯ್ತು .
ಆಟೋದಲ್ಲಿ ಹೋಗ್ತಿದಿನಿ ನಿಜವಾಗಲೂ ಯಾವುದೊ ಕಾಡಿಗೆ ಹೋಗ್ತಿದಿನಿ ಅನ್ನೋ ಹಾಗೆ ಅನಿಸ್ತಿತ್ತು. ಎಲ್ಲೂ ಜನಾನೇ ಕಾಣತ್ತಿರಲಿಲ್ಲ ...ಸ್ವಲ್ಪ ದೂರ ಬಂದಮೇಲೆ ಒಂದು ಸ್ವಲ್ಪ ಜನ ಸಿಕ್ಕಾಗ ಆಯ್ತು .
ಮತ್ತೆ ನಿರ್ಜನ ಪ್ರದೇಶ, ಮತ್ತೆ ಜನನಿಬಿಡ ಪ್ರದೇಶ . ಕೊನೆಗೂ ಕತ್ತಲೆಯಲ್ಲಿ ನನಗೆ ಯಾವ ಹೋಟೆಲ್ ಸಹ ಕಾಣಲಿಲ್ಲ... ಅಂತೂ ಕೊನೆಗೆ ಹಳ್ಳಿಕಟ್ಟೆ ಕಾಣ್ತು .
ಅಲ್ಲಿಂದ ರೈಟ್ ಹೋಗಿ ಸ್ವಲ್ಪ ಮುಂದೆ ಹೋದರೆ ಮತ್ತೆ ನಿರ್ಜನ ಪ್ರದೇಶ .
ಆಟೋದವನಿಗೆ ಕನ್ಫ್ಯೂಸ್ ಆಯ್ತು ಅಷ್ಟೊತ್ತಿಗೆ ದೀಪಾವರೆ ಫೋನ್ ಮಾಡಿದ್ರು “ಎಲ್ ಬರ್ತಿದ್ದೀರಾ” ಅಂತ.
“ಹಳ್ಳಿಕಟ್ಟೆ ಇಂದ ರೈಟ್ ಬಂದ್ವಿ... ಇಲ್ಲಿ ಒಂದು ಮನೆನು ಇಲ್ಲ” ಅಂದೆ.
ಅವರು “ನಮ್ಮ ಸ್ಕೂಲ್ ಕಡೆ ಹೋಗಿದ್ದೀರಾ ಅಲ್ಲಲ್ಲ.. ಈ ಕಡೆ , ಅಂದ್ರೆ ಹಳ್ಳಿ ಕಟ್ಟೆಯಿಂದ ಸ್ಟ್ರೈಟ್ ಸ್ವಲ್ಪ ದೂರ” ಅಂತ ಹೇಳಿದ್ರು.
ಆಟೋದೊನು ಆಟೋನ ಹಿಂದಿರುಗಿಸಿ ಕರೆಕ್ಟಾಗಿ ಕರ್ಕೊಂಡು ಬಂದ .
ಅಂತೂ ಜುವೆಲ್ಲರಿ ಶಾಪ್ ಸಿಕ್ತು .
ಅದೊಂದು ದೊಡ್ಡ ಏರಿಯಾ ತುಂಬಾ ಜನ ಅಲ್ಲಿ ಇಲ್ಲಿ ಅನ್ನೋತರ ಓಡಾಡುತಿದ್ರು.. ದೀಪಾ ಅವರು ಫೋನ್ ಕಟ್ ಮಾಡಲಿಲ್ಲ . “ಜುವೆಲ್ಲರಿ ಶಾಪ್ ಹತ್ರಾನೇ ಇಳ್ಕೋಳಿ ಮುಂದೆ ಆಟೋದಲ್ಲಿ ಬರೊದುಬೇಡ” ಅಂದ್ರು .
ಸರಿ ಅಂತ ಅಲ್ಲೇ ಇಳ್ಕೊಂಡೆ , ಆಟೋದವನಿಗೆ ದುಡ್ಡು ಕೊಟ್ಟು ಕಳಿಸ್ದೆ .
ಈಗ ಶುರು ಆಯ್ತು , ಎದೆ ಡವ ಡವ ಅನ್ನೋದು . ವಿಚಿತ್ರ ರೋಮಾಂಚನ....
ಫೋನ್ನಲ್ಲಿ “ಹೀಗೆ ಸ್ವಲ್ಪದೂರ ನಡ್ಕೊಂಡು ಬನ್ನಿ” ಅಂದ್ರು.
ಒಂದೊಂದು ಹೆಜ್ಜೆ ಇಡಬೇಕಾದರು ಕಾಲುಗಳು ನಡುಗ್ತಿದ್ವು. ದೇಹದ ಪ್ರತಿ ಭಾಗನೂ ವಿಲ ವಿಲ ಅಂತಿತ್ತು .
ಸಡನ್ನಾಗಿ “ನೀವ್ ನನಗೆ ಕಾಣ್ತಿದ್ದೀರಾ” ಅಂದ್ರು.
ಸುತ್ತ ನೋಡ್ದೆ ....ಅವರ್ ಮಾತ್ರ ಎಲ್ಲೂ ಕಾಣಲಿಲ್ಲ
“ಎಲ್ರಿ ಇದೀರ” ಅಂದೆ .
“ಈ ಕಡೆ ನೋಡಿ” ಅಂದ್ರು.
ನಾನು “ಯಾವ ಕಡೆ” ಅಂತ... ಸುತ್ತಲೂ ನೋಡುತ್ತಿದ್ದೆ.
“ಅಯ್ಯೋ ಹಾಗೆಲ್ಲ ಹಾಡ್ಬೇಡ ಮಾರಾಯ... ಈ ಕಡೆ ಮೇಲೆ ನೋಡು ಇಲ್ಲಿ ಇಲ್ಲಿ” ಅಂದ್ರು.
ಆವಾಗ ನಾನು ಬಲಗಡೆ ಒಂದು ಬಿಲ್ಡಿಂಗ್ನಲ್ಲಿ ಸ್ವಲ್ಪ ಮೇಲೆ ನೂಡ್ದೆ .
ಕಿಟಕಿಯಿಂದ ಕೈ ಮಾಡ್ತಿದ್ರು .
ನನಗೆ ಜೀವನದಲ್ಲಿ ಒಂದು ಹೊಸ ಅನುಭವ ಕೊಡೊ ಒಂದು ಸ್ವಾತಿಮುತ್ತಿನ ಚಿತ್ತಾರ ನನ್ನ ಕಡೆ ತಿರುಗಿ ನೋಡ್ತಿರೋ ಹಾಗಿತ್ತು .
ಒಂದುಕ್ಷಣ ಮೈಯೊಳಗೆ ಮಿಂಚಿನ ದಾಳಿ ಆಗೋಯ್ತು.
ಅಲ್ಲಿಂದಲೇ ದೀಪಾವರು “ಅವ್ಯಕ್ತ , ಸಾಕು ನೋಡಿದ್ದು . ಇದೇ ಬಿಲ್ಡಿಂಗ್ ನೆಡ್ಕೊಂಡು ಬಾ ಮೇಲೆ , ಫೋನ್ ಕಟ್ ಮಾಡ್ಬೇಡ” ಅಂದ್ರು .
ಅಂತರಿಕ್ಷದ ಹಾದಿಯಲ್ಲಿ ಸಾಗ್ತಿರೊ ಮಂಜಿನ್ ತರ ನಡ್ಕೊಂಡು ಹೋಗ್ತಿದ್ದೆ .
ಅಂತೂ ಅವರ್ ಬಿಲ್ಡಿಂಗ್ ಒಳಗೆ ನನ್ನ ಪ್ರವೇಶ ಆಯ್ತು ಕೈಕಾಲು ನಡುಗ್ತಿದಾವೆ..! ಮೂರು ಸಲ ಬಿಸಿನೀರು ಸ್ನಾನ ಮಾಡಿದ್ರು.. ನೂರು ಸಲ ತಣ್ಣೀರು ಸ್ನಾನ ಮಾಡಿದಿನಿ ಅನ್ನಿಸ್ತಿದೆ .
ಎರಡು ತುಟಿಗಳು ಮಾತನಾಡಲಾಗದಷ್ಟು ಜೋರಾಗಿ ಹೊಡ್ಕೊತಿವೆ .
ಬಿಲ್ಡಿಂಗ್ ಒಳಗೆ ಹೋಗ್ತೀನಿ ಮೆಟ್ಟಿಲುಗಳೆ ಕಾಣ್ತಿಲ್ಲ ಕಾಂಪೌಂಡ್ ಪಕ್ಕದ ಬಿಲ್ಡಿಂಗಲ್ಲಿ ಮೆಟ್ಟಿಲುಗಳು ಕಾಣ್ತಿವೆ .
ಆದ್ರು ಮೇಲೆ ಹತ್ಕೊಂಡ್ ಹೋಗೋಣ ಅನ್ಕೊಂಡೆ . ಅಷ್ಟರಲ್ಲಿ ನಾನಿರೋ ಬಿಲ್ಡಿಂಗ್ ಅಲ್ಲೆ ಮೆಟ್ಟಿಲುಗಳು ಬಲಗಡೆ ಇರೋದು ಕಾಣ್ತು .
ಸ್ವಲ್ಪ ಮಿಸ್ ಆಗಿದ್ರು ಪಕ್ಕದ್ ಬಿಲ್ಡಿಂಗಲ್ಲಿ ದೀಪಾವರ್ನ ಹುಡುಗ್ತಿದ್ನಲ್ಲ ಅಂದ್ಕೊಂಡು ಮೆಟ್ಟಿಲತ್ಕೊಂಡು ಹೋದೆ .
ಒಂದೊಂದ್ ಮೆಟ್ಟಿಲು ಹತ್ತ್ಬೇಕಾದ್ರೂ ಹೃದಯ ಡವ ಡವ ಅಂತಿತ್ತು . ಯಾಕೋ ತುಂಬಾ ಭಯ ಆಗ್ತಿತ್ತು .
ಹೆಜ್ಜೆ ಹೆಜ್ಜೆ ಇಡಬೇಕಾದ್ರು , ಏನೋ ಹೊಸ ಅನುಭವ ಹೊಸ ರೀತಿಯ ಭಯ .
ಮೆಟ್ಟಿಲು ಹತ್ತಿ ಹೋದ್ರೆ ಯಾರು ಇಲ್ಲ “ಎಲ್ಲಿದ್ದಿರಾ ದೀಪಾವರೇ” ಅಂದೆ. ಇನ್ನುಮೇಲೆ ಬನ್ನಿ ಅಂದ್ರು .
“ಅಯ್ಯೋ ಇನ್ನು ಮೇಲಾ” ಅಂತ ತವಕವನ್ನೆಲ್ಲ ಗಟ್ಟಿಯಾಗಿಡ್ಕೊಂಡು ..ಇನ್ನೂ ಮೇಲೊದೆ ಅಲ್ಲು ಇಲ್ಲ..!
“ಎಲ್ರೀ..?” ಅಂದೆ .
“ಇನ್ನುಮೇಲೆ” ಅಂದ್ರು.
“ಅಯ್ಯೋ ದೇವರೇ ಮೆಟ್ಟಿಲು ಹತ್ಸಿ ಹತ್ಸಿನೆ ಸುಸ್ತು ಮಾಡೋತರ ಇದೀರ” ಅಂತ ಇನ್ನು ಮೇಲಾ ಅಂತ ಹತ್ತಿ ಹತ್ತಿ... ಹೋದೆ .
ಆ ಕ್ಷಣ ಜಿನುಗುತ್ತಿದ್ದ ಜೀವಕ್ಕೊಂದು ಝೇಂಕಾರದ ಅನುಭವ .
ಅಲ್ಲೊಂದು ಸುಂದರವಾದ , ತುಸು ಹೊಳಪಾದ ಮತ್ತು ಬಿಳುಪಾದ ಹೆಣ್ಣೊಂದು... ನಾಚಿ ತಿರುಗದೆ , ಕರಗದೆ , ಬಳಿ ಬಾರದೆ ದೂರವೇ ನಿಂತು ಅಲ್ಲೆಲ್ಲೋ ನೋಡುತ್ತಾ ಕಾದು ಹಂಬಲಿಸುತಿತ್ತು .
ಒಂದು ಕ್ಷಣ ಸ್ತಬ್ದನಾದೆ . ನಿಜವಾಗ್ಲೂ ನನ್ನ ಊಹೆಗೂ ನಿಲುಕದ ಸೌಂದರ್ಯವತಿ ಅವಳಾಗಿದ್ಲು .
ಪ್ರತಿ ನಿಮಿಷಾನು ಅವಳನ್ನೇ ನೋಡಬೇಕು ಅನ್ನೋ ಹಾಗೆ ಆಗ್ತಿತ್ತು . ಮೆಟ್ಟಿಲನ್ನು ಹತ್ತಿ ಬಂದ ಆಯಾಸ ಅವರನ್ನ ಕಂಡ ಕ್ಷಣದಲ್ಲೆ ಮಾಸಿ ಹೋಯ್ತು . ದೀಪಾವರು ನಿಜ್ವಾಗ್ಲು ದೀಪದ ತರಾನೇ ಮಿನುಗ್ತಿದ್ರು..!
ಅವರತ್ತ ಒಂದು ಸಣ್ಣ ನಗು ಬೀರಿದೆ . ಅವರು ಕೈ ಸನ್ನೇಲೆ ಮೇಲ್ ಹೋಗು ಅಂದ್ರು . ಇನ್ನೂ ಮೇಲ್ ಹೋಗಬೇಕಾ ಅಂತ ಅನ್ಕೊಂಡು . ಮನಸ್ಸು ಬೇಡ ಅಂದ್ರು ಕಾಲು ಕರ್ಕೊಂಡ್ ಹೋಯ್ತು .
ಅವರನ್ನ ನೋಡಿದ ಖುಷಿಯನ್ನ ತಡ್ಯೊಕಾಗ್ದಲೆ.. ಕುಣಿ ಬೇಕು ಅನುಸ್ತಿತ್ತು . ಹಾಗ್ ಮಾಡೋ ಹಾಗಿಲ್ಲ ಅಂತ.... ಪರಿಸ್ಥಿತಿ ಹೇಳ್ತಿತ್ತು .
ಬ್ಯಾಗ್ ಅಲ್ ಇದ್ದಿದ್ ನೀರಿನ ಬಾಟಲ್ ತಗೊಂಡು ನೀರ್ ಕುಡಿತಾ .... ಒಂದ್ ಒಂದು ಗುಟುಕಲ್ಲು ನನ್ ಮನಸ್ಸು ದೀಪಾವರನ್ನ ನೆನೆದು ನೆನೆದು ಜಿಗಿತಿತ್ತು .
C ಅಷ್ಟ್ರಲ್ಲೇ ದೀಪಾವರು ಮತ್ತೆ ಫೋನ್ ಮಾಡಿದ್ರು .
“ಬನ್ನಿ ಕೆಳಗೆ” ಅಂದ್ರು .
ಜೀವಕ್ಕೆ ಮೊದಲ ಸಲ ಅವರನ್ನ ನೇರವಾಗಿ ನೋಡೋ ಖುಷಿ . ಮೆಲ್ಲಗೆ ಮೆಟ್ಟಿಲುಗಳನ್ನ ಇಳಿದು ಹೋದೆ .
ಅವ್ರು ಅವರ ಮನೆ ಬಾಗಿಲಿನ ಹೊರಗೆ ಅವ್ರ ನಾಯಿನ ಗಟ್ಟಿಯಾಗಿಡ್ಕೊಂಡು ಬೇಗ ಹೋಗಿ ಒಳಗೆ ಅಂದ್ರು .
ನಾನು ಸರ ಸರ ಅಂತ ನೆಡ್ಕೊಂಡ್ ಹೋದೆ ಬಾಗಿಲನ್ನು ಮೆಲ್ಲಗೆ ತಳ್ತಿದಿನಿ ಓಪನ್ ಆಗ್ತಿಲ್ಲ .
ದೀಪಾವರ ಕಡೆ ತಿರುಗಿ ಪಿಸು ಧ್ವನಿಯಲ್ಲಿ “ದೀಪಾವರೆ ಬಾಗಿಲು ಓಪನ್ ಆಗ್ತಿಲ್ಲ” ಅಂದೆ .
ಅವರು ಒಂದೇ ಸಲ ಶಾಕ್ ಆಗಿ “ಅಯ್ಯೋ ರೀ... ಅದು ಪಕ್ಕದ್ ಮನೆ . ನೋಡಿ ನಾನು ಕೂತಿಲ್ವ ಈ ಬಾಗ್ಲು ಓಪನ್ ಮಾಡಿ” ಅಂತ ಬಾಗಲ್ ತೋರ್ಸಿದ್ರು .
ಟೆನ್ಶನ್ ಅಲ್ಲಿ ಏನೇನೋ ಮಾಡ್ತಿದೀನಲ್ವ ಅಂತ ಅವರ ಮನೆ ಬಾಗಿಲು ತಕ್ಕೊಂಡು ಒಳಗೆ ಹೋದೆ . ದೀಪಾವರು ನನ್ನಿಂದೆಲೇ ಬಂದ್ರು... ಆದರೂ ಅವರ ನಾಯಿ ಮಾತ್ರ ನನ್ನ ವೆಲ್ಕಮ್ ಮಾಡ್ದಲೆ ಸುಮ್ಮನಾಗ್ಲಿಲ್ಲ . ಬಿಲ್ಡಿಂಗ್ ಪೂರ್ತಿ ಕೇಳೊ ಹಾಗೆ ಆರ್ಚಾರ್ಡ್ ಬಿಡ್ತು . ಪಕ್ಕದ ಮನೆಯವರು ಹೊರಗ್ಬಂದ್ರು .
ಸದ್ಯ ದೀಪಾವರು ನಾಯಿಗೆ ಸಮಾಧಾನ ಮಾಡಿ ಪಕ್ಕದ್ಮನೆಯವ್ರಿಗೆ ಡೌಟ್ ಬರ್ದಲೆ ಇರೋತರ ನೋಡ್ಕೊಂಡು ಒಳಗ್ ಬಂದು ಬಾಗಿಲು ಹಾಕಿದ್ರು .
ಆ ಕ್ಷಣ ನಾನು ಅವರನ್ನು ಪ್ರಥಮ ಬಾರಿಗೆ ನೇರವಾಗಿ ನೋಡ್ದೆ .
“ಆ ತುಂಬಿದ ಕೆನ್ನೆಗಳು..
ಆ ಕತ್ತಲೆಯಲ್ಲು ಸ್ಪಟಿಕದಂತೆ ಮಿಂಚುತ್ತಿರುವ ಕಣ್ಣುಗಳು..
ಅಗಲವಾದ ಹಣೆ..
ಮೂಗುತಿ ಚಂದವೋ ಮೊಗೆ ಚಂದವೋ.. ತಿಳಿಯದ ಅಂದ..
ಕೆಂಪು ತುಟಿಗಳು.. ನಾಚಿ ನೀರಾಗಿ ಸೆರೆಯಾಗಿ ಮಾತಿನ ಹೊಳೆಯಾಗಿ ಹರಿಯುವ ಚಂದ ..
ಎರಡೆರಡು ಬಾರಿ ಚುಚ್ಚಿರುವ ಎರಡು ಕಿವಿಗಳು..
ಲಕ್ಷಣಕ್ಕೆ ಮೆರಗು ತರುತ್ತಿರುವ ಹಣೆಯಲ್ಲಿರುವ ಸಣ್ಣ ಕುಂಕುಮ ”.
ಸ್ವಲ್ಪ ಭಯದಲ್ಲೆ ನನ್ನತ್ತ ನೋಡಿ ಸಣ್ಣ ನಗು ಬೀರಿದರು .
ಮನಸ್ಸು ತಡೀಲಿಲ್ಲ ಅವರ ತೋಳನ್ನ ಬೇಕಂತಲೇ ಮುಟ್ಟಿ “ರೀ ಶೂ ಎಲ್ಲಿ ಬಿಡ್ಲಿ” ಅಂತ ಕೇಳ್ದೆ . ದೀಪಾವರು ಅವರನ್ನ ಹುಲಿನೇ ಮುಟ್ತು ಅನ್ನೋತರ ಆಡ್ಬಿಟ್ರು..
“ಇಲ್ಲೇ ಬಿಡ್ರಿ” ಅಂದ್ರು. ಶೂ ಬಿಟ್ಟು ಒಳಗೆ ನೋಡ್ತೀನಿ ನಿಜವಾಗ್ಲೂ ಎದೆ ಡಸುಕ್ ಅಂತೂ ಅವರ ಮಕ್ಕಳು ಹಾಲಲ್ಲೇ ಮಲ್ಕೊಂಡ್ ಇದ್ರು.
ನಾನು “ರೀ.. ಮಕ್ಕಳು ಏಳಲ್ಲ ತಾನೇ ಅಂದೆ .
ಅವರು “ಇಲ್ಲ ಬನ್ನಿ ಎದ್ದೇಳೊದಿಲ್ಲ , ಒಂದ್ ಸಲ ಮಲ್ಗುದ್ರೆ ಸಾಕು” ಅಂದ್ರು .
ನಾನು “ಪಕ್ಕ ತಾನೆ” ಅಂದೆ .
ಅವರು “ಅಯ್ಯೋ ಹೆದ್ರಬೇಡಿ ಏಳೋದಿಲ್ಲ” ಅಂದ್ರು.
“ಸರಿ ನಾವ್ ಮಲ್ಗೊದೆಲ್ಲಿ ” ಅಂದೇ .
“ಬನ್ನಿ ರೂಮಲ್ಲಿ” ಅಂತ ಕರ್ಕೊಂಡ್ ಹೋದ್ರು.
ಡೋರ್ ಬಾಗಿಲಿಗೆ ಚಿತ್ತಾರ ವಾದ ಗರಿಗರಿ ಡೆಕೋರೇಷನ್ ಇತ್ತು . ಅದನ್ನು ದಾಟಿ ಒಳಗೊದೆ .
ಒಂದು ಟವಲ್ ಕೊಟ್ಟು “ಹೋಗಿ ಫ್ರೆಶ್ ಆಗಿ” ಅಂತ ಬಾತ್ರೂಮ್ ಲೈಟ್ ಹಾಕಿಕೊಟ್ಟರು .
ಹೋಗಿ ಕೈಕಾಲ್ ತೊಳೆದುಕೊಂಡು ಬಂದೆ .
“ ಕುತ್ಕೊಳ್ಳಿ ಊಟ ತಗೊಂಡು ಬರ್ತೀನಿ ” ಅಂತ ಮಂಚದ ಮೇಲೆ ಕೂರ್ಸಿ ಅಡುಗೆ ಮನೆಗೆ ಹೋದ್ರು.
ಜೋಳದ ರೊಟ್ಟಿ , ಮೊಸರು , ಕಾಳ್ ಪಲ್ಯ ಏನೇನೋ ಹಾಕೊಂಡ್ ಬಂದ್ರು . ನಾನು ಇಸ್ಕೊಂಡು ಕತ್ತಲೆಯಲ್ಲೆ ತಿನ್ಬೇಕಾ ಅಂತ ಲುಕ್ ಕೊಟ್ಟೆ ಅಷ್ಟೇ .
ಅವರು “ಸಾರಿ ರಿ.. ಕತ್ತಲೆಲ್ಲಿ ತಿನ್ನುಸ್ತಿದಿನಿ ಅಂತ ಬೇಜಾರಾಗ್ಬೇಡಿ” ಅಂತ ಹೇಳ್ತಾ “ನಿಮ್ಮ ಜೊತೆ ಕ್ಯಾಂಡಲ್ ಲೈಟ್ ಡಿನ್ನರ್ ಮಾಡಬೇಕು ಅನ್ಕೊಂಡಿದ್ದೆ ಇದೆ ಅನ್ಕೊಳಿ” ಅಂದ್ರು.
ನಾನು ನಗಾಡ್ಕೊಂಡು ಊಟ ಮಾಡ್ದೆ.
ಯಾಕೋ ಹಸಿವಿದ್ದರೂ ಜಾಸ್ತಿ ಊಟ ಮಾಡಬೇಕು ಅನ್ನಿಸ್ಲಿಲ್ಲ........ ಅಂತೂ ಊಟ ಆಯ್ತು .
ತಟ್ಟೆ ಇಟ್ಟು ಬಂದ ದೀಪಾವರು.. “ಏನ್ ಬೇಕು ಹಾಲ್ ಕುಡಿತಿರಾ” ಅಂದ್ರು .
ನನಗೆ ಜೋರಾಗಿ ನಗ್ಬೇಕು ಅನ್ನಿಸ್ತು .
ಕಂಟ್ರೋಲ್ ಮಾಡ್ಕೊಂಡು ಬೇಡ ಅಂದೆ .
ಆಯ್ತು ಅಂತ ಕೈ ತೊಳೆದುಕೊಂಡು ಬಂದು “ಮಂಚದಮೇಲೆ ಈ ಕಡೆ ಮಲಗ್ತೀರಾ.. ಆ ಕಡೆ ಮಲಗ್ತೀರಾ..” ಅಂದ್ರು .
ನನಗೆ ನಾಚಿಕೆ ಮತ್ತು ನಗು ಎರೆಡು ಬಂತು . ಏನ್ ಹೇಳ್ಬೇಕು ಅಂತಾನೇ ಗೊತ್ತಾಗ್ಲಿಲ್ಲ.....
“ಗೋಡೆಪಕ್ಕ ಮಲಗಲ್ಲ” ಅಂದೆ .
ಸರಿ ಅಂತ ಚಿಲ್ಕ ಹಾಕೊಂಡ್ ಬಂದು ಅವರೇ ಗೋಡೆಪಕ್ಕ ಮಲ್ಕೊಂಡ್ರು .
ಇಷ್ಟೊತ್ತು ಸುಮ್ಮನಿದ್ದ ನನ್ನ ಮನಸ್ಸಿನ ಸ್ಥಿತಿ ಈಗ ಏರು-ಪೇರು ಆಗ್ತಾ ಇತ್ತು . ಮೈಯಲ್ಲಾ ನಡುಗೋದಕ್ಕೆ ಶುರುವಾಯಿತು . ಮಾತು ತೊದಲುತ್ತಿದೆ ಅನ್ನಿಸುತ್ತಿತ್ತು. ನಿಧಾನವಾಗಿ ಅವರ ಕಡೆ ತಿರುಗಿ ಅವರ ತೋಳಿನ ಮೇಲೆ ಕೈಯಿಟ್ಟು.... ಹತ್ತಿರ ಹೋದೆ . ಅವರ ದೇಹವು ನಡುಗುತ್ತಿತ್ತು .ಅವರನ್ನ ಮೆಲ್ಲನೆ ನನ್ನತ್ತ ತಿರುಗಿಸಿದೆ ....ಕಣ್ಣುಗಳು ಮುಚ್ಚಿದ್ದವು , ನಾಚಿಕೆ ಅರಳಿತ್ತು , ಆ ಸುಂದರ ದೇಹದ ಮೇಲೆ ಮುತ್ತಿನ ಮಳೆಗರಿಯಲು ಶುರು ಮಾಡಿದೆ........
ಹೀಗೆ ನಾಲ್ಕು ಗಂಟೆಯವರೆಗೆ ....ನಾವಿಬ್ಬರು ಐದು ಬಾರಿ ಸೇರಿಯಾಗಿತ್ತು . ಇಡೀ ರಾತ್ರಿ ಕಣ್ಣನ್ನೇ ಮುಚ್ಚಿರಲಿಲ್ಲ .
ದೇಹದ ಆಯಾಸ ಅನುಭವಕ್ಕೆ ಬಂದಿರಲಿಲ್ಲ ಆದರೂ ಕಣ್ಣುಗಳು ನಿದ್ದೆಗಾಗಿ ಗೋಗರೆಯುತ್ತಿದ್ದವು .
ನಾನೀಗ ಹೊರಡೋ ಸಮಯ ಅಂತ ದೀಪಾವರು ಬೇಸರದಿಂದ ನನ್ನನ್ನೇ ನೋಡುತಿದ್ರು.
ಇಡೀ ರಾತ್ರಿಯ ಒಂದೊಂದು ಕ್ಷಣವನ್ನು ಅನುಭವಿಸುತ್ತಿದ್ದ ಅವರ ಆ ನೋಟ ಅವರನ್ನು ಗಟ್ಟಿಯಾಗಿ ತಬ್ಬಲು ಹೇಳುತಿತ್ತು . ಅಂತಿಮವಾಗಿ ಅವರನ್ನು ಒಂದು ಸಲ ನೋಡಿ ಮನೆಯಿಂದ ಹೊರ ನಡೆದೆ .
ಇನ್ನೂ ಕತ್ತಲು ಕವಿದಿತ್ತು ನನ್ನ ಒಂದೊಂದು ಹೆಜ್ಜೆಯೂ ನನಗೆ ಜೋರಾಗಿ ಕೇಳುವಷ್ಟು ನಿಶ್ಯಬ್ದ.
ಸರಸರನೆ ಮೆಟ್ಟಿಲಿಳಿದು ಕೆಳಗೆ ಬಂದೆ .
ಈ ಸಲ ಬರಬೇಕಾದ್ರೆ ಅವರ ನಾಯಿ ಕೂಡ ಮಲಗಿತ್ತು.
ಕೆಳಗೆ ಬಂದ ತಕ್ಷಣ ಚಳಿಯ ಅನುಭವ ಹೆಚ್ಚಾಯ್ತು.
ಬ್ಯಾಗಲ್ಲಿದ್ದ ಟೋಪಿ ಹಾಕೊಂಡು ಎರೆಡು ಕೈ ಕಟ್ಕೊಂಡು ಹಳ್ಳಿ ಕಟ್ಟೆ ಹತ್ತಿರ ನಡೆದುಕೊಂಡು ಹೋದೆ .
ಇನ್ನು ಹಳ್ಳಿಕಟ್ಟೆನೆ ತಲ್ಪಿಲ್ಲ , ದೀಪಾವರೆ ಫೋನ್ ಮಾಡಿದ್ರು “ಮಿಸ್ ಮಾಡ್ಕೋತಿದೀನಿ ನಿನ್ನ ಅವ್ಯಕ್ತ” ಅಂದ್ರು.
“ನಾನು ಕೂಡ ದೀಪಾವರೆ” ಅಂದೆ.
“ಇಷ್ಟೊತ್ನಲ್ಲಿ ಆಟೋ ಸಿಗುತ್ತದ” ಕೇಳ್ದೆ .
“ಹೂ.. ನಿಂತಿರು ಬರ್ತವೆ” ಅಂದ್ರು.
“ತುಂಬಾ ಚಳಿ ರೀ....” ಅಂದೆ.
“ಅಯ್ಯೋ ಹೌದಾ... ಸಾರಿ ಅವ್ಯಕ್ತ , ನಿನ್ನ ಹೀಗ್ ಕಳುಸ್ಬೇಕಾಯ್ತು” ಅಂತ . ಬೇಜಾರ್ ಮಾಡ್ಕೊಂಡ್ರು.
“ಇರ್ಲಿ ಬಿಡಿ.. ದೀಪಾವ್ರೆ ನನ್ನತ್ರ ಟೋಪಿ ಇದೆ” ಅಂದೆ. ಮತ್ತೆ ಏನೋ ನೆನಪಾಗೊ ತರ ಆಯ್ತು... “ದೀಪಾವರೆ ಸುಕನ್ಯಾಳ ಮನೆ ಇಲ್ಲೇನಾ” ಅಂತ ಕೇಳ್ದೆ .
“ಹೂ.. ರಿ.. ಇಲ್ಲೇ ಇರೋದು” ಅಂತಿದ್ರು... ಅಷ್ಟರಲ್ಲೇ ಒಂದು ಆಟೋ ಬಂದೇಬಿಡ್ತು ಬಹಳ ಬೇಗನೆ ಬಂತಲ್ಲಪ್ಪ ಅಂತ ಹತ್ಕೊಂಡು ದೀಪಾವರ ಜೊತೆ ಮಾತಾಡ್ಕೊಂಡು ಬಸ್ಟ್ಯಾಂಡ್ ಹತ್ರ ಬಂದೆ .
ಬಸ್ಗಳು ಜಾಸ್ತಿ ಓಡಾಡ್ತಿರಲಿಲ್ಲ ಶಿವಮೊಗ್ಗದ ಬಸ್ಸಿಗೆ 15ರಿಂದ 20 ನಿಮಿಷ ಕಾಯಬೇಕಾಯ್ತು .
ಅಂತೂ ದೀಪಾವರ ಜೊತೆ ಮಾತಾಡ್ಕೊಂಡು ಬಸ್ ಹತ್ತಾಯ್ತು .
ಬಸ್ಸಲ್ಲಿ ಕೂತಾದಮೇಲೆ ಶುರು ಆಯ್ತು ಆಯಾಸ.. ಕಣ್ಣ್ ಬಿಡೋದಕ್ಕೆ ಆಗದಷ್ಟು ನಿದ್ದೆ .
ದೀಪಾವರಿಗೆ “ಸಾರಿ ರೀ.. ಮಾತಾಡಕ್ಕೆ ಆಗ್ತಿಲ್ಲ ತುಂಬ ನಿದ್ದೆ ಬರ್ತಿದೆ , ಊರಿಗೋಗಿ ಕಾಲ್ ಮಾಡ್ತೀನಿ” ಅಂತ ಹೇಳಿ .
ಮೊದಲು ಕಂಡಕ್ಟರ್ ಹತ್ತಿರ ಟಿಕೆಟ್ ತಗೊಂಡು ಮಲ್ಕೊಂಡೆ .
ಊರು ಬಿಟ್ಟಿದ್ದು ಗೊತ್ತಿಲ್ಲ , ಊರು ಬಂದಿದ್ದು ಗೊತ್ತಿಲ್ಲ ಅಷ್ಟು ನಿದ್ದೆ ಬಂದಿದೆ .
ಬಸ್ಸಿಂದ ಇಳಿದವನೇ ಸೀದಾ ಮನೆಗ್ ಹೋದೆ . ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿ ಮಲ್ಕೊಂಡು ಸಂಜೆ ಎದ್ದಿದೀನಿ .
ಎದ್ದವನೆ ಫೋನ್ ನೋಡ್ತೀನಿ ದೀಪಾವರದು, ಫ್ರೆಂಡ್ಸುದು ಅಂತ 7 - 8 ಮಿಸ್ಕಾಲ್ . ಎದ್ದು ಮುಖ ತೊಳ್ಕೊಂಡ್ ಬಂದು ದೀಪಾವರಿಗೆ ಕಾಲ್ ಮಾಡ್ದೆ.
ಸ್ವಲ್ಪ ಕೋಪದಲ್ಲೆ ಮಾತಾಡಿದ್ರು... “ಊರಿಗೆ ಹೋದಮೇಲೆ ತಲುಪಿದ್ದೀನಿ ಅಂತ ಒಂದು ಫೋನ್ ಸಹ ಮಾಡಬಾರದ” ಅಂತ ಜಗಳ ಶುರು ಮಾಡಿದ್ರು,..
ಏನ್ ಹೇಳಿದ್ರು ಸಮಾಧಾನನೆ ಆಗ್ಲಿಲ್ಲ ಅಂತೂ ಇಂತೂ ಆಕಾಶ-ಭೂಮಿನ ಮಾತಲ್ಲೆ ಒಂದು ಮಾಡಿದ್ರು .
ಹೀಗೆ ಕೆಲವು ದಿನಗಳು ಸ್ವಲ್ಪ ಸ್ವಲ್ಪ ಮಾತಾಡ್ತಾ ಆಡತ್ತಾ.. ಕೊನೆಗೆ ಅವರ ಕಡೆ ಗಮನ ಕಡಿಮೆ ಮಾಡ್ದೆ . ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ಬ್ಯುಸಿಯಾದ ನಾನು . ದೀಪಾವರ್ನ ಯಾವಾಗಾದರೂ ಒಮ್ಮೆ ಮಾತ್ರ ನೆನಸ್ಕೊತಿದ್ದೆ . ನನಗೆ ಬೇಕಾದಾಗ ಮಾತ್ರ ಮಾತನಾಡತ್ತಿದ್ದೆ.
ಆದರೆ ಅವರು ನನ್ನ ನೆನಪಲ್ಲೇ ಮುಳುಗಿದಾರೆ ಅನ್ನೋದು ಅರ್ಥ ಆಗ್ತಿತ್ತು .
ಹೀಗೆ ಒಂದೆರಡು ವಾರ ಕಳೆದ ಮೇಲೆ ನನಗೆ ದೀಪಾವರ ಮೇಲೆ ಮತ್ತೆ ಆಸೆ ಹೆಚ್ಚಾಯಿತು .
ಈ ಸಲ ನನ್ ಬರ್ಲೇಬೇಕು ಅಂತ ಹಠ ಮಾಡ್ದೆ . ಜೊತೆಗೆ ನಾನು ಬೆಳಿಗ್ಗೆನೆ ಬರ್ತೀನಿ ಅಂತ ಕೂತೆ .
ಮೊದಮೊದಲು ಬೇಡ ಬೇಡ ಅಂದವರು ಕೊನೆಗ ನನ್ನ ಬಣ್ಣ ಬಣ್ಣದ ಮಾತಿಗೆ ಸೋತು ಒಪ್ಪಲೇಬೇಕಾಯಿತು .
ನಾನು ದೀಪಾವರ್ಗೆ ಕೇಳಿದಿಷ್ಟೇ “ರೀ ಈ ಸಲ ನಾನು ನಿಮ್ಮನ್ನ ನೋಡೊಕೆ ಬರುವಾಗ ನೀವು ದೀಪಾವಳಿಯಲ್ಲಿ ಮಿನುಗೊ ಚಿನ್ನದ ದೀಪದ ತರ ರೆಡಿ ಆಗ್ತೀರಾ..” ಅಂತ.
ನನ್ ಮಾತ್ ಕೇಳಿ ಅವರು ನಾಚಿಕೆಯಲ್ಲಿ ನಗ್ತಾ “ಆಗಲ್ಲ..” ಅಂದ್ಬಿಟ್ರು .
ನನಗೋಸ್ಕರ ಪ್ಲೀಸ್ “ಸೀರೆ ಉಟ್ಕೊಳ್ಳಿ” ಅಂತ ನಾನು ಕೇಳ್ಕೊಂಡೆ .
ನೂರ್ ಸರಿ ಕೇಳಾದಮೇಲೆ “ಉಟ್ಕೋತೀನಿ” ಅಂದ್ರು..!
ಈ ಸಲ ನಂಗೆ ಅಷ್ಟು ಭಯವೂ ಇರಲಿಲ್ಲ ಜೊತೆಗೆ ಹೆಚ್ಚು ಸಮಯ ಸಹ ಬೇಕಾಗಿರ್ಲಿಲ್ಲ .
ಬಸ್ ಅಲ್ಲಿ ಚಿಕ್ಕಮಗಳೂರಿಗೆ ಬರಬೇಕಾದರೆನೆ.. ಫೋನ್ ಅಲ್ಲಿ “ಬರ್ತಿದಿನಿ ಸ್ವಲ್ಪ ಹೊತ್ತು ಅಷ್ಟೇ ರೆಡಿ ಆಗಿದಿರಾ” ಅಂದೆ .
ಅವ್ರು “ಹೂ ರೆಡಿ ಆಗಿದಿನಿ ಆದ್ರೆ ಅವ್ಯಕ್ತ ನಂಗೆ ತುಂಬಾ ನಾಚಿಕೆ ಆಗ್ತಿದೆ ಪ್ಲೀಸ್... ಸೀರೆ ಬೇಡ” ಅಂತಿದ್ರು .
ನಾನು “ಇಲ್ಲ ಇಲ್ಲ ಸೀರೆನೆ ಬೇಕು ಅಂತ ಹಟ ಮಾಡಿ ಒಪ್ಪುಸ್ದೆ .
ಅಂತೂ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಆಟೋ ಇಡ್ದು ಅವರ ಮನೆಯ ಬಿಲ್ಡಿಂಗ್ ಹತ್ರ ಬಂದೆ .
ಹತ್ಬೇಕದ್ರೆ ..ಈ ಸಲಾನು ಮೇಲ್ ಒಗ್ಬೇಕಾ ಅಂತ ಕೇಳ್ದೆ . ದೀಪವರು “ಬೇಡ ರೀ ಅಲ್ಲಿ.. ನಮ್ ನಾಯಿ ಇದೆ ಕಚ್ಚಿ ಬಿಡುತ್ತೆ” ಅಂದ್ರು .
“ಆದ್ರೂ ಒಂದ್ ಸಲ ಮತಾಡುಸ್ಕೊಂದು ಬರ್ತೀನಿ” ಅಂದೆ. ಅವ್ರು ..“ರೀ.. ಯಾಕ್ ಹೀಗೆಲ್ಲ ಆಡ್ತಿರ ..ಸೀದಾ ಒಳಗೆ ಬನ್ನಿ ನಾ ಹೊರಗ್ ಬರಲ್ಲ ನಾಚಿಕೆ ಆಗುತ್ತೆ” ಅಂದ್ರು .
ನಾನು “ಸರಿ” ಅಂದೆ .
“ಹಾ ಉಷರು ಮತ್ತೆ ಮಿಸ್ ಆಗಿ ಪಕ್ಕುದ್ ಮನೆಗ್ ಹೋಗೀರ , ಮನೆ ಹೊರಗೆ ಚೇರ್ ಇಟ್ಟಿದಿನಿ ಗೊತ್ತಾಗುತ್ತೆ ಬನ್ನಿ” ಅಂದ್ರು .
ಸರಿ ಅಂತ ಹತ್ಕೊತಾ ಹೊದೆ . ಈ ಸಲ ತುಂಬಾ ಈಸಿಯಾಗಿ ಅವ್ರ ಬಿಲ್ಡಿಂಗ್ ಮೆಟ್ಟಿಲು ಹತ್ಕೊಂಡು ಸೀದ ಅವ್ರ ಮನೆ ಒಳಗ್ ಓದೆ .
ಮೇನ್ ಡೋರ್ ಏನೋ ಓಪನ್ ಇತ್ತು .ಆದ್ರೆ ಅವ್ರು ಮಾತ್ರ ಅಲ್ಲಿರ್ಲಿಲ್ಲ . ರೂಮ್ ಒಳಗೆ ಡೋರ್ ಕ್ಲೋಸ್ ಮಾಡ್ಕೊಂಡ್ ಕೂತಿದರೆ .
ನಂಗೆ ಏನ್ ಹೇಳ್ಬೇಕ್ ಗೊತ್ತಾಗ್ಲಿಲ್ಲ “ರೀ ನಾನ್ ಬಂದಾಯ್ತು” ಅಂದೆ .
ಅವ್ರು “ಅವ್ಯಕ್ತ ಸೀರೆಲಿ ನೀನ್ ನನ್ನ ನೋಡ್ಬೇಕಾ.. ಚೇಂಜ್ ಮಾಡಿ , ಡ್ರೆಸ್ ಹಾಕೊಳ್ಳಾ...?” ಅಂದ್ರು .
ನಾನು “ಪ್ಲೀಸ್ ಸೀರೆಲೆ ಇರಿ.. ಬೇಕಾದ್ರೆ ಈ ಸಲ ಕೂಡ ನೀವ್ ಹೇಳೋ ವರ್ಗು ನಾನ್ ನಿಮ್ಮುನ್ನ ಮುಟ್ಟಲ್ಲ” ಅಂದೆ.
ಅವಾಗ ಡೋರ್ ಓಪನ್ ಮಾಡಿದ್ರು .
ಅವ್ರು ಬಾಗಿಲು ತೆರೆದು ಹೊರಗೆ ಬಂದ್ರು .
ನಿಜ್ವಾಗ್ಲು ನಂಗೆ ಸ್ವರ್ಗದ ಅಪ್ಸರೆಯನ್ನೆ ನೋಡಿದಾಗ ಆಯ್ತು
ಕೆಂಪ್ ಸೀರೆಲೀ ಅವರ ಮೆರುಗು ನನ್ನನ್ನೇ ಕರಗಿಸೊತರ ಇತ್ತು .ಆ ಕೈ ಬಳೆಗಳು , ಕಿವಿಯ ಜುಮುಕಿ ಮುಡಿದ ಮಲ್ಲಿಗೆ ...ಶ್ರೀ ಗಂಧದ ಸುಗಂಧ ಚುಂಬಿಸುತ್ತಾ ಇತ್ತು. ಅಂದವನ್ನ ಹೆಚ್ಚಿಸುತ್ತಿರುವ ಸಣ್ಣ ನಡು, ನಾಚಿದ ಮೊಗ.... ನನಗೆ ಕಾಣದ ಲೋಕವನ್ನೇ ಕಣ್ಣೆದುರು ತಂದಿತ್ತು .
ಮನಸ್ಸು ಅವರ ಅಂದಕ್ಕೆ ತುಂಡು ತುಂಡಾಗಿ ಹೋಗಿತ್ತು .
ತಿನ್ನೋದಕ್ಕೆ ಅಂತ ತಿಂಡಿ ತಂದ್ ಕೊಟ್ರು ಅವರಷ್ಟೇ ಮೆದುವಾದ ಬಾಯಿಗಿಟ್ಟರೆ ಕರುಗುವ ತರ ಇತ್ತು ಮೈಸೂರ್ ಇಡ್ಲಿ... ಒಂದೇ ತುತ್ತಿಗೆ ಅವರ ಕೈ ರುಚಿ ಇಂದ ತೃಪ್ತನಾಗಿ ಹೊದೆ .
“ಹೇಗ್ ಇದೆ ಅವ್ಯಕ್ತ” ಅಂತ ಕೇಳಿದ್ರು .
“ನಿಮ್ಮಷ್ಟೇನು ಚೆನ್ನಾಗಿಲ್ಲ” ಅಂತ ಹೇಳಿ ಒಂದ್ ಸ್ಮೈಲ್ ಕೊಟ್ಟೆ .
ಅವರು ನಾಚಿ ನೀರಾಗಿ ಕರಗಿ ಹೋದ್ರು .
ಪಟ ಪಟನೆ ತಿಂದು ಕೈ ತೊಳೆದೆ . ಅವರು ತಟ್ಟೆ ತಗೊಂಡು ಹೊದ್ರು .
ಅವ್ರು ವಾಪಸ್ ಬರೊದನ್ನೇ ಕಾಯ್ತಿದ್ದೆ.. ಬಂದ್ ತಕ್ಷಣ ಅವ್ರ ಹತ್ರ ಹೋದೆ . ಅವ್ರು ನೋಡು ನಾನ್ ಹೇಳೋ ವರ್ಗು ನನ್ನ ಮುಟ್ಟೊ ಹಾಗಿಲ್ಲ ಅಂತ ವಾಕ್ಯನ ಪೂರ್ತಿ ಮಾಡೋಕು ಮುಂಚೆನೇ.... ಅವ್ರನ್ನ ಎಳೆದು ಹಿಂದೆ ಇಂದ ತಬ್ಬಿ ಬಿಟ್ಟೆ . ಅವರ ನನ್ನ ದೇಹಕ್ಕೆ ಹೊರಗಿ ನನ್ನ ತೋಳಲ್ಲಿ ಕರಗಿ ಹೋದ್ರು , ಮೆಲ್ಲಗೆ ಅವರ ಸೊಂಟವನ್ನ ಗಟ್ಟಿಯಾಗಿ ಹಿಡಿದೆ , ಉಸಿರುಗಟ್ಟಿ ನನ್ನ ಕೈಗಳ ಮೇಲೆ ಕೈ ಇರಿಸಿ ಬೇವರಲಾರಂಬಿಸಿದರು..........
ಸಮಯ ಮಧ್ಯಾಹ್ನ ಮೂರು ಗಂಟೆ ಆಗಿತ್ತು.
ಅವರು "ನೀನ್ ಉಪವಾಸ ಹೋಗೋದು ಬೇಡ ನಾನ್ ಅಡ್ಗೆ ಮಾಡ್ತೀನಿ" ಅಂತ ಎದ್ದೊದ್ರು.
ನಾನು ಅವ್ರ ಹಿಂದೇನೆ ಹೋದೆ .
ಅವ್ರು “ಅವ್ಯಕ್ತ ಅಡ್ಗೆ ಮನೇಗ್ ಬರ್ಬೇಡ ಎಲ್ಲಾದ್ರೂ ನಾನ್ ಒಬ್ಳನ್ನೆ ಬಿಡು” ಅಂತ ಕೆಳ್ಕೊಂಡ್ರು .
ನಾನು ಬೇಕು ಬೇಕು ಅಂತಾನೆ ಮನೆ ತುಂಬಾ ಅಲ್ಲಿ ಇಲ್ಲಿ ಅಲ್ಲಿ ಇಲ್ಲಿ ಅಂತ ಓಡಾಡ್ತಾನೆ ಇದ್ದೆ .
ಅವ್ರು “ಪ್ಲೀಸ್ ಅವ್ಯಕ್ತ , ಅಡ್ಗೆ ಮಾಡ್ಬೇಕು ಬಿಡು” ಅಂತ ಗೋಗರೆದ್ರು .
ನಾನು ಆಟಾಡುಸ್ತಾನೆ ಇದ್ದೆ ....“ನೋಡು ಉಪವಾಸ ಹೋಗ್ತಿಯ ಹೇಳಿದ ಮಾತ್ ಕೇಳು” ಅಂದ್ರು.
ನಾನು ಆದ್ರೂ ಅವರಿಗೆ ಕಾಟ ಕೊಡ್ತಾನೆ ಇದ್ದೆ .
ಕೊನೆಗೆ “ಆಯ್ತು ನಾನೇ ಊಟ ಮಡುಸ್ತೀನಿ ಸುಮ್ನಿರು” ಅಂದ್ರು .
ಆವಾಗ ಸುಮ್ನೆ ಕೂರ್ಲೆ ಬೇಕಾಯ್ತು .
ಬಿಸಿ ಬಿಸಿ ಚಪಾತಿ ಮಾಡಿದ್ರು ಅದು ಪೇಪರ್ಗಿಂತ ತೆಳ್ಳುಗಿತ್ತು ಜೊತೆಗೆ ಮೊಸರು , ಬಟಾಣಿ ..ಎನ್ ಏನೋ ಆಕೀ ಅವ್ರ ಕೈ ತುತ್ತ್ ಕೊಟ್ರು ....
ಒಟ್ಟೆ ತುಂಬೊ ವರ್ಗು ಅವರೇ ಊಟ ಮಾಡ್ಸಿದ್ರು ಅವರ ನೆನಪಿಗೆ ಅಂತ ಮುದ್ದಾದ ಎರೆಡು ಮಣ್ಣಿನ ಲೋಟ ಕೊಟ್ರು .
ಆದ್ರೆ ನಾನೆ ಅವರಿಗಾಗಿ ಏನನ್ನು ಕೊಡ್ಲಿಲ್ಲ ನನ್ನನ ಬಿಟ್ಟು.
ಕೊನೆ ಬಾರಿ ಅವರನ್ನ ಗಟ್ಟಿಯಾಗಿ ತಬ್ಬಿಕೊಂಡು ಅವರ ಎರೆಡು ಕೆನ್ನೆಯನ್ನ ಇಡಿದು ಅವರ ಹಣೆಗೆ ಮುತ್ತಿಟ್ಟೆ .
ಕೊನೆ ಬರಿ ಬಾಯ್ ಹೇಳಿ ಅಲ್ಲಿಂದ ಕೆಳಗಿಳಿದು ಬಂದೆ.
ಬಂದವನೇ ಹಳ್ಳಿ ಕಟ್ಟೆ ಕಡೆ ನೆಡ್ಕೊಂಡ್ ಹೋಗ್ತಿದ್ದೆ ...ದೀಪವರು ಫೋನ್ ಮಾಡಿ “ಅವ್ಯಕ್ತ, ಆ ಕಡೆ ಹೋಗಬೇಡ ಸುಕನ್ಯಾ ಮ್ಯಾಮ್ ಮನೆ ಇರೋದ್ ಅಲ್ಲೇ ...ಇಲ್ಲೇ ನಿತ್ಕೋ ಆಟೋ ಸಿಗುತ್ತೆ” ಅಂದ್ರು .
ಅವರು ನಾನು ಆಟೋ ಹತ್ತಿ ಹೋಗೋವರ್ಗು ನನ್ನನ್ನೇ ನೊಡ್ತಿದ್ರು ಅನ್ಸುತ್ತೆ....
ನಾನು ಶಿವಮೊಗ್ಗಕ್ಕೆ ಬಂದು ಎರೆಡು ಮೂರು ದಿನ ಅವರ ಜೊತೆ ಚೆನ್ನಾಗೇ ಮಾತಾಡಿದೆ.
ಅದಾದ್ಮೇಲೆ ನಾನು ಮನೆ ಕೆಲಸದಲ್ಲಿ ಬ್ಯುಸಿ ಆಗೋದೇ . ಫೋನ್ ಮಾಡಿದ್ರೆ , ಬ್ಯುಸಿ ಇದ್ದೀನಿ ಆಮೇಲೆ ಮಾಡ್ತೀನಿ ಅಂತ ಹೇಳಿ ಮತ್ತೆ ಕಾಲ್ ಮಾಡಿ ಸ್ವಲ್ಪ ಹೊತ್ತು ಮಾತಾಡಿ ಸುಮ್ನಾಗ್ಬಿಡ್ತಿದ್ದೆ .
ಹೀಗೆ ದಿನಗಳನ್ನ ಕಳೆದು ಬೀದರ್ ಗೆ ವಾಪಸ್ ಬಂದೆ ಇತ್ತೀಚಿಗೆ ನನಗೆ ದುಡಿಮೆಯಲ್ಲಿ ಹೆಚ್ಚು ಆಸಕ್ತಿ ಬರ್ತಿತ್ತು. ಮಾಡ್ತಿರೋ ಕೆಲ್ಸದಲ್ಲಿ ಸಂಬಳ ಕಡಿಮೆ ಅನ್ನಿಸ್ತಿತ್ತು .
ಬೀದರ್ ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದೆ .
ಧಾರವಾಡದ ಒಂದು ಹಾಲಿನ ಡೈರಿಲೀ ಕೆಲ್ಸಕ್ಕೆ ಸೇರ್ಕೊಂಡೆ.
ಸಂಬಳ ಬೀದರ್ ಗಿಂತ ಹೆಚ್ಚಿತ್ತು .
ಜೊತೆ ಜೊತೆಗೆ ಕರೆಸ್ಪಾಂಡೆನ್ಸ್ ಅಲ್ಲಿ MA ಮಾಡೋಕೆ ಶುರು ಮಾಡ್ದೆ .
ಮೊದ ಮೊದಲು ದೀಪಾವರನ್ನ ಪ್ರತಿ ದಿನ ನೆನಪಿಸ್ಕೊತಾ ಇದ್ದ ನಾನು ಈಗ ಆಗೊಮ್ಮೆ ಈಗೊಮ್ಮೆ ನೆನ್ಯೋಕೆ ಶುರು ಮಾಡ್ದೆ. ಮುಂಚೆ ಪ್ರತಿ ದಿನ ನಾನೇ ಕಾಲ್ ಮಾಡಿ ಗಂಟೆ ಗಟ್ಟಲೆ ಮತ್ತಾಡ್ತಿದ್ದೆ.
ಈಗ ಅವ್ರಾಗೆ ಕಾಲ್ ಮಾಡಿದ್ರೆ ಮಾತ್ರ ಮಾತಾಡ್ತಾ ಇದ್ದೆ .
ಆದ್ರೂ ಸಹ ಪ್ರತಿ ದಿನ ಅವರಾಗೆ ಕಾಲ್ ಮಾಡ್ತಿದ್ರು.
ಕಾಲ್ ಮಾಡಿ ಮಾತಾಡ್ತ ಇರಲಿಲ್ಲ ....ಬದಲಿಗೆ ಜಗಳ ಆಡ್ತಿದ್ವಿ. ನಾನ್ ಜೊತೆ ಯಾಕ್ ಮತಾಡ್ತಿಲ್ಲ ಅಂತ .
ಅಂದು ನನ್ನ ಪ್ರಪಂಚವೇ ನೀನು ಅಂತ ಬಣ್ಣ ಬಣ್ಣದ ಮಾತಾಡಿದ್ದ ನಾನು ಅವರು ಸಿಕ್ಕ ಮೇಲೆ ನನ್ನ ಪ್ರಪಂಚದಲ್ಲಿ ಅವರನ್ನ ಮರೆತೇ ಹೋಗಿದ್ದೆ .
ಅಂದು ಕಲ್ಪನೆಯ ಕಾಮನಬಿಲ್ಲನ್ನು ತಂದು ಮುಂದಿಡ್ತಿದ್ದೆ, ಇಂದು ಕಲ್ಪಿಸಲು ಸಮಯವೇ ಇಲ್ಲ ಎಂದು ಉತ್ತರಿಸುತ್ತಿದ್ದೆ.
ದಿನೇ ದಿನೇ ಅವರ ಮೇಲಿದ್ದ ಪ್ರೀತಿ ಕರಗಿ ಸೋರೋಗ್ತಿತ್ತು .
ಮಾತಿನಲ್ಲೇ ಮೂರು ಲೋಕ ಸೃಷ್ಟಿಸಿ ಮನಸೆಳೆಯುತಿದ್ದ ನಾನು ಇಂದು ಮಾತನಾಡಲು ಮಾತೇ ಇಲ್ಲ ಎಂದು ಅವರಿಗೆ ಉತ್ತರಿಸುತ್ತಿದ್ದೆ .
ಯಾಕೋ.... ಮನಸ್ಸು ಮತಾಡೊದನ್ನೆ ನಿಲ್ಲಿಸು ಅಂತ ಹೇಳ್ತೀರೊ ಹಾಗಿತ್ತು . ದೀಪಾವರು ದಿನೇ ದಿನೇ ಮನಸ್ಸಿಂದ ಮಾಸಿ ಹೋಗ್ತಿದ್ರು ಅಲ್ಲಿ ಪ್ರೀತಿ ಅನ್ನೋ ಎಣ್ಣೆನಾ ಹಾಕೋಕೆ ನಾನು ಪ್ರಯತ್ನಾನೆ ಪಡ್ಲಿಲ್ಲ...!
ಒಂದ್ ದಿನ ಕೆಲಸದಲ್ಲಿದ್ದಾಗ ನನ್ನ ಅಧಿಕಾರಿ..... “ವಿಚಿತ್ರವಾಗಿ ಹೆಸರು ಇಡ್ಕೊಂದು ವಿಚಿತ್ರವಾಗಿ ಕೆಲ್ಸ ಮಾಡುದ್ರೆ ವಿಚಿತ್ರವಾಗಿ ಸಂಬ್ಳ ಕೊಡಬೇಕಾಗುತ್ತದೆ ಎಲ್ಲೆಲ್ಲಿಂದ ಬರ್ತಾರೊ ನಮ್ ಕರ್ಮಕ್ಕೆ” ಅಂತ.... ಹೇಳ್ದ.
ಬಹಳ ದಿನದಿಂದ ಒಂದಲ್ಲಾ ಒಂದು ಕಾರಣ ಹುಡುಕ್ತಾನೆ ಇದ್ದ ಜಾಗಳ ಮಾಡೊದಕ್ಕೆ .
ಆದ್ರೆ ಈ ತರ ಮತಾಡಿರ್ಲಿಲ್ಲ ಅದೇ ಸಮಯಕ್ಕೆ ದೀಪಾವರು ಪದೆ ಪದೆ ಫೋನ್ ಮಾಡ್ತಿದ್ರು ತುಂಬಾ ಸಿಟ್ಟು ಬಂತು . ಯಾಕೋ ಅವತ್ತು ಕೆಲಸದ ವಿಚಾರನೋ ಅಥವಾ ಪರಿಸ್ಥಿತಿಯ ವಿಚಾರನೋ...
ಅವರಿಗೆ “ನಿನ್ ಜೊತೆ ಮಾತಾಡೋಕೆ.. ಇಷ್ಟ ಇಲ್ಲ , ಗುಡ್ ಬಾಯ್” ಅಂತ ಮೆಸೇಜ್ ಹಾಕಿ ಫೋನ್ ನ ಸ್ವಿಚ್ ಆಫ್ ಮಾಡಿ ಬಿಟ್ಟೆ .
ಎರೆಡು ಮೂರು ದಿನ ಬಿಡುವಿಲ್ಲದೆ ಕೆಲ್ಸ ಮಾಡ್ದೆ .
ಅವನ ಕರ್ಮನೋ ನನ್ನ ಪುಣ್ಯನೋ ಅವನನ್ನೇ ಕೆಲಸದಿಂದ ತೆಗೆದು ಬಿಟ್ರು ...
ಅಂದು ರೂಮ್ ಗೆ ಬಂದೊನ್ಗೆ ಏನೋ ನೆಮ್ಮದಿ , ಎಲ್ಲಿಲದ ಸುಖ ನನ್ನ ಮನಸಲ್ಲಿತ್ತು .
ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ನೆಮ್ಮದಿಯ ನಿದ್ದೆ ಮಾಡಿದೆ. ಎದ್ದಾಗ ಏನೋ ಖುಷಿ ಸಂತೋಷ...... ಸಡನ್ ಆಗಿ ದೀಪಾವರ ನೆನಪಾಯ್ತು .
ಆಯ್ಯೋ ಫೋನ್ ಇನ್ನೂ ಸ್ವಿಚ್ ಆಫ್ ಆಗಿತ್ತು .
ಸ್ವಿಚ್ ಆನ್ ಮಾಡಿ ದೀಪ ಅವರ ಜೊತೆ ಮಾತಾಡ್ಬೇಕು , ಪ್ರತಿ ದಿನ ಫೋನ್ ಮಾಡ್ತಿದ್ರು ಮೂರ್ನಾಲ್ಕು ದಿನ ಆಯ್ತಲ ಪಾಪ ಬೇಜಾರಾಗಿರ್ತಾರೆ ಅಂತ ....ಮೊದ್ಲು ಅವ್ರಿಗೆ ಮೆಸೇಜ್ ಮಾಡ್ದೆ “ಹಾಯ್” ಅಂತ.
ಪಾಪ ನನ್ ಮೆಸೇಜ್ ಗೆ ಕಾಯ್ತಿದ್ರೇನೋ “ಮಾತಾಡ್ಬೇಕು” ಅಂತ ರಿಪ್ಲೇ ಬಂತು .
ನಾನು ಸಹ ಮತಾಡ್ದಲೆ ಮೂರ್ನಾಲ್ಕು ದಿನ ಆಗಿತ್ತು “ಸರಿ ಇವಾಗ ಮಾಡ್ಲ” ಅಂದೆ .
“ಬೇಡ ಸಂಜೆ ನಾನೆ ಮಾಡ್ತೀನಿ” ಅಂದ್ರು .
ಸರಿ ಅಂತ ಸುಮ್ನೆ ಆದೇ.
ಸಂಜೆ ಧಾರವಾಡದಲ್ಲಿ ನನ್ ರೂಮ್ ಮೇಲೆ ತಿಳಿ ಸಂಜೆಯ ಇಂಪಾದ ಹಕ್ಕಿಯ ಚಿಲಿಪಿಲಿ ನಾದದ ಜೊತೆ ...ಸೂರ್ಯ ಮುಳುಗ್ತಿರೋ ಸುಂದರ ದೃಶ್ಯ ನೋಡ್ತಾ ಮನಸಲ್ಲಿ ದೀಪಾವರಿಗೆ ತುಂಬಾ ನೋವ್ ಮಾಡ್ದೆ ಅನ್ಸುತ್ತೆ ಸಾರಿ ಕೇಳ್ಬೇಕು ಅಂತ ಅನ್ಕೊಳ್ತಾ ಗಾಳಿಗೆ ದೇಹವನ್ನ ಅಡ್ಡ ಇಟ್ಟು ನಿತ್ಕೊಂಡಿದ್ದೆ .
ದೀಪವಾರ ಫೋನ್ ಬಂತು , ರಿಸಿವ್ ಮಾಡ್ದೆ .
ಮಾತು ಗದ್ಗದಿತವಾಗಿತ್ತು ....ಅವರ ದ್ವನಿಯಲ್ಲಿ ಏರು ಪೀರಿತ್ತು ನನಗ್ ಗೊತ್ತಾಗ್ತಿತ್ತು ಅವ್ರು ಅಳ್ತಿದಾರೆ ಅಂತ. ನಾನೇ ಮೊದ್ಲು ಮಾತಾಡ್ದೆ “ದೀಪಾವ್ರೆ ಸಾರಿ” ಅಂದೆ.
ಅವ್ರು “ಸರ್! , ಎನ್ ಹೇಳ್ತಿದಿರಾ?” , “ಸಾರಿ.. ಯಾರಿಗೆ ಸರ್?... ನನಿಗಾ.. ಯಾಕೆ ಸರ್?” ಅಂದ್ರು.
ಅವರ ಮಾತಲ್ಲಿ ಸ್ಪಷ್ಟತೆ ಇರಲಿಲ್ಲ ದುಃಖದಲ್ಲೆ ಉಮ್ಮಳಿಸಿ ಮತಾಡ್ತಿದ್ರು .
ಅಳುನಾ ತಡೆದು ತಡೆದು ಮತಾಡ್ತಿದ್ರು .
ನಾನು “ದೀಪಾ , ಮೊದ್ಲು ಸಮಧಾನ ಆಗು ಯಾಕೆ ಸರ್! ಸರ್! ಅಂತಿದಿಯ” ಅಂದೆ .
ಅವರು “ಸರ್ ನನ್ನ ದೀಪಾ ಅನ್ಬೇಡಿ . ನೀವ್ ಆ ಯೋಗ್ಯತೆ ಕಳ್ಕೊಂಡಿದಿರ . ನೀವ್ ಯಾರ್ ಸರ್ ನಂಗೆ , ...
ನೀವ್ ಒಂದ್ ದಿನ ಆದ್ರೂ ನನ್ ಬಗ್ಗೆ ನನ್ನ ಫ್ಯಾಮಿಲಿ ಬಗ್ಗೆ ಕೇಳಿದಿರಾ ಸರ್ , ಇಲ್ಲ..! ನಿಮಿಗ್ ಅದ್ ಯಾವುದು ಬೇಕಾಗಿಲ್ಲ . ನಿಮಿಗ್ ಬೇಕಾಗಿದ್ ಒಂದು ನನ್ನ ದೇಹ ... ಅದು ನಿಮಿಗ್ ಸಿಕ್ಕುದ್ ಮೇಲೆ ಮತ್ಯಾಕೆ ಅಲ್ವಾ? ಸರ್ ”ಅಂತ ಹೇಳ್ತಾ ಬಿಕ್ಕಳಿಸ್ತಿದ್ಲು .
ನಾನು “ದೀಪ ಪ್ಲೀಸ್” ಅಂತ ಹೇಳೋಕೆ ಹೋದೆ ನನ್ನ ಮಾತನ್ನ ಅಲ್ಲಿಗೆ ತಡೆದ ಅವರು.. “ಸರ್ ನಾನ್ ಪೂರ್ತಿ ಮಾತಾಡೋವರ್ಗೂ ಸುಮ್ನಿದ್ಬಿಡಿ ” ಅಂದ್ರು .
ಮತ್ತೆ ಅವರೇ ಮಾತ್ ಶುರು ಮಾಡಿದ್ರು......
“ ನನ್ ಗಂಡ ನನ್ ಜೊತೆ ಚೆನ್ನಾಗ್ ಇದ್ದಿದ್ರೆ ನಾನ್ ನಿಮ್ಮುನ್ ಯಾಕ್ ಸಾರ್ ನನ್ ಹತ್ರ ಬಿಡ್ಕೊತಿದ್ದೆ . ನನ್ನ ಮದ್ವೆ ಆದಾಗ ನನ್ ವಯಸ್ಸೆಷ್ಟು ಗೊತ್ತಾ ಸಾರ್ .
ಬರಿ ಹದಿನಾರು..! ನಮ್ ಅಪ್ಪ ಅಮ್ಮನ್ನ ನಾನ್ ಇವತ್ತಿಗೂ ದೂಶಿಸ್ತಿನಿ ನನ್ ಜೀವ್ನನ ಹೀಗ್ ಮಾಡಿದುಕ್ಕೆ. ನಮ್ ಅಮ್ಮನ ಜೊತೆ ನಾನ್ ಮಾತೆ ಆಡಿರ್ಲಿಲ್ ಎಷ್ಟೋ ತಿಂಗ್ಳು . ಸ್ಕೂಲ್ ಗೆ ಹೋಗ್ತಿದ್ದೊಳ್ನ ಕರ್ಕೊಂಡೋಗ್ ಮದ್ವೆ ಮಾಡ್ಸಿದ್ರು.
ಸರ್ ನನ್ ಮದ್ವೆ ಮಾಡ್ಸುದ್ರಲ್ಲ ಅಷ್ಟು ಜನ ..ಅಷ್ಟು ಜನದಲ್ಲಿ ನನ್ನ ಒಬ್ರೇ ಒಬ್ರು ಸಹ ಕೇಳಿಲ್ಲ, ನಂಗ್ ಈ ಮದ್ವೆ ಇಷ್ಟನ ಅಂತ . ನನ್ನ ಅಣ್ಣಂದ್ರು ಸಹ ಕೇಳಿಲ್ಲ . ನಮ್ ಅಮ್ಮ , ನಮ್ ಅಪ್ಪ ...ಅವ್ರ ಬಿಡಿ ನನ್ನ ಮದ್ವೆ ಆಗೊನು ಸಹ ನನ್ನ ಒಂದೇ ಒಂದ್ ಮಾತು ಕೇಳಿಲ್ಲ ಸರ್.
ನನಿಗ್ ಜೀವ್ನ ಅಂದ್ರೆ ಏನು ಅಂತ ಗೊತ್ತಿಲ್ಲದ ವಯಸ್ಸಲ್ಲಿ ಮದ್ವೆ ಮಾಡ್ಸಿ ಗಂಡನ ಮನೆಗೆ ಕಳ್ಸಿದ್ರು ಸರ್ ನನ್ನ .
ನನ್ನ ಜೀವನದಲ್ಲಿ ಇದುಕಿಂತ ದೊಡ್ಡು ಶಾಪ ಬೇರೆದ್ ಎನ್ ಇದೆ . ಹದಿನಾರು ವರ್ಷಕ್ಕೆ ಮದ್ವೆ , ಹದಿನೆಂಟಕ್ಕೆ ಎರೆಡ್ ಮಕ್ಕಳು . ಗ್ಯಾಪ್ ಸಹ ಕೊಡಲಿಲ್ಲ . ಒಂದ್ ತಿಂಗಳು ಬ್ಲೀಡಿಂಗ್ ಆಗಿ ನರಕ ನರಕ ನೋಡಿದೀನಿ..! ಸರ್ .
ನಂಗ್ ಎರಡನೇ ಮಗು ಆದಾಗ ನನ್ ಮಾವ ಬಂದಿದ್ದ. ನೀನೇ ಒಂದ್ ಮಗು ನಿನಿಗ್ ಏರೆಡ್ ಮಗೂನ ಅಂತ ಕಣ್ಣೀರಾಕ್ಬಿಟ ಸರ್ .
ನನ್ ಜೀವನದಲ್ಲಿ ಎನ್ ಆಗ್ತಿದೆ ಅಂತ ಗೊತ್ತಾಗೊದ್ರೊಳಗೆ ಎಲ್ಲಾ ಆಗೊಗಿತ್ತು .
ನನ್ ಎರಡನೇ ಮಗು ಆದ್ಮೇಲೆ ನಮ್ ಅತ್ತೆ ಪೂರ್ತಿ ನಮ್ ವಿರುದ್ಧ ಆಗೊದ್ರು ಎಂತೆಂಥ ಮಾತಾಡಿದರೆ ಗೊತ್ತಾ ಸರ್ . ನನ್ ಮಕ್ಳುನ್ನ ದಾಡ್ಕೊಂಡ್ ಓಡಾಡಿದರೆ . ಉಟ್ ಬಟ್ಟೆಲ್ ನಮ್ಮುನ್ನ ಮನೆ ಬಿಟ್ ಕಳುಸ್ಬಿಟ್ರು ನೋಡ್ಕೋ ಹೋಗಿ ನಿಮ್ ಜೀವ್ನನ ಅಂತ . ಹೇಗ್ ಬದ್ಕಿದಿನಿ ಅನ್ನೋ ಸಣ್ಣ ಊಹೇ ಸಹ ನಿಮ್ಗಿಲ್ಲ ಸರ್ . ನಮ್ ಪಕ್ಕುದ ಊರು ಸ್ವಾಮಿಗಳು ಎಷ್ಟು ನೆನಪ ಮಾಡ್ಕೋತಿನಿ.... ಅವ್ರ ಕಾಲ್ ಅತ್ರ ನನ್ ಚಿಕ್ ಮಗೂನ ಇಟ್ಟು ಬಿಕ್ಕಿ ಬಿಕ್ಕಿ ಅತ್ತಿದಿನಿ ಸರ್. ಸೀಮೆ ಎಣ್ಣೀಲಿ ಅಡ್ಗೆ ಮಾಡಿದೀನಿ ಸರ್ .
ಎಂತೆಂಥ ದಿನಗಳನ್ನ ಕಳ್ದು ಸತ್ತು ಬದ್ಕಿದಿನಿ .
ನನ್ ಗಂಡ ಅನ್ನುಸ್ಕೊಂಡೊನು ನನ್ನ ಒಂದ್ ದಿನ ಪ್ರೀತಿ ಇಂದ ಮತ್ತಾಡ್ಸಿಲ್ಲ . ಅವ್ನಾಗೆ ನಂಗೆ ಒಂದ್ ಬಟ್ಟೆ ಸಹ ತಂದ್ ಕೊಟ್ಟಿಲ್ಲ .
ನಾನಾಗೆ ದುಡ್ಯೋದ್ ಕಲ್ತು ದುಡ್ದು ಇವತ್ ಇಲ್ಲಿ ವರ್ಗು ಬಂದಿದೀನಿ ಸರ್. ಹೇಗೆಲ್ಲ ನರ್ಳಿದಿನಿ,
ಎಷ್ಟು ಕಣ್ಣಿರಾಕಿದಿನಿ ಅಂತ ನನಿಗ್ ಮಾತ್ರ ಗೊತ್ತು ಸರ್. ಇವತ್ತು ಈ ಕ್ಷಣ ಕೂಡ ನಮ್ ಮನೆ ಓನರ್ ಬಂದು ಮನೆ ಬಿಲ್ ಕೇಳೋದು ನನ್ ಗಂಡನಲ್ಲ ನನ್ನ. ಬ್ಯಾಂಕ್ ಅಲ್ ಒಂದ್ ಸಣ್ಣ ಕೆಲ್ಸ ಇದ್ರು ಅವ್ನಿಗ್ ಗೊತ್ತಾಗಲ್ಲ . ನನ್ನ ಕರ್ಕೊಂಡ್ ಹೋಗ್ತಾನೆ. ಅವ್ನ್ ಜೊತೆ ನಂಗೆ ಹೊರಗ್ ಹೋಗೋಕು ಅಸಯ್ಯ ಆಗುತ್ತೆ . ಯಾಕ್ ಗೊತ್ತಾ ಸರ್..... ಒಂದ್ ಹೋಟೆಲ್ ಗೆ ಹೋದ್ರು ಕೈ ತೊಳಿಯೋ ಜಾಗದಲ್ಲಿ ಬಾಯ್ ತುಂಬಾ ತಂಬಾಕ್ ಆಕೊಂಡು ಉಗ್ದು.. ಥೂ... ಬಿಡಿ ಸರ್ . ನನಗೆ ಹೀಗ್ ಅನ್ಸೊವಾಗ ಇನ್ನ ನೊಡೊರಿಗೇಗ್ ಅನ್ನುಸ್ಬೇಕು . ದೇವರು ನನ್ ಜೀವ್ನನ ಬರಿ ನರಕದಲ್ಲಿ ಕಳ್ಯೊ ಹಾಗ್ ಮಾಡಿಬಿಟ್ಟ . ನಾನ್ ಖುಷ್ಯಾಗಿರೋದು ಹೊರಗೆ ಮಾತ್ರ ಸರ್ , ಒಳಗಲ್ಲ...
ಅವ್ನ್ ನನ್ ಮೇಲ್ ಎಷ್ಟ್ ಸಲ ಕೈ ಮಾಡಿದನೋ ಲೆಕ್ಕಾನೆ ಇಲ್ಲ . ಅವ್ನ್ ಮೇಲೆ ನಂಗೆ ಪ್ರೀತಿ ಅನ್ನೋದು ಯಾವತ್ತೂ ಹುಟ್ಟಲ್ಲ . ಅವ್ನೆನಾದ್ರೋ ನನ್ ಜೊತೆ ಮಲ್ಗೊಕ್ ಬಂದ್ರೆ.... ಅದು ಶವದ್ ಜೊತೆ ಸಂಸಾರ ಮಾಡ್ದಂಗೆ ಸರ್.
ಇಷ್ಟೆಲ್ಲಾ ಆದ್ಮೇಲು ನಾನು ನನ್ ಮಕ್ಳುನ್ನ ಸಾಕೊಂಡ್ ಸಮಾಜ್ದಲ್ಲಿ ಯಾರು ನನ್ ಕಡೆ ಬೆರ್ಳ್ ಮಾಡಿ ಮಾತಾಡಬಾರ್ದು ಆ ತರ ಬತ್ಕಿದಿನಿ ಸರ್ .
ಇಷ್ಟೆಲ್ಲಾ ಆಗಿ ನನ್ ಜೀವನದಲ್ಲಿ ಆಸೆಗಳೆ ಸತ್ತೋಗಿತ್ತು.
ಪ್ರೀತಿ ಅಂದ್ರೆ ಏನು ಅಂತ ಸರ್ಯಾಗ್ ನೋಡೆ ಇರಲಿಲ್ಲ..... ಆ ಟೈಮ್ ಅಲ್ಲಿ ನಂಗೆ ಪ್ರೀತಿನ ಪರಿಚಯ ಮಾಡಿದ್ದು ನೀವು ಸರ್.
ನಿಮ್ ಜೊತೆ ಮಾತಾಡ್ಬೇಕಾದಾಗೆಲ್ಲ ನನ್ ಒಳಗ್ ಎಂಥ ನೋವ್ ಇದ್ರು . ನಿಮ್ ಮಾತ್ ಕೇಳಿ ಖುಷಿಯಾಗ್ತಿದ್ದೆ .
ನೋವೆಲ್ಲ ನಿಮ್ ಮಾತುಗಳಿಂದ ಮರ್ತೋಗ್ತಿತ್ತು ಸರ್ . ನಿಮ್ ಜೊತೆ ಮಾತಾಡುವಾಗೆಲ್ಲ ದೇವ್ರಿಗೆ ಎಷ್ಟು ಥ್ಯಾಂಕ್ಸ್ ಹೇಳಿದಿನೋ ಅದ್ ನಾನಿಗ್ ಗೊತ್ತು .
ನನ್ ಜೀವನದಲ್ಲೂ ದೇವ್ರು ಸ್ವಲ್ಪ ಸಮಯಕ್ಕಾದ್ರೂ ಪ್ರೀತಿ ಕೊಟ್ನಲ್ಲ ಅಂತ ತುಂಬಾ ಖುಷಿಯಾಗಿದ್ದೆ ಸರ್ .
ಆದ್ರೆ ಅದೇ ಪ್ರೀತಿ ಇಷ್ಟೊಂದು ನೋವ್ ಕೊಡುತ್ತೆ ಅಂತ ಗೊತ್ತಾಗ್ಲಿಲ್ಲ ಸರ್ . ನಾನ್ ತಪ್ಪ್ ಮಾಡಿಬಿಟ್ಟೆ..... ಸಾಕು ಸರ್ .
ಜೀವನದಲ್ಲಿ ಪ್ರತಿಯೊಬ್ರು ಬರಿ ನೋವೇ ಕೊಟ್ರೆ ಹೇಗ್ ತಡ್ಕೊಳ್ಳಿ .
ಆಮೇಲೆ ಸರ್... ಮತ್ತೆ ನೀವು ಟೆನ್ಶನ್ ತಗೊಳಾಕೆ ಹೋಗ್ಬೇಡಿ. ನಾನು ಮತ್ತೆ ನಿಮಗೇನು ತೊಂದ್ರೆ ಮಾಡಲ್ಲ , ಯಾವತ್ತೂ ಮಾಡಲ್ಲ , ನೀವ್ ನನಿಗ್ ಇಷ್ಟ್ ಪ್ರೀತಿ ತೋರ್ಸುದ್ರಲ . ಸಾಕು ಸರ್ , ಹೊಟ್ಟೆ ತುಂಬೊಯ್ತು , ತೃಪ್ತಿ ಆಗಿದೆ ಸರ್...........
ಅಮ್ಮ ಯಾಕೊ ತುಂಬ ನೆನ್ಪಾಗ್ತಿದಾಳೆ ಸರ್ ನಂಗೆ . ನಮ್ಮಮ್ಮುನ ತಬ್ಕೊಂಡು ಜೋರಾಗಿ ಅಳ್ಬೇಕು ಅನ್ನಿಸ್ತಿದೆ . ನಮ್ಮಮ್ಮುನ್ ತೊಡೆ ಮೇಲೆ ಮತ್ತೆ ಮಲುಗ್ಬೇಕು ಅನ್ನಿಸ್ತಿದೆ ...
ಸಾಕಾಗೋಯ್ತು ಸರ್ ಜೀವನ .
ಸರ್ ನಿಮಿಗ್ ಗೊತ್ತಾ ನನಿಗೆ ಇನ್ನೂ ಇಪ್ಪತ್ನಾಲಕ್ ವರ್ಷ .
ಯಾವ ಜನ್ಮದಲ್ಲಿ ಏನ್ ಪಾಪ ಮಾಡಿದ್ನೋ , ಎಲ್ಲಾ ಒಂದೇ ಸಲ ತೀರುಸ್ಕೊತಿದಾನೆ ಸರ್ ಭಗವಂತ .
ಈ ಕ್ಷಣದಿಂದ ನಿಮ್ ಜೀವನದಲ್ಲಿ ಮತ್ತೆ ಯಾವತ್ತೂ ನಾನ್ ಬರಲ್ಲ ಸರ್ . ನೀವೂ ಕೂಡ ನನ್ ಬಗ್ಗೆ ಯೋಚ್ನೆ ಮಡೊಕೊಗ್ಬೇಡಿ .
ಆದ್ರೂ ಇದುನೆಲ್ಲ ನಿಮ್ ಹತ್ರ ಯಾಕ್ ಹೇಳ್ತಿದೀನಿ ಗೊತ್ತಾ ಸರ್ . ಭಯ ಸರ್ , ನನ್ ಬಗ್ಗೆ ನಿಮಗೆ ಹೇಗೆಲ್ಲ ಯೋಚ್ನೆ ಬಂದಿರುತ್ತೆ ಅಂತ ಭಯ , ಯಾಕಂದ್ರೆ ನಾನು ಮಯ್ಯ್ ಮಾರ್ಕೊಳೋಳ್ ಅಲ್ಲ .
ಸರ್ ಆದ್ರೂ ಒಂದ್ ಮಾತೇಳ್ತಿನಿ... ಪ್ರೀತಿ ಅಂದ್ರೆ ಬರಿ ದೇಹ ಒಂದಾಗೊದಲ್ಲ ಸರ್ . ಅಲ್ಲಿ ಮನಸ್ಸು ಅನ್ನೋದು ಇರುತ್ತೆ ಕೋಟಿ ಕೋಟಿ ನಂಬಿಕೆ ಇರುತ್ತೆ ..
ಥಾಂಕ್ಸ್ ಸರ್ . ನಾನ್ ಕೇಳ್ದಲೆ ನಂಗೆ ಬಹಳ ಪ್ರೀತಿ ಕೊಟ್ಟಿದಿರ ನನ್ ಅದನ್ನ ಎಷ್ಟ್ ಜನ್ಮ ಎತ್ತಿ ಬಂದ್ರು ತೀರ್ಸೊಕಾಗಲ್ಲ . ನಿಮ್ ಪ್ರೀತಿಗೆ ನಾನ್ ಚಿರ ಋಣಿ ಸರ್ ಮತ್ತೆ ನಿಮಗೆ ಯಾವತ್ತೂ ತೊಂದ್ರೆ ಕೊಡಲ್ಲ . ಬಾಯ್ ಸರ್ . ಬಾಯ್ ಕಣೋ ಅವ್ಯಕ್ತ” .
ಫೋನ್ ಕಟ್ಟಾಗಿ ಬಹಳ ಹೊತ್ತಾಗಿತ್ತು . ಇಡೀ ದೇಹದಲ್ಲಿ ಕಣ್ಣೀರೊoದು ಬಿಟ್ಟು ಬೇರೆಲ್ಲಾ ಮೌನವಾಗಿತ್ತು. ಬಾಯೊಂದು ಬಿಗಿದ ಬೀಗ ಆಗಿತ್ತು . ದ್ವನಿಯೆ ಹೊರ ಬರದಷ್ಟು ಕ್ರೂರಿ ಆಗಿದ್ದೆ ನಾನು .
ಕಷ್ಟ ಪಟ್ಟು ವಾಸ್ತವಕ್ಕೆ ಬಂದೆ , ಕಣ್ಣೊರೆಸಿಕೊಂಡು ಮಹಡಿ ಇಂದ ಕೆಳಗಿಳಿದೆ .
ರೂಮ್ ಗೆ ಹೋದೊಡನೆ ಒಂದ್ ಲೋಟ ನೀರ್ ಕುಡ್ದು ಎದೆ ಮುಟ್ಟಿ ನೋಡ್ತೀನಿ ಎದೆಯ ಬಡಿತ ತಾರಕಕ್ಕೇರಿತ್ತು
ಕಣ್ಣೀರು ನಿಲ್ತಾನೆ ಇಲ್ಲ ಜೋರಾಗಿ ಅಳು ಸಹ ಬರ್ತಿಲ್ಲ.
ಏನ್ ಮಾಡ್ಲಿ ಅಂತ ಯೋಚಿಸುತ್ತಾ ದೀಪಾ ಅವರಿಗೆ ಫೋನ್ ಮಾಡಿ ಹೇಗಾದರೂ ಸಮಾಧಾನ ಮಾಡಲೇಬೇಕು, ಮಾಡೆ ಮಾಡ್ತೀನಿ...! ಅಂತ ಫೋನ್ ಹುಡುಕ್ತೀನಿ ಸಿಕ್ತಾ ಇಲ್ಲ . ಫೋನ್ ಮಹಡಿ ಮೇಲೆ ಬಿಟ್ಟಿದ್ದೀನಿ...... ಓಡಿಹೋದೆ ಫೋನ್ ತಗೊಂಡು ಅವರಿಗೆ ಕಾಲ್ ಮಾಡ್ದೆ ನಂಬರ್ ಸ್ವಿಚ್ ಆಫ್ ಬಂತು . ಕೈ ನಡುಗೊದಕ್ಕೆ ಶುರುವಾಯಿತು ಕಣ್ಣೀರ್ನ ಹೊರುಸ್ಕೊಂಡು.... ಏನಾಗಲ್ಲ ಏನಾಗಲ್ಲ ಅಂತ ಸಮಾಧಾನ ಮಾಡ್ಕೊಂಡು... ಸುಕನ್ಯಾಗೆ ಫೋನ್ ಮಾಡ್ತೀನಿ ಅವಳದು ನಾಟ್ ರೀಚೆಬಲ್ .
ಇವಾಗ ನಿಜವಾಗ್ಲೂ ಜೋರಾಗಿ ಅಳಬೇಕು ಅನ್ನಿಸ್ತು ...ಹೃದಯ ಒಡೆದು ಹೋಗೊತರ ಅಳಬೇಕು , ಕಿರುಚಬೇಕು ಅನಿಸಿದ್ರೂ.... ಏದುಸಿರು ಬಿಡ್ತಾ ಸಮಾಧಾನ ಮಾಡಿಕೊಳ್ಳೋಣ ಅನ್ಕೊಂಡೆ ಆಗಲಿಲ್ಲ... ಹೃದಯ ಹೊಡೆದು ದುಃಖ ಉಮ್ಮಳಿಸಿ ಹೊರಗೆ ಬಂತು .
ಕತ್ತಲೆಯಲ್ಲಿ ಅತ್ತು ಅತ್ತು ಸುಸ್ತಾಗಿ ಹೋದೆ , ಹೇಗೆ ನಿದ್ದೆ ಬಂತೋ ಗೊತ್ತಿಲ್ಲ ಕಣ್ಣುಬಿಟ್ಟಾಗ ಸೂರ್ಯ ನೆತ್ತಿ ಮೇಲಿದ್ದ . ಪಕ್ಕದಲ್ಲೇ ಇದ್ದ ಫೋನ್ ನೋಡ್ತೀನಿ.. ಸ್ವಿಚ್ ಆಫ್ ಆಗಿತ್ತು .
ಕೆಳಗೆ ಹೋಗಿ ಚಾರ್ಜ್ಗೆಗೆ ಹಾಕಿ ಮುಖ ತೊಳ್ಕೊಂಡು ಬಂದೆ .
ರಾತ್ರಿ ಏನೂ ತಿಂದಿಲ್ಲ.. ಹೊಟ್ಟೆ ನಾನಿದ್ದೀನಿ ಅಂತ ಹೇಳ್ತಾ ಇತ್ತು .
ಪರ್ಸಲ್ಲಿ ಇರೋದು ತಗೊಂಡು ಹೋಟೆಲ್ ಗೆ ಹೋಗಿ ಊಟ ಮಾಡ್ಕೊಂಡು ಬಂದೆ. ಫೋನ್ ತಗೊಂಡು ದೀಪಾವರಿಗೆ ಕಾಲ್ ಮಾಡ್ದೆ.. ಸ್ವಿಚ್ ಆಫ್ ಬಂತು .
ಸುಕನ್ಯಾಗೆ ಮಾಡ್ದೆ ...ನಾಟ್ ರೀಚಬಲ್ .
ದೇವರೇ ನನ್ನ ಸಣ್ಣ ತಪ್ಪಿಗೆ ಎಷ್ಟು ದೊಡ್ಡ ಶಿಕ್ಷೆನಾ ಅಂತ ಕೇಳ್ತಾನೆ ಇದ್ದೆ .
ಸುಕನ್ಯಾಳ ಫೋನಿಗೆ “ಕಾಲ್ ಮಿ” ಅಂತ ಮೆಸೇಜ್ ಹಾಕ್ತಾನೆ ಇದ್ದೆ .
ಮೆಸೇಜ್ ಹೋಗುತ್ತಿರಲಿಲ್ಲ . ಕೆಲಸ ಮಾಡೋಕೆ ಶಕ್ತಿ ಇಲ್ಲದವನಾಗಿ ಹೋದೆ . ಹೀಗೆ ಎರಡು ಮೂರು ದಿನಗಳು ದೀಪಾವರ ಗುಂಗಲ್ಲೆ ಕಳೆದೆ .
ಒಂದು ವಾರದಲ್ಲಿ ನನ್ನ M A ಎಕ್ಸಾಮ್ ಇತ್ತು . ಸುಕನ್ಯಾಳಿಗೆ ಅವತ್ತು ಸಹ “ಕಾಲ್ ಮಿ” ಅಂತ ಮೆಸೇಜ್ ಹಾಕಿ... ಓದೋದ್ರು ಕಡೆ ಗಮನ ಹರಿಸಲೇ ಬೇಕಾಯಿತು. ನಾನು ಪಾಸಾದ್ರೆ , ನಮ್ಮ ಚಿಕ್ಕಪ್ಪನ ಇನ್ಪ್ಲುಯನ್ಸ್ ಮೇಲೆ ನನಗೊಂದು ಗೌರ್ಮೆಂಟ್ ಕೆಲಸ ಸಿಗೋದು ಪಕ್ಕ...!
ಎಕ್ಸಾಮ್ ತಲೆಬಿಸಿಯಲ್ಲಿ ನನ್ನ ಮುಂದಿನ ಒಂದು ತಿಂಗಳು ಹಾಗೆ ಕಳೆದು ಹೋಯ್ತು .
ಒಂದಿನ ಒಂದು ಅನ್ನೋನ್ ನಂಬರ್ ಇಂದ ಫೋನ್ ಬಂತು ರಿಸೀವ್ ಮಾಡಿ “ಹಲೋ” ಅಂದೆ .
ಆ ಕಡೆಯಿಂದ “ಅವ್ಯಕ್ತ .. ನಾನು ಸುಕನ್ಯಾ ” ಅಂದಳು ನನಗೆ ಖುಷಿಯ ಪರಕಾಯ ಪ್ರವೇಶ .
ನಾನು “ಹೇಗಿದ್ದೀಯ ...ಸುಕನ್ಯಾ ಇಷ್ಟು ದಿನ ಕಾಲ್ ರಿಸೀವ್ ಮಾಡ್ತಿರಲಿಲ್ಲ ಎಲ್ಲೋಗಿದ್ದೆ , ಹೇಗಿದ್ದಾರೆ ನಿಮ್ಮ ದೀಪ ಮ್ಯಾಮ್... ನಾನು ಅವರ ಜೊತೆ ಮಾತಾಡಬೇಕು ಒಂದು ಸಲ” ಅಂದೆ .
ಅವಳು ಏನೂ ಮಾತಾಡ್ಲಿಲ್ಲ...
“ಹಲೋ ಸುಕನ್ಯಾ” ಅಂದೆ .
“ಅವ್ಯಕ್ತ, ಮ್ಯಾಮ್ ಹೋಗ್ಬಿಟ್ರು ಕಣೋ” ಅಂದ್ಲು .
ಅವಳ ಮಾತಿನ ಬಾಣ ನನ್ನೆದೆಯನ್ನು ಸೀಳಿ ಹೊರಬಂದಿತ್ತು . ದೇಹಕ್ಕೆ ಬೆಂಕಿ ಬಿದ್ದ ಅನುಭವವಾಯ್ತು.
ಉಸಿರಾಡೋಕೆ ಕಷ್ಟ ಆಗ್ತಿದೆ ಅನ್ನುಸ್ತು .
ಬಹಳ ಕಷ್ಟಪಟ್ಟು ಕೇಳ್ದೆ “ಯಾವಾಗ”.
“ಮೂರು ದಿನ ಆಯ್ತಂತೆ... ನನಗೆ ವಿಷಯ ಇವಾಗ್ ಗೊತ್ತಾಯ್ತು” ಅಂದ್ಲು.
ಅವಳ ಧ್ವನಿಯಲ್ಲಿ ತನ್ನನ್ನೇ ಕಳೆದುಕೊಂಡ ವಿಚಿತ್ರ ವೇದನೆಯಿತ್ತು...
“ ಹೇಗಾಯಿತು” ಅಂದೆ .
ಮಾತಾಡೋಕೆ ಆಗದೆ , ಉಸಿರಾಡೊಕು ಆಗದೆ ...ಕಷ್ಟಪಟ್ಟು ಉಗುಳು ನುಂಗುತ್ತಾ ಹೇಳಿದ್ಲು...“ ಎರಡು ವಾರ ಆಗಿತ್ತು ಕಣೋ , ಮನೆ ಖಾಲಿ ಮಾಡಿಕೊಂಡು ಹೋದರು . ಊರಲ್ಲೇ ಇರೋಣ ಅಂತ ಅವರ್ ಮನೆಯವರು ಹೇಳುತ್ತಿದ್ರಂತೆ . ಅಲ್ಲಿ ನನಗೆ ಇರೋಕಾಗಲ್ಲ ಬಾ ವಾಪಸ್ ಹೋಗೋಣ ಅಂತ ಮ್ಯಾಮ್ ಕರುದ್ರಂತೆ.. ಆಮೇಲೆ ಏನೋ ಜಗಳ ಆಗಿ ಟ್ಯಾಬ್ಲೆಟ್ಸ ತಗೋ ಬಿಟ್ರಂತೆ ಕಣೋ ಅವರು... ಊರಲ್ಲಿ ಅವರನ್ನ ಚೆನ್ನಾಗಿ ನೋಡ್ಕೋತಿರಲಿಲ್ಲವಂತೆ , ತವರುಮನೆಯಲ್ಲಿ ಅವರ ಅಣ್ಣಂದ್ರು ಎಲ್ಲಾ ಅಷ್ಟಕಷ್ಟೇ ಅಂತೆ . ಯಾಕ್ ಹೀಗೆ ಮಾಡ್ಕೋ ಬಿಟ್ಟ್ರೊ .
ನನ್ನತ್ರ ಬಂದಿದ್ರು ಸಾಕಾಗಿತ್ತು.. ನಾನು ಅವರನ್ನ ರಾಣಿ ತರ ನೋಡ್ಕೋತಿದ್ದೆ . ಅವರು ನನಗೆ ನಮ್ಮಮ್ಮನ ತರಾನೇ.. ಅವರಿಗೆ ನಾನು ಸಹ ನೆನಪು ಬರಲಿಲ್ವಾ...” ಅಂತ ಹೇಳ್ತಾ ಬಿಕ್ಕಳಿಸಿ ಬಿಕ್ಕಳಿಸಿ ಅಳಲು ಶುರು ಮಾಡಿದ್ಲು .
ಸುಕನ್ಯಾ ಏನೋ ಅವಳ ನೋವನ್ನ ನನ್ನತ್ರ ಹೇಳಿಕೊಂಡ್ಲು. ನಾನು ನನ್ನ ನೋವನ್ನ ಯಾರತ್ರ ಹೇಳಿಕೊಳ್ಳಿ...?
ಎಲ್ಲಾದಕ್ಕಿಂತ ಹೆಚ್ಚಾಗಿ ನನ್ನನ್ನೇ ನಾನು ಕೊಲ್ಲೋ ಅಷ್ಟು ಕೋಪ ಬರುತ್ತಿತ್ತು .
ಒಂದು ಪಕ್ಷ ಇವತ್ತು ದೀಪಾವರು ನಂಜೊತೆ ಚೆನ್ನಾಗಿದ್ದಿದ್ದರೆ ಈ ಕೆಲಸಕ್ಕೆ ನಿಜವಾಗಲೂ ಕೈ ಹಾಕ್ತಿರ್ಲಿಲ್ಲ .
ಜೀವನದ 25 ಭಾಗ ಮಾತ್ರ ನೋಡಿದ್ದ ಅವರು ಮಿಕ್ಕೆಲ್ಲ ಭಾಗದಲ್ಲೂ ನನ್ನ ಪಾಪಿ ಮಾಡಿದ್ರು.
ಯಾರನ್ನು ಶಪಿಸಬೇಕು ಎಂದು ತಿಳಿಯದಷ್ಟು ಮಂಕಾಗಿ ಹೋದೆ . ಸೃಷ್ಟಿಕರ್ತನಿಂದ ಹಿಡಿದು ಇಲ್ಲಿಯವರೆಗೆ ಅವರೊಡನೆ ಇದ್ದ ಇಡೀ ಸಮಾಜವೇ ಪಾಪಿಗಳ ಗುಂಪೆಂದು ಅನಿಸಿತು... ಆ ಗುಂಪಿಗೆ ನಾಯಕನ ಪದವಿ ಆಕೆ ಈಗ ನನಗೆ ಕೊಟ್ಟು ಹೋದಳು .
ನನ್ನ ದೀಪ ನಿಜಕ್ಕೂ ಪ್ರೀತಿಯ ಎಣ್ಣೆಯಿಲ್ಲದೆ ಆರಿ ಹೋದಳು.
ಅವಳು ಹೋಗಿ 2 ವರ್ಷ ಆದ್ಮೇಲೆ ನನಗೆ ಆಕಾಶವಾಣಿ ಕೇಂದ್ರದಲ್ಲಿ ಗೌರ್ಮೆಂಟ್ ಕೆಲಸ ಆಯ್ತು ಕೆಲಸ ಸಿಕ್ಕ ಆರು ತಿಂಗಳಿಗೆ ಸುಂದರವಾದ ಸಭ್ಯತೆ ಮತ್ತು ಮಾತಿನಲ್ಲಿ ನನ್ನನ್ನೇ ಮೀರಿಸುವ ಲಕ್ಷಣವಾದ ಹುಡುಗಿ ಗಾಯತ್ರಿ ಅನ್ನೋಳ್ ಜೊತೆ ಮದುವೇನೂ ಆಯಿತು ಈ ಸಣ್ಣ ಸಂಸಾರದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುವ ಒಂದು ಸಣ್ಣ ಗೊಂಬೆ ಬಂದಿದೆ ಅವಳೇ ನನ್ನ ದೀಪ . ನನ್ನ ಮಗಳು .
ಯಾವಾಗಲೂ ನನ್ನ ಎದೆ ಮೇಲೆ ಮಲ್ಕೊಂಡು ನನ್ನ ಬಂಗಾರ ಅಂತ ಕರೆಯೋಕೆ ಬರಲಿಲ್ಲ ಅಂದ್ರು ಮುದ್ದುಮುದ್ದಾಗಿ ನನ್ನ ಬಗಾಲ ಅಂತ ಕರೀತಾ ತಬ್ಬಿ ಮಲ್ಕೋತಾಳೆ ನನ್ನ ಮುದ್ದು ಮಗಳು ದೀಪ...!
ರಮ್ಯರೂಪತರಂಗದಕೃತಿಕಾವ್ಯ
ಶಿವ ಕುಮಾರ್.
Comments
Post a Comment